ರಾಜಮನೆತನ ಬಿಟ್ಟು ಆದ್ಯಾತ್ಮಕ ಶಿಖರವನ್ನೇರಿದ ಮಡಿವಾಳ: ಪೂಜ್ಯ ರೇವಣಸಿದ್ಧ ಮಹಾಸ್ವಾಮಿ

0
146

ಕಲಬುರಗಿ: ಶ್ರೀ ಗುರು ಮಡಿವಾಳೇಶ್ವರ ಸ್ವಾಮಿಗಳೆನ್ನಿಸಿ ಇಂತಹ ಪವಾಡ ಪುರುಷರ ಪುರಾಣ ಪ್ರತಿನಿತ್ಯ ಬಂದು ಕೇಳಿ ನಿವೇಲ್ಲಾ ಪುನಿತರಾಗಬೇಕು ಎಂದು ಮಕ್ತಂಪೂರ ಗದ್ದುಗೆ ಮಠದ ಪೂಜ್ಯ ಶ್ರೀ ರೇವಣಸಿದ್ದ ಮಹಾಸ್ವಾಮಿಗಳು ಹೇಳಿದರು.

ಅಷ್ಟೇ ಪುರಾಣ, ಪ್ರವಚನಕಾರರಾದ ಗೋಳಾ(ಬಿ) ಗ್ರಾಮದ ಪೂಜ್ಯ ಶ್ರೀ ಚನ್ನಮಲ್ಲ ಮಹಾಸ್ವಾಮಿಗಳು ಒಬ್ಬ ಉತ್ತಮ ವಾಗ್ಮಿಗಳಾಗಿದ್ದಾರೆ. ಅವರ ಮಾತುಗಳು ಕೇಳಬೇಕೆಂದು ಇತ್ತೀಚೆಗೆ ವಿದ್ಯಾನಗರದ ವೆಲ್‌ಫೇರ ಸೊಸೈಟಿಯ ವತಿಯಿಂದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗರಗದ ಶ್ರೀ ಮಡಿವಾಳೇಶ್ವರ ಪುರಾಣ ಪ್ರವಚನ ಉದ್ಘಾಟನಾ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದರು.

Contact Your\'s Advertisement; 9902492681

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಾಲಿಕೆ ಆಯುಕ್ತೆ ಫೌಜಿಯಾ ತರನ್ನುಮ್ ಆಗಮಿಸಿದ್ದರು. ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಸಂಜಯಸಿಂಗ ರವರು ಕಾರ್ಯಕ್ರಮ ಉದ್ಘಾಟಿಸಿದರು. ಪ್ರವಚನಕಾರರಾದ ಗೋಳಾ (ಬಿ) ಹಾಗು ನರೋಣ ಶ್ರೀ ಚನ್ನಮಲ್ಲ ಮಹಾಸ್ವಾಮಿಗಳು ಹೊಸಮಠ, ವಿದ್ಯಾನಗರ ವೆಲ್‌ಫೇರ ಸೊಸೈಟಿ ಅಧ್ಯಕ್ಷರಾದ ಮಲ್ಲಿನಾಥ ದೇಶಮುಖ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸೊಸೈಟಿಯ ಉಪಾಧ್ಯಕ್ಷರಾದ ಉಮೇಶ ಶೆಟ್ಟಿ, ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ ಹಾಗು ಮಹಾನಗರ ಪಾಲಿಕೆಯ ಸದಸ್ಯರಾದ ರಮಾನಂದ ಉಪಾಧ್ಯಾಯ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾದ ಜಗದೀಶ ಎಸ್.ನಗನೂರ ಹಾಗು ಜಗದೀಶ ಸಿದ್ದಣ್ಣ ದೇಸಾಯಿ ಕಲ್ಲೂರ ಪ್ರಾರ್ಥನೆ ಹಾಗು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾನಗರ ವೆಲ್‌ಫೇರ ಸೊಸೈಟಿಯ ಪದಾಧಿಕಾರಿಗಳು, ಬಡೇಪೂರ ಕಾಲೋನಿ, ಪ್ರಗತಿ ಕಾಲೋನಿ, ಗುಬ್ಬಿ ಕಾಲೋನಿ, ಆದರ್ಶ ನಗರ ಹೀಗೆ ಅನೇಕ ಸುತ್ತ-ಮುತ್ತಲಿನ ಬಡಾವಣೆಯ ಭಕ್ತಾಧಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here