ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ

0
17

ಕಲಬುರಗಿ: ಕ್ರೀಡೆ ದೇಹ ಮತ್ತು ಮನಸ್ಸು ಸದೃಢವಾಗಿರುವಂತೆ ಪೂರಕ ಪಾತ್ರ ನಿರ್ವಹಿಸುತ್ತದೆ ಎಂದು ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಪಟು ಸಿದ್ದಣ್ಣ ಸಾಹುಕಾರ್ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಪರಿವಾಳ ಹಾರಿಬಿಡುವುದರ ಮೂಲಕ ಪೋಲಿಸ್ ವಾರ್ಷಿಕ ಕ್ರೀಡಾಕೂಟ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಯೂ ಸೇರಿ ಯಾವುದೇ ವಿದ್ಯೆಯಿಂದ ನಮಗೆ ಲಾಭ ಲಭಿಸಬೇಕಾದರೆ ನಿರಂತರ ಹಾಗೂ ಶಿಸ್ತುಬದ್ಧ ಪ್ರಯತ್ನವಿರಬೇಕು ಕ್ರೀಡೆಯು ನಮ್ಮೊಳಗೆ ತಾಳ್ಮೆಯ ಗುಣ ವೃದ್ಧಿಸುವಂತೆ ಮಾಡುತ್ತದೆ. ಮೇಲಾಗಿ, ಛಲ ಮತ್ತು ಪರಿಶ್ರಮದಿಂದ ಕೂಡಿದ ಫಲಿತಾಂಶಕ್ಕಾಗಿ ನಮ್ಮನ್ನು ಅಣಿಗೊಳಿಸುತ್ತದೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಇಶಾ ಪಂತ್ ಅವರು ಸ್ವಾಗತಿಸಿ ಪಿ.ಟಿ.ಸಿ., ಕೆ.ಎಸ್.ಆರ್.ಪಿ., ಜೆಸ್ಕಾಂ,ಅಧಿಕಾರಿಗಳಿಗೆ ವೈಯಕ್ತಿಕವಾಗಿ ಇಲಾಖೆ ಎಲ್ಲಾ ಪೊಲೀಸ್ ತೀರ್ಪುಗಾರರಿಗೆ ವಾದ್ಯ ವೃಂದದವರಿಗೆ ಸ್ವಾಗತಿಸಿ ಮಾತನಾಡಿ, ಆರು ತಂಡಗಳು ಕ್ರೀಡೆಗಳಲ್ಲಿ ಭಾಗವಹಿಸಿ ಹೆಚ್ಚಿನ ಪ್ರಶಸ್ತಿಗಳು ಲಭಿಸಬೇಕೆಂದರು.

ಇದಕ್ಕೂ ಮುಂಚೆ ಕಲಬುರಗಿ ಗ್ರಾಮೀಣ ಉಪವಿಭಾಗ ಸೇರಿದಂತೆ ಆಳಂದ, ಶಹಾಬಾದ್, ಚಿಂಚೋಳಿ ಹಾಗೂ ಮಹಿಳಾ ಪೆÇಲೀಸ್ ಉಪವಿಭಾಗದ ಪೆÇಲೀಸ್ ತಂಡಗಳಿಂದ ಸಿದ್ದಣ್ಣ ಸಾಹುಕಾರ್ ಗೌರವ ವಂದನೆ ಸ್ವೀಕರಿಸಿದರು.

ಪರೇಡ ಕಮಾಂಡರ ಹನುಮಂತ ನಾಯಕ ಕ್ರೀಡಾಪಟುಗಳು ಪ್ರತಿಜ್ಞೆ ವಿಧಿ ಬೋಧಿಸಿದರು ಪÉÇಲೀಸ್ ಕ್ರೀಡಾಪಟು ಉದಯಕುಮಾರ್ ಕ್ರೀಡಾಜ್ಯೋತಿ ಪ್ರಜ್ವಲನ ಕೈಗೊಂಡರು. ಬಳಿಕ ಹೆಚ್ಚುವರಿ ಪೆÇಲೀಸ್ ವರಿμÁ್ಠಧಿಕಾರಿ ಪ್ರಸನ್ನ ದೇಸಾಯಿ ಅವರು ಮಾತನಾಡಿದರು.

ಕ್ರೀಡಾ ಸಂಚಾಲಕ ಎಂ.ಎಸ್.ಬರೋಟಿ ಸೇರಿದಂತೆ ಪೆÇಲೀಸ್ ಅಧಿಕಾರಿಗಳು, ನಿವೃತ್ತ ಪೆÇಲೀಸ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಹಾಗೂ ಪೆÇಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here