ಶರಣ ಸಾಹಿತ್ಯ ಪರಷತ್ತಿನ ಸದಸ್ಯತ್ವ ಅಭಿಯಾನ

0
66

ಕಲಬುರಗಿ: ಏಷಿಯನ್ ಬಿಸಿನೆಸ್ ಸೆಂಟರ್‌ನಲ್ಲಿರುವ ಪಾಟೀಲ್ ಆಸ್ಪತ್ರೆಯಲ್ಲಿ ಶರಣ ಸಾಹಿತ್ಯ ಪರಿಷತ್ತು ಕಲಬುರಗಿ ಜಲ್ಲಾ ಯುವ ಘಟಕದ್ ವತಿಯಿಂದ ಪರಿಷತ್ತಿನ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಯಿತು.

ಜನರ ಆರೋಗ್ಯ ರಕ್ಷಣೆ ಮಾಡುತ್ತಿರುವ ವೈದ್ಯರು ಜೀವನದ ಮೌಲ್ಯಗಳು ತುಂಬಿರುವ ವಚನ ಸಾಹಿತ್ಯ ರಕ್ಷಿಸಿ, ಉಳಿಸಿ, ಬೆಳೆಸುವುದು ಕೂಡಾ ಸಮಾಜದ ಸಾಮಾಜಿಕ ಆರೋಗ್ಯಕ್ಕೆ ಅವಶ್ಯಕವಾಗಿದೆ. ಶರಣ/ವಚನ ಸಾಹಿತ್ಯ ಓದುವುದು, ಅರ್ಥಮಾಡಿಕೊಳ್ಳುವುದು ಅಗತ್ಯ ಹಿಂದೆಂದಿಗಿಂತಲು ಈಗ ಹೆಚ್ಚಾಗಿರುವ ಕಾರಣ ನಾವೂ ಮತ್ತೆ ವಚನ ಸಾಹಿತ್ಯದ ಆಶ್ರಯಕ್ಕೆ ಹಿಂದಿರುಗಿ ಹೋಗುವ ಅನಿವಾರ್ಯ ಮತ್ತು ಅಗತ್ಯವಿದೆ ಹಾಗಾಗಿ ಬನ್ನಿ ಶರಣ ಬಂದುಗಳೇ ಪರಿಷತ್ತಿನ ಸದಸ್ಯತ್ವ ಮಾಡುವ ಮೂಲಕ ಶರಣ ಉದ್ದಾತ್ತ ಆಶಯಗಳಿಗೆ ನೀರುಣಿಸುವ ಕಾರ್ಯದಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡು ವಚನ ಸಾಹಿತ್ಯ ಉಳಿಸಿ, ಬೆಳೆಸಿ, ಪ್ರಚಾರಪಡಿಸುವ ಈ ಮಹತ್ವದ ಕಾರ್ಯದಲ್ಲಿ ತಾವೂ ಕೈಜೋಡಿಸಬೇಕೆಂದು ಪರಿಷತ್ತಿನ ಸದಸ್ಯತ್ವ ಅಭಿಯಾನದ ನೇತೃತ್ವ ವಹಿಸಿದ ಜಿಲ್ಲಾ ಯುವ ಘಟಕದ ಸಂಚಾಲಕ ಶಿವರಾಜ ಅಂಡಗಿ ಅವರು ಮಾತನಾಡುತ್ತಾ ನಗರದ ಪ್ರತಿಷ್ಟಿತ ಮೂಳೆ ತಜ್ಞರಾದ ಡಾ. ಎಸ್. ಎಸ್. ಗುಬ್ಬಿ ಕಿವ, ಮೂಗು, ಗಂಟಲು ತಜ್ಞರಾದ ಡಾ. ಕೇದಾರನಾಥ ರಟಕಲ್, ಇ.ಎಸ್,ಐ ಆಸ್ಪತ್ರೆ ಫಾರೆನಸಿಕ್ ಮೆಡಿಸಿನ್ ಡಾ.ರಾಜೇಶ ಸಂಗ್ರಾಮ, ಆಯುರ್ವೇದಿಕ ತಜ್ಞರಾದ ಡಾ.ಎಲ್.ಜೆ. ಪಾಟೀಲ್, ಫ್ಯಾಥೋಲೊಜಿ ತಜ್ಞರಾದ ಡಾ.ಎ.ವಿ.ದೇಶಮುಖ ಅವರುಗಳಿಗೆ ಪರಿಷತ್ತಿನ ಸದಸ್ಯತ್ವ ಪಡೆಯಬೇಕೆಂದು ಅಭಿಯಾನದ ಕರಪತ್ರ ಕೊಡುವ ಮೂಲಕ ವಿನಂತಿಸಿಕೊಂಡರು.

Contact Your\'s Advertisement; 9902492681

ಅಭಿಯಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಖ್ಯಾತ ವೈದ್ಯರಾದ ಡಾ.ಎಸ್.ಎಸ್.ಗುಬ್ಬಿ, ಡಾ.ಕೇದಾರನಾಥ ರಟಕಲ್, ಡಾ.ರಾಜೇಶ ಸಂಗ್ರಾಮ, ಡಾ.ಕುಮಾರಸ್ವಾಮಿ, ಡಾ.ಎಲ್.ಜೆ. ಪಾಟೀಲ್, ಡಾ.ಎ.ವಿ.ದೇಶಮುಖ, ಡಾ.ಸಂಗಮೇಶ ಪಾಟೀಲ್, ಡಾ.ಪ್ರವಳಿಕಾ ಪಾಟೀಲ್, ಡಾ.ನಾಗೇಂದ್ರ ರೆಡ್ಡಿ, ಈ ಎಲ್ಲಾ ವೈದ್ಯರು ಪರಿಷತ್ತಿನ ಅಜೀವ ಸದಸ್ಯತ್ವ ಪಡೆದುಕೊಂಡರು ಎಂದು ಶಿವರಾಜ ಅಂಡಗಿಯವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here