ಜೇವರ್ಗಿ: ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಸಂವಿಧಾನದ ಸಮರ್ಪಣಾ ದಿನಾಚರಣೆ ಅಂಗವಾಗಿ ಸಂವಿಧಾನದ ಪೂರ್ವ ಪೀಠಿಕೆಯನ್ನು ಓದುವ ಮೂಲಕ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಆಚರಿಸಲಾಯಿತು.
ಶ್ರೀ ಸಂದೀಪ್ ಎ ನಾಯಕ ಹಿರಿಯ ಶ್ರೇಣಿ ನ್ಯಾಯಾಧೀಶರು ಉದ್ಘಾಟನಾ ಮಾತನಾಡುತ್ತಾ ಭಾರತ ದೇಶದಲ್ಲಿನ ಸಂವಿಧಾನವು ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆ ಹಾಗೂ ಸಾಮಾನ್ಯ ಜನರ ಆಶಯಗಳ ಪಾಲನೆ ಹಾಗೂ ಎಲ್ಲಾ ವರ್ಗದವರು ಸಹ ಜೀವನದ ರೂಪಿಸಿಕೊಳ್ಳಲು, ಮುಂದೆಬರಲು,ಶೈಕ್ಷಣಿಕ, ಆರ್ಥಿಕ, ಹಾಗೂ ಸಾಮಾಜಿಕ ಸ್ಥಾನಮಾನವುಗಳನ್ನು ಸಮಾನ ಅವಕಾಶಗಳನ್ನು ನೀಡಿದ್ದು ಪ್ರತಿಯೊಬ್ಬರು ಸಂವಿಧಾನವನ್ನು ಓದಿ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಪ್ರಥಮ ದರ್ಜೆಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಡಿ ರಮೇಶ ಭಾಗವಹಿಸಿದ್ದರು , ಸರ್ಕಾರಿ ಸಹಾಯಕ ಅಭಿಯೋಜಕರಾದ ಶ್ರೀಮತಿ ನಾಗವೇಣಿ ಧನ್ನಾ ಹಾಗೂ ಶ್ರೀಮತಿ ಗುರುಲಿಂಗಮ್ಮ ಸೇರಿದಂತೆ ಹಿರಿಯ ವಕೀಲರಾದ ಜಯಂತ ಹತ್ತಿ ಉಪಸ್ಥಿತರಿದ್ದರು.
ಭಾರತ ಸಂವಿಧಾನ ಕುರಿತು ವೈ ಜಿ ಪಾಟೀಲ್ ಉಪನ್ಯಾಸವನ್ನು ನೀಡಿ ಇಡೀ ವಿಶ್ವದಲ್ಲೇ ಬೃಹತ ಸಂವಿಧಾನವಾದ ಭಾರತದ ಸಂವಿಧಾನವು ಜಗತ್ತಿಗೆ ಮಾದರಿಯ ಸಂವಿಧಾನವಾಗಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆಯ ಅವಕಾಶಗಳನ್ನು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ತಿಳಿಸಿದರು.
ಭಾರತ ಸರ್ಕಾರದ ನೋಟರಿ ವಕೀಲರಾದ ರಾಜಶೇಖರ್ ಶಿಲ್ಪಿ ಸ್ವಾಗತವನ್ನು ಕೋರಿದರು,ವಕೀಲರಾದ ರಾಜು ಮುದ್ದಡಗಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಂ.ಎಸ್ ಪಾಟೀಲ್ ವಕೀಲರ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿಗಳು ಹಾಗೂ ಕಕ್ಷಿದಾರರು ಹಾಗೂ ವಕೀಲರ ಸಂಘದ ಸರ್ವ ಸದಸ್ಯರು ಭಾಗವಹಿಸಿದ್ದರು.