ಸುರಪುರ:ಆನಂದ ವಿದ್ಯಾಲಯದ ಅಮೃತ ಮಹೋತ್ಸವ 30ಕ್ಕೆ

0
18

ಸುರಪುರ: ಆನಂದ ವಿದ್ಯಾಲಯ ಶಿಕ್ಷಣ ಸಂಸ್ಥೆ ಆರಂಭಗೊಂಡು 75 ವಸಂತಗಳು ಪೂರೈಸಿದ ಹಿನ್ನೆಲೆಯಲ್ಲಿ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ನವೆಂಬರ್ 30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ರೆವರೆಂಡ್ ಈ ಸುನಂದ ಕುಮಾರ ತಿಳಿಸಿದರು.

ನಗರದ ಆನಂದ ವಿದ್ಯಾಲಯ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ,1943ರಲ್ಲಿ ಈ ಶಾಲೆಯನ್ನು ಆರಂಭಿಸಲಾಗಿದೆ,ಈ ಶಾಲೆಯಲ್ಲಿ ಕಲಿತವರು 3 ಜನ ಶಾಸಕರಾಗಿದ್ದಾರೆ,ಒಬ್ಬರು ಸಂಸದರಾಗಿದ್ದಾರೆ,ಅನೇಕರು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ,ಇನ್ನು ಭಾರತೀಯ ಸೇನೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ,ಆ ಎಲ್ಲಾ ಹಳೆಯ ವಿದ್ಯಾರ್ಥಿಗಳೆ ಈಗ 30 ರಂದು ನಡೆಯಲಿರುವ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ನೆರವಾಗಲಿದ್ದಾರೆ ಎಂದರು.

Contact Your\'s Advertisement; 9902492681

ಅಂದಿನ ಕಾರ್ಯಕ್ರಮದಲ್ಲಿ ನಮ್ಮ ಬಿಷಪ್ ಎನ್.ಎಲ್ ಕರಕರೆ ಮತ್ತು ಅವರ ಶ್ರೀಮತಿ ಕಮಲಾ ಕರಕರೆ ಮುಖ್ಯ ಅತಿಥಿಗಳಾಗಿರಲಿದ್ದಾರೆ ಮತ್ತು ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ,ರಾಯಚೂರು ಮಾಜಿ ಶಾಸಕ ತಿಪ್ಪರಾಜು ಹವಲ್ದಾರ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಶಾಂತಗೌಡ ಪಾಟೀಲ್,ಕ್ಷೇತ್ರಶಿಕ್ಷಣಾಧಿಕಾರಿ ಮಹೇಶ ಪೂಜಾರಿ ಭಾಗವಹಿಸಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಶಾಲೆಯ ಪ್ರಧಾನಗುರು ಮಹೇಶ ಜಾಗಿರದಾರ ಮಾತನಾಡಿ,ಅಮೃತ ಮಹೋತ್ಸವ ಕಾರ್ಯಕ್ರಮ ಎರಡು ವರ್ಷಗಳ ಹಿಂದೆಯೇ ಆಚರಿಸಬೇಕಿತ್ತು,ಆದರೆ ಕೊರೊನಾ ಕಾರಣ ದಿಂದ ಮುಂದೂಡಲಾಗಿತ್ತು,ಅದಕ್ಕೆ ಈಗ ಕಾಲ ಕೂಡಿಬಂದಿಂದು 30 ರಂದು ನಡೆಯುವ ಕಾರ್ಯಕ್ರಮದಲ್ಲಿ ಸಾವಿರಾರು ಜನ ಹಳೆ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.

ನಂತರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಶಿಕ್ಷಕರಾದ ಪಾಲನಾಯ್ಕ್,ಪ್ರಕಾಶ ಹಂಚಿನಾಳ,ಸ್ಯಾಮುವೆಲ್,ರಾಜಕುಮಾರ ನಾಯಕ,ಧನರಾಜ್,ರಮೇಶ ಬಿರಾದಾರ,ಅನುರಾಗ,ನಿಂಗಪ್ಪ ಮಾಳೆಗಾರ,ನ್ಯಾನ್ ಮಿತ್ರ,ಈರಣ್ಣ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here