ಕಲಬುರಗಿ: ರಾಜ್ಯದಲ್ಲಿ ಪೂರ್ಣ ಪ್ರಮಾಣದ ಅಧಿಕಾರಕ್ಕೆ ಜನ ಆಶೀರ್ವಾದ ಮಾಡಿದರೆ,ರೈತರ ಸಂಪೂರ್ಣ ಸಾಲಮನ್ನಾ ಮಾಡಿ,ಜನರ ಕಲ್ಯಾಣಕ್ಕಾಗಿ,ಪಂಚ ಯಾತ್ರೆ ಕಾರ್ಯಕ್ರಮದ ಮೂಲಕ ಹತ್ತು ಹಲವಾರು ಕಾರ್ಯಕ್ರಮ ಜಾರಿಗೋಳಿಸಲಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಹೇಳಿದರು.
ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಶುಕ್ರವಾರ ಜೆಡಿಎಸ್ ತಾಲೂಕು ಘಟಕದ ವತಿಯಿಂದ ಉಡಿ ತುಂಬುವ ಹಾಗೂ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಅಧಿಕಾರಕ್ಕೆ ಬಂದಾಗ ಸಾಲಮನ್ನಾ ಮಾಡುತ್ತೇನೆ ಎಂದವರು ಮಾಡಿಲ್ಲ.ಹಿಂದಿನ ಸರ್ಕಾರ,ಯಾರೂ ಕೂಡ ಸಾಲ ಮನ್ನಾ ಮಾಡಿಲ್ಲ, ಜೆಡಿಎಸ್ ಪಕ್ಷ ಮಾತ್ರ ರೈತರ ಸಾಲ ಮನ್ನಾ ಮಾಡಿದೆ ಎಂದು ಪುನರವುಚ್ಚರಿಸಿದರು.ಈ ಭಾಗದ ಮುಖ್ಯಮಂತ್ರಿಯಾಗಿದ್ದ ದಿವಂಗತ ವೀರೇಂದ್ರ ಪಾಟೀಲ್ ಅವರ ಒಡನಾಟವನ್ನು ಮೇಲಕು ಹಾಕಿದರು. ಮುಂಬರುವ ದಿನಗಳಲ್ಲಿ ಪಕ್ಷದಿಂದ ಪಕ್ಷದ ನಾಯಕರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಇಲ್ಲಿಯೇ ವಾಸ್ತವ್ಯ ಮಾಡುವರು ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು.ಮಹಿಳೆಯರು ವಿಶೇಷ ಸಹಾಯಧನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಮಹೇಶ್ವರಿ ವಾಲಿ ಪ್ರಾಸ್ಥಾಮಿಕ ಮಾತನಾಡಿ, ತಾಲೂಕಿನಲ್ಲಿ ಹಾಲಿ – ಮಾಜಿ ಶಾಸಕರ ಆಡಳಿತ ನೋಡಿದ್ದಿರಿ.? ನನಗೆ ಒಂದು ಅವಕಾಶ ಕೊಡಿ ಎಂದು ಜನತೆಯಲ್ಲಿ ಮನವಿ ಮಾಡಿಕೊಂಡರು.ಕುಮಾರಸ್ವಾಮಿಗೆ ಮುಖ್ಯಮಂತ್ರಿ ಮಾಡಿ,ಹಲವು ಯೋಜನೆ ಜಾರಿಗೋಳಿಸುವರು ಎಂದರು.
ತಾಲೂಕಿನ ಹಾಲಿ – ಮಾಜಿ ಶಾಸಕ ವಿರುದ್ಧ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಗುಡುಗಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೋನಿಯಾ ಗಾಂಧಿ ಚಿಂತೆ, ಆದರೆ, ಕುಮಾರಸ್ವಾಮಿಗೆ ರೈತರ ಚಿಂತೆಯಾಗಿದೆ. ಕೇಂದ್ರ ಸರ್ಕಾರ ಚುನಾವಣೆ ಬಂದಾಗ ಮಾತ್ರ ಹಿಂದೂ ಜಪ ಮಾಡುತ್ತಾರೆ.ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಪಂಚ ಯಾತ್ರೆಯ ಮೂಲಕ ಹಲವು ಯೋಜನೆ ಜಾರಿ ಮಾಡಲಾಗುತ್ತದೆ ಎಂದರು.
ಇದೇ ವೇಳೆಯಲ್ಲಿ ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಅವರು ಪದಾಧಿಕಾರಿಗಳಿಗೆ ಅದೇಶ ಪ್ರತಿ ನೀಡಿದರು. ರಾಜ್ಯ ಜೆಡಿಎಸ್ ವಕ್ತಾರೆ ನಗ್ಮಾ ನಜೀರ್, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕಿ ಅನಿತಾ ಕುಮಾರಸ್ವಾಮಿ ಅವರು 5000 ಮಹಿಳೆಯರಿಗೆ ಹೊಡಿ ತುಂಬಿದರು. ಜಿಲ್ಲೆಯ ವಿವಿಧ ತಾಲೂಕಿನ ಜೆಡಿಎಸ್ ಪಕ್ಷದ ಅಭ್ಯರ್ಥಿ, ಜಿಲ್ಲಾಧ್ಯಕ್ಷ ಸೇರಿದಂತೆ ಗಣ್ಯರು ಮುಖಂಡರು, ಪದಾಧಿಕಾರಿಗಳು ಸೇರಿದಂತೆ ನೂರಾರು ಮಹಿಳೆಯರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಇದ್ದಕೂ ಮುನ್ನ ಮುಖಂಡರನ್ಮು ಬಸ್ ನಿಲ್ದಾಣದಿಂದ ತೆರೆದ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಕಾರ್ಯಕ್ರಮ ಸ್ಥಳಕ್ಕೆ ಕರೆತರಲಾಯಿತು. ಮುಖಂಡ ಶರಣು ಕುಲಕರ್ಣಿ ಸ್ವಾಗತಿಸಿದರು. ಜೈ ಭೀಮ್ ತಂಡದಿಂದ ರೈತ ಗೀತೆ ಹಾಡಿದರು