ಔರಂಗಾಬಾದ್ನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

0
114

ಕಲಬುರಗಿ: ಕರ್ನಾಟಕ ಸಂಘ ಮತ್ತು ನಮ್ಮವರು ಸಂಘದ ಸಂಯುಕ್ತಾಶ್ರಯದಲ್ಲಿ ಔರಂಗಾಬಾದನ ಭಾನುದಾಸ ಚವಾನ್ ಸಭಾಗೃಹದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆಮಹಾರಾಷ್ಟ್ರ ರಾಜ್ಯದ ಸಹಕಾರ ಸಚಿವರಾದ ಅತುಲ್ ಸಾವೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವೇದಿಕೆ ಮೇಲೆ ನಮ್ಮವರು ಸಂಘದ ಸಂಸ್ಥಾಪಕರಾದ ಬಸವರಾಜ್ ಹಿರೇಮಠ,  CIDCO ಆಯುಕ್ತರಾದ ಮತಿ ದೀಪಾ ಮುಂಡೆ ಮುಧೋಳ ( IAS ), ಮಹಾರಾಷ್ಟ್ರ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾದ  ಬಸವರಾಜ್ ಮಂಗೃಳೆ, ಕರ್ನಾಟಕ ಸಂಘದ ಅಧ್ಯಕ್ಷರಾದ  ಎಸ್ ಎಲ್ ರಾಮಲಿಂಗಪ್ಪ, ಉಪಾಧ್ಯಕ್ಷರಾದ  ಸುಭಾಷ ಅಮಾಣೆ ಕಾರ್ಯದರ್ಶಿಗಳಾದ ಕೆ.ಎಂ. ಸಿದ್ಧವೀರಯ್ಯ, ಸಹಕಾರ್ಯದರ್ಶಿಗಳಾದ ವಿಮಲಾ ಹಬ್ಬು, ಡಾ.ಆಶಾ ಸಾಕೋಳ್ಕರ್, ಡಾ.ವರ್ಷಾ ರೋಟೆ ,ಅನಿಲ್ ಮಕ್ರಿಯಾ, ನಗರಸೇವಕಿ ಶಿಲ್ಪಾರಾಣಿವಾಡಕರ್ ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಕೋಶಾಧ್ಯಕ್ಷರಾದ ಎಂ.ಎಂ. ಲಾಲಿ, ಪ್ರಶಾಂತ್ ಹಿರೇಮಠ್,ಸಂಗಮೇಶ್ವರ ರಗಟೆ, ಶಶಿಕಾಂತ್ ಮರ್ಪಲ್ಲಿಕರ, ಸವಿತಾ ಸ್ವಾಮಿ, ಸುನಿತಾ ಬುಕ್ಕಾ, ಉಮೇಶ್ ಉಪಾಧ್ಯಾಯ, ದೇವ ಐಲಿ, ಸಂಗೀತಾ ಪಾಟೀಲ್, ಸೋಮಶೇಖರ್ಪಾಟೀಲ್, ಅರುಣ್ ಗುದಗೆ ಸರ್, ಸಾಯಿರಾಮ್ ಮಂಗಲಗಿ, ಶಿವಾ ಉಗಲತ್,ಪುಷ್ಪಾ ಕುಲಕರ್ಣಿ, ಗಿರಿಜಾ ಅಮಾಣೆ ಸೇರಿದಂತೆ ಪದಾಧಿಕಾರಿಗಳೆಲ್ಲ ಉಪಸ್ಥಿತರಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಮ್ಮವರು ಸಂಘದ ಸಂಸ್ಥಾಪಕರಾದ ಬಸವರಾಜ್ ಹಿರೇಮಠ ರವರು ನಮ್ಮವರು ಸಂಘದ ಕಾರ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.

Contact Your\'s Advertisement; 9902492681

ಕಲಬುರಗಿಯ ಖ್ಯಾತ ಹಾಸ್ಯ ಕಲಾವಿದರಾದ ಗುಂಡಣ್ಣ ಡಿಗ್ಗಿ ಯವರು ನಗೆ ಹಬ್ಬ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಗಾಯಕರಾದ ಸಂತೋಷ ಹಿರೇಮಠ, ಪ್ರಹ್ಲಾದ್ ಕುಲಕರ್ಣಿ, ಮಿಮಿಕ್ರಿ ಕಲಾವಿದರಾದ ಮಾಲತೇಶ್ ಕುಲಕರ್ಣಿ, ಸಂಧ್ಯಾ ಅಡಸೂಳೆ, ಗೌರಿ ದೇಸಾಯಿ, ಗುರು ಮಂಗಲಗಿ, ಜೀಜಾಬಾಯಿ ಪಾತ್ರಧಾರಿ ಶ್ರೇಯ ಉಗಲಟ ಮುಂತಾದವರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.ಮತಿ ವಿಮಲಾ ಹಬ್ಬು ಪ್ರಾಸ್ತಾವಿಕ ನುಡಿಗಳನ್ನಾಡಿದರು ಹಾಗೂ ಅವಿನಾಶ ಹೊಸಮನಿ ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here