ದಂಡೋತಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ

0
78

ಕಲಬುರಗಿ: ಜಿಲ್ಲೆಯ ಚಿತ್ತಾಪೂರು ತಾಲೂಕಿನಲ್ಲಿ ಇಂದು ಜಿಲ್ಲಾ ಪಂಚಾಯತ್ ಕಲಬರುಗಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಲಬುರಗಿ, ಸ್ವಚ್ಛ ಭಾರತ ಮಿಷನ್, ರೂಡಾ ಸಂಸ್ಥೆ ಕಲಬುರಗಿ, ಅಡವಿ ಸಿದ್ಧೇಶ್ವರ್ ಸಂಸ್ಥೆ, ಹಾಗೂ ಹಸ್ತಕಲಾ ಸಂಸ್ಥೆ ಕಲಬುರಗಿ, ಹಾಗೂ ಗ್ರಾಮ ಪಂಚಾಯತ ದಂಡೋತಿ ರವರ ಆಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮೊದಲಿಗೆ ಗ್ರಾಮದ ಎಲ್ಲಾ ಶಾಲಾ ಮಕ್ಕಳು ಮತ್ತು ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಗ್ರಾಮ ಪಂಚಾಯತಿಗಳು ಸಿಬ್ಬಂಧಿಗಳ ಮೂಲಕ ದಂಡೋತಿ ಗ್ರಾಮದಲ್ಲಿ ಜಾಥ ಮಾಡಲಾಯಿತು ಹಾಗೂ ಸ್ವಚ್ಛ ವಾಹಿನಿ ಮೂಲಕ ಹಸಿ-ಕಸ ಮತ್ತು ಒಣ ಕಸ ಸಲುವಾಗಿ ಗ್ರಾಮಸ್ಥರಿಗೆ ನೀಡಿರುವ ಬಕ್ಕೀಟನಲ್ಲಿ ಕಸ ವಿಂಗಡಿಸಿ ಸ್ವಚ್ಛ ವಾಹಿನಿಗೆ ನೀಡುವಂತೆ ಪ್ರಚಾರ ಕೈಗೊಳ್ಳಲಾಯಿತು. ಮತ್ತು ಶಾಲೆಯಲ್ಲಿಯು ಕಸವನ್ನು ವಿಂಗಡಿಸಿದ ಕಸವನ್ನು ಸ್ವಚ್ಛವಾಹಿನಿಗೆ ನೀಡಬೇಕೆಂದು ಶಾಲೆಯ ಎಲ್ಲಾ ಶಿಕ್ಷಕರಿಗೆ ಹೇಳಿಲಾಯಿತು ಮತ್ತು ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

Contact Your\'s Advertisement; 9902492681

ದಂಡೊತಿ ಗ್ರಾಮದ ಸಂಯುಕ್ತ ಪ್ರೌಢ ಶಾಲೆಯ ಹಿಂಭಾಗದ ವಾರ್ಡ ನಂ2 ರಲ್ಲಿ ಶ್ರಮದಾನ ಮಾಡಲಾಯಿತು.ಮತ್ತು ಗ್ರಾಮದ ನಿರಂತರ ಸ್ವಚ್ಛತೆಗೆ ಗ್ರಾಮಸ್ಥರು ಕಸವನ್ನು ಎಲ್ಲಿಂದರಲ್ಲಿ ಬಿಸಾಡದಂತೆ ಮನವರಿಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಮರೆಮ್ಮ ಶಿವಪ್ಪ ಗಂಭೀರ್, ಸದಸ್ಯರಾದ ಸಮೀರ್ ಸಏಡಂ, ಮಹ್ಮದ ಇಸಾಕ್, ದೇವಿದಾಸ ಹಾಗೂ ಜಲ ಜೀವನ್ ಮಿಷನ್ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಡಾ.ರಾಜು ಕಂಬಳಿಮಠ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಮಹಿಬೂಬ್ ಪಟೇಲ್, ರೇಖಾ ವಾಡಿ, ರಾಜಶೇಖರ ಸಣ್ಣಗುಂದಿ, ಶ್ರವಣಕುಮಾರ ಅಕ್ಕಿ, ಮನೋಜ, ಪ್ರವೀಣ ಚವ್ಹಾಣ, ಗ್ರಾಮದ ಎಲ್ಲಾ ಶಾಲಾ ಶಿಕ್ಷಕರು ರವರುಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here