ಛಲವಾದಿ ಸಮುದಾಯ ಒಗ್ಗಟ್ಟಾದರೆ ಯಶಸ್ಸು ಸಾಧ್ಯ

0
12

ಕಲಬುರಗಿ: ರಾಜ್ಯದಲ್ಲಿ ಛಲವಾದಿ (ಬಲಗೈ) ಸಮುದಾಯ ಒಗ್ಗಟ್ಟು ಪ್ರದರ್ಶಿಸಿದರೆ ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಛಲವಾದಿ ಸಮುದಾಯದ ರಾಜ್ಯ ಪ್ರಮುಖ ಹಾಗೂ ಮಾಜಿ ಶಾಸಕರಾದ ಜಿಎನ್ ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.

ಕಲ್ಬುರ್ಗಿಯಲ್ಲಿ ನಡೆಯುವ ವಿಭಾಗೀಯ ಮಟ್ಟದ ಛಲವಾದಿ ಸಮುದಾಯದ ಬೃಹತ್ ಸಮಾವೇಶ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ಆಯೋಜಿಸಿದ್ದ ಛಲವಾದಿ (ಬಲಗೈ) ಸಮುದಾಯದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಜಿಎನ್ ನಂಜುಂಡಸ್ವಾಮಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಅವರು ರಾಜ್ಯದಲ್ಲಿ ಬಲಗೈ ಸಮುದಾಯವು ಅತ್ಯಂತ ಪ್ರಬಲ ಹಾಗೂ ಸಂಘಟನಾತ್ಮಕ ಸಮುದಾಯವಾಗಿದ್ದು ನಾವೆಲ್ಲರೂ ಒಗ್ಗಟ್ಟಾದರೆ, ರಾಜಕೀಯ ಅಧಿಕಾರ ಪಡೆದುಕೊಳ್ಳಲು ಸಾಧ್ಯವಾಗಲಿದೆ.

ನಾವು ಯಾವುದೋ ಒಂದು ಪಕ್ಷದ ಜೊತೆ ಗುರುತಿಸಿಕೊಳ್ಳದೆ ನಮ್ಮ ಸಮುದಾಯದ ಏಳಿಗೆಯನ್ನು ಬಯಸುವ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಎತ್ತಿ ಹಿಡಿಯುವ ಪಕ್ಷದತ್ತ ವಾಲುವ ಅನಿವಾರ್ಯತೆ ನಮಗೆ ಹಿಂದೆಂದಿಗಿಂತಲೂ ಈಗ ಅವಶ್ಯಕವಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಇನ್ನೊಬ್ಬ ಛಲವಾದಿ ಸಮುದಾಯದ ಪ್ರಮುಖ ನಾಯಕ ಹಾಗೂ ಮಾಜಿ ಶಾಸಕ ವೈ ಸಂಪಂಗಿ ಮಾತನಾಡಿ ಸಮಾಜದ ಬಂಧುಗಳು ಮಾಡಿರುವಂತಹ ಹೋರಾಟದ ಫಲವಾಗಿ ಮತ್ತು ಡಾ. ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನದತ್ತ ನೀಡಿರುವ ಮೀಸಲಾತಿಯ ಫಲವಾಗಿ ಇವತ್ತು ಎಲ್ಲರಿಗೂ ಅನುಕೂಲವಾಗಿದ್ದು, ವಿಶೇಷವಾಗಿ ಬಲಗೈ ಸಮುದಾಯದ ನಾಯಕರು ಹಾಗೂ ಯುವಕರು ರಾಜಕೀಯ ಶಕ್ತಿಯನ್ನು ಪಡೆದುಕೊಳ್ಳಲು ನಾವು ಚಾಮರಾಜನಗರ ಜಿಲ್ಲೆಯಿಂದ ಬೀದರ್ ಜಿಲ್ಲೆಯವರೆಗೆ ಛಲವಾದಿ ಸಮುದಾಯದ ಸಭೆಗಳನ್ನು ಏರ್ಪಡಿಸಿ ಜನರಲ್ಲಿ ರಾಜಕೀಯ ಜಾಗೃತಿ ಮೂಡಿಸುವ ಕೆಲಸವನ್ನು ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಛಲವಾದಿ ಸಮುದಾಯದ ಪ್ರಮುಖ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ನಡೆಯುತ್ತಿವೆ ಎಂದರು.

ಈ ಸಭೆಯಲ್ಲಿ ಸಮುದಾಯದ ಪ್ರಮುಖರಾದ ಹುಬ್ಬಳ್ಳಿಯ ಮಹೇಂದ್ರ ಕೌತಾಳ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಛಲವಾದಿ ಮಹಾಸಭಾದ ನಿರ್ದೇಶಕರಾದ ಸಿದ್ದರಾಜು, ಚಂದ್ರಶೇಖರ್ ಬಬಲಾದ ಮುಂತಾದವರು ಮಾತನಾಡಿದರು.

ಸಭೆಯಲ್ಲಿ ಛಲವಾದಿ ಸಮುದಾಯದ ಪ್ರಮುಖರಾದ ದೇವೇಂದ್ರ ಸಿನ್ನುರ, ಮಹಾ ನಗರ ಪಾಲಿಕೆ ಸದಸ್ಯ ವಿಶಾಲ್ ದರ್ಗಿ ಶಿವಯೋಗಿ ನಾಗನಳ್ಳಿ, ರಾಣೋಜಿ ದೊಡ್ಡಮನಿ,ಭೀಮಾ ಕೋಳ್ಳುರ, ಬೀದರ್ ಜಿಲ್ಲೆಯ ಸತೀಶ್ ರಾಜೇಶ್ವರ, ರಾಯಚೂರು ಜಿಲ್ಲೆಯ ದುರ್ಗೆಶ, ಯಾದಗಿರಿ ಜಿಲ್ಲೆಯ ಪರಶುರಾಮ್ ಕುರುಕುಂದಿ, ಅವಿನಾಶ್ ಗಾಯಕವಾಡ ಪುಂಡಲಿಕ ಗಾಯಕವಾಡ, ಶಾಂತವೀರ್ ಬಡಿಗೇರ್, ಶಿವಯೋಗಿ ರುಸ್ತಮಪುರ, ಶ್ರೀಮಂತ ಕಟ್ಟಿಮನಿ,ಸಂತೋಷ ಹಾದಿಮನಿ, ವಿಕಾಸ ಕರಣಿಕ, ರಾಜು ಕಗ್ಗನಮಡಿ, ಶಿವ ಅಷ್ಠಗಿ ದಿನೇಶ್ ದೊಡ್ಡಮನಿ ಸೇರಿದಂತೆ ಛಲವಾದಿ ಸಮುದಾಯದ ಸಾಹಿತಿಗಳು, ಪ್ರಗತಿಪರ ವಿಚಾರವಂತರು ಮತ್ತು ಚಿಂತಕರು ಭಾಗವಹಿಸಿದ್ದರು.

ಛಲವಾದಿ ಸಮುದಾಯವು ಒಗ್ಗಟ್ಟಿನ ಕೋರತೆಯಿಂದ ರಾಜಕೀಯ ಅಧಿಕಾರದಿಂದ ವಂಚಿತವಾಗುತ್ತಿದೆ,.ಈ ಸಮುದಾಯವು ಒಗ್ಗಟ್ಟಾದರೆ ಆರ್ಥಿಕ ಹಾಗೂ ರಾಜಕೀಯ ಪ್ರಗತಿ ಸಾಧಿಸಲು ಸಾಧ್ಯ. – ಡಾ.ಅಂಬಾರಾಯ ಅಷ್ಠಗಿ. ಮಾಜಿ ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಕಲಬುರಗಿ ಹಾಗೂ ಛಲವಾದಿ ಸಮುದಾಯದ ಪ್ರಮುಖ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here