ಕಲಬುರಗಿ: 371ನೇ ಕಲಂತಿದ್ದುಪಡಿಯ ವಿಶೇಷ ಸ್ಥಾನಮಾನ ಪಡೆದ ಹಿಂದುಳಿದ ನಮ್ಮ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ವಿಶೇಷ ಸ್ಥಾನಮಾನದ ಸಾಧಕ ಬಾಧಕ ಬಗ್ಗೆ ಕಲ್ಯಾಣ ಕರ್ನಾಟಕ ಜನಪರ ಸಂಫರ್ಷ ಸಮಿತಿಯ ವತಿಯಿಂದ ಸಭೆಯನ್ನು ಡಿ. 4ಕ್ಕೆ ನಿಯೋಜಿಸಲಾಗಿದೆ ಎಂದು ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.
4 ರಂದು ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಯವರು ಅಧ್ಯಕ್ಷತೆಯಲ್ಲಿ ರವಿವಾರ ಬೆಳಿಗ್ಗೆ ಸರಿಯಾಗಿ 11.30ಗಂಟೆಗೆ ಹಿಂದಿ ಪ್ರಚಾರ ಸಭಾ ದಲ್ಲಿ ಸಮಿತಿಯ ಸಭೆ ಕರೆಯಲಾಗಿದ್ದು, ಸಭೆಯಲ್ಲಿ 371ನೇ ಜೇ ಕಲಂ ತಿದ್ದುಪಡಿಯಡಿ ನೇಮಕಾತಿ ಮತ್ತು ಮುಂಬಡ್ತಿಗಳಲ್ಲಿ ಆಗುತ್ತಿರುವ ಅನ್ಯಾಯ ಮತ್ತು ಮಲತಾಯಿ ಧೋರಣೆ ಹಾಗೂ ಪದೆ ಪದೇ ನೇಮಕಾತಿ ಅಧಿಸೂಚನೆಗಳ ಬದಲಾವಣೆ ಮಾಡುವ ಸರ್ಕಾರದ ಧೋರಣೆ ,ಮುಂಬಡ್ತಿಗಳು ಸಹಜ ಪ್ರಕ್ರಿಯೆಯಂತೆ ನಡೆಯದೆ ಅನ್ಯಾಯ ಮಾಡುತ್ತಿರುವ ವಿಷಯ ಸೇರಿದಂತೆ ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಸ್ಪಷ್ಟ ಕ್ರೀಯಾ ಯೋಜನೆ ಹಮ್ಮಿಕೊಳ್ಳದಿರುವ ವಿಷಯಗಳ ಕುರಿತು ಚರ್ಚಿಸಿ ಮುಂದಿನ ರೂಪರೇಷಗಳನ್ನು ಹಮ್ಮಿಕೊಳ್ಳಲಾವುದೆಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಈ ಮಹತ್ವದ ಸಭೆಗೆ ಸಮಿತಿಯ ಸದಸ್ಯರುಗಳು ಮತ್ತು ಫಲಾನುಬವಿಗಳು ಸರಿಯಾದ ಹಾಜರಾಗಲು ಸಮಿತಿ ಆಹ್ವಾನಿಸಿದೆ.