ಕಲಬುರಗಿ: ವಿಶ್ವ ಬಸವ ಧರ್ಮ ಅನುಭವ ಮಂಟಪ ಟ್ರಸ್ಟ್ ವತಿಯಿಂದ ಬೀದರ್ ಜಿಲ್ಲೆಯ ಬಸವಕಲ್ಯಾಣ ಅನುಭವ ಮಂಟಪದ ಪರಿಸರದಲ್ಲಿ ನ. 26, 27ರಂದು 43ನೇ ಶರಣ ಕಮ್ಮಟ ಹಾಗು ಅನುಭವ ಮಂಟಪ ಉತ್ಸವಕ್ಕೆ ಎಲ್ಲಾ ಸಿದ್ದತೆಗಳು ಮಾಡಿಕೊಳ್ಳಲಾಗಿದೆ ಎಂದು ಭಾಲ್ಕಿ ಹಿರೇಮಠದ ಪೂಜ್ಯ ಗುರುಬಸವ ಪಟ್ಟದ್ದೇವರು ತಿಳಿಸಿದರು.
ಅನುಭವ ಮಂಟಪದ ವಿಶಾಲ ಮೈದಾನದಲ್ಲಿ ಶರಣ ಬಾಬಾ ಸಾಹೇಬ ವಾರದ ಮಾಹಾದ್ವಾರ ಹಾಗೂ ಶರಣ ಡಾ ಬಿ.ವಿ..ಪಟೇಲ್ ಹೆಸರಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಉದ್ಘಾಟನೆ ಸಮಾರೋಪ ಸೇರಿ ವಿವಿಧ ಗೋಷ್ಠಿ, ಸಾಮೂಹಿಕ ಇಷ್ಟಲಿಂಗ, ಪ್ರಶಸ್ತಿ ಪ್ರದಾನ, ಸನ್ಮಾನ, ಗ್ರಂಥ ಲೋಕಾರ್ಪಣೆ ಇತರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
26ರಂದು ಶನಿವಾರ ಬೆಳಗ್ಗೆ 11ಕ್ಕೆ ಕೇಂದ್ರದ ಪ್ರವಾಸೋಧ್ಯಮ ಮತ್ತು ಸಾಂಸ್ಕೃತಿಕ ಅಭಿವ್ರದ್ಧಿ ಸಚಿವ ಜಿ. ಕಿಶನರೆಡ್ಡಿ ಚಾಲನೆ ನೀಡುವರು. ಅನುಭವ ಮಂಟಪ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು, ಇಳಕಲ್ ಗುರುಮಹಾಂತ ಸ್ವಾಮೀಜಿ, ಹಾರಕೂಡ ಡಾ. ಚನ್ನವೀರ ಶಿವಾಚಾರ್ಯರು, ಹುಲಸೂರು ಡಾ. ಶಿವಾನಂದ ಸ್ವಾಮೀಜಿ ಸಾನಿಧ್ಯ ವಹಿಸುವರು. ಅನುಭವ ಮಂಟಪ ಉತ್ಸವ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಭಗವಂತ ಖೂಬಾ, ವಿಧಾನ ಪರಿಷತ್ ಸಭಾಪತಿ ರಘುನಾಥರಾವ ಮಲ್ಕಾಪುರೆ, ಜಿಲ್ಲಾ ಉಸ್ತುವಾರಿ ಸಚಿವರಂದ ಶಂಕರ ಪಾಟಿಲ ಮುನೇನಕೋಪ್ಪ, ಸಚಿವರಾದ ಪ್ರಭು ಚವ್ಹಾಣ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕ್ರಷಿ ಹಾಗು ಸಾಂಸ್ಕೃತಿಕ ¸ಂಘದ ಅಧ್ಯಕ್ಷ ಬಸವರಾಜ ಪಾಟಿಲ ಸೇಡಂ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಉದ್ಯಮಿಗಳಾದ ವಿಜಯ ಬಿ. ಶಿರ್ಕೆ ಹಾಗು ಬಿಜೆಪಿ ಮುಖಂಡಪಾದ ಗುರುನಾಥ ಕೊಳ್ಳುರು ಅವರಿಗೆ ಅನುಭವಮಂಟಪ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಧ್ಯಾಹ್ನ 3 ಗಂಟೆಗೆ ಅನುಭವ ಮಂಟಪ ಜನನಿ ಗೋಷ್ಠಿ ಪುರಸ್ಕಾರ ಪ್ರದಾನ ಮತ್ತು ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿವೆ ಎಂದು ವಿವರಿಸಿದರು.
27ರಂದು ಬೆಳಗ್ಗೆ, 7.30ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜೆ, 10 ಗಂಟೆಗೆ ಲಿಂಗಾಯತ ಧರ್ಮ ಜಾಗತಿಕ ಪ್ರಸಾರದ ರೀತಿ ಕುರಿತು ಗೋಷ್ಠಿ ನಡೆಯಲಿದೆ, ಸಾಣೆಹಳ್ಳಿ ಪಂಡಿತರಾಧ್ಯ ಶಿವಚಾರ್ಯರು ಸಾನಿಧ್ಯ, ವಿನಯ ಗುರುಜಿ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2ಗಂಟೆಗೆ ಜರುಗಲಿರುವ ಸಮಾರೋಪ ಸಮಾರಂಭದಲ್ಲಿ ಶ್ರೀ ಗುರುಬಸವ ಪಟ್ಟದ್ದೇವರು, ಅಕ್ಕ ಗಂಗಾಬಿಕೆ ಸಾನಿಧ್ಯವಹಿಸುವರು. ಶಾಸಕ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಶಾಸಕ ಎಂ.ಬಿ.ಪಾಟಿಲ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು. ಸೋಮಣ್ಣ ನಡಕಟ್ಟಿ, ರವೀಂದ್ರ ಶಾಬಾದಿ, ಆರ್.ಜಿ. ಶೆಟಗಾರ, ಪ್ರಭುಲಿಂಗ ಮಹಾಗಾಂವಕರ್, ಧನರಾಜ ತಾಂದಳೆ, ಸತೀಶ ಸಜ್ಜನ್, ರವಿ ಸಜ್ಜನ್ ಇತರರಿದ್ದರು.