ಶಹಾಬಾದ: ನಗರಸಭೆಯಲ್ಲಿ ಗುರುವಾರ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಅಧ್ಯಕ್ಷತೆಯಲ್ಲಿ ಹಾಗೂ ನಗರಸಭೆಯ ಪೌರಾಯುಕ್ತ ಅಶೋಕ ಬಿಲಗುಂದಿ ಸಮ್ಮುಖದಲ್ಲಿ ನಡೆದ 2015 – 16ನೇ ಸಾಲಿನÀ ಎಸ್‍ಎಫ್‍ಸಿ ಯೋಜನೆಯ ವಿಶೇಷ ಸಾಮಾನ್ಯ ಸಭೆ ಸಂಪೂರ್ಣ ಸದ್ದು ಗದ್ದಲದಿಂದ ಕೂಡಿತ್ತು.
ಸಭೆಯ ಪ್ರಾರಂಭವಾಗುತ್ತಿದ್ದಂತೆ ನಗರಸಭೆಯ ಪೌರಾಯುಕ್ತ ಅಶೋಕ ಬಿಲಗುಂದಿ ಮಾತನಾಡಿ, ಬಸವೇಶ್ವರ ಮೂರ್ತಿಗಾಗಿ 2015 – 16ನೇ ಸಾಲಿನÀ ಎಸ್‍ಎಫ್‍ಸಿ ಯೋಜನೆಯ ಬಸವೇಶ್ವರ ಕಟ್ಟೆ ನಿರ್ಮಾಣಕ್ಕಾಗಿ 15 ಲಕ್ಷ ರೂಪಾಯಿ ಕಾಯ್ದಿರಿಸಲಾಗಿದ್ದು, ಅದನ್ನು ಬಸವೇಶ್ವರ ಮೂರ್ತಿ ಖರೀದಿಸಲು ಕಾಮಗಾರಿ ಬದಲಾವಣೆ ಮಾಡುವುದಕ್ಕೆ ಅನುಮೋದನೆ ನೀಡಬೇಕೆಂದು ಸರ್ವ ಸದಸ್ಯರಲ್ಲಿ ಮನವಿ ಮಾಡಿದರು.
ತಕ್ಷಣವೇ ನಗರಸಭೆಯ ಸದಸ್ಯರಾದ ರವಿ ರಾಠೋಡ, ನಾಗೇಂದ್ರ ಕರಣಿಕ್ ಹಾಗೂಪಾರ್ವತಿ ಪವಾರ ಅವರು ಈಗಾಗಲೇ ಬಸವೇಶ್ವರ ಮೂರ್ತಿ ಹೆಸರಿನಲ್ಲಿ ಸಾರ್ವಜನಿಕರ ಮತ್ತು ಸರಕಾರದ ಹಣ ದುರ್ಬಳಕೆ ಆಗಿದೆ.ಅಲ್ಲದೇ ದುರ್ಬಳಕೆ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬಸವೇಶ್ವರ ಮೂರ್ತಿ ಕಟ್ಟೆ ನಿರ್ಮಾಣಕ್ಕಾಗಿ 2015-16 ನಗರ ಸಭೆ ನಿಧಿ ಅನುಧಾನದಿಂದ ರೂ. 5-00 ಲಕ್ಷ ಖರ್ಚು ಮಾಡಲಾಗಿದೆ. ಬಸವೇಶ್ವರ ಮೂರ್ತಿ ಕಟ್ಟೆ ನಿರ್ಮಾಣಕ್ಕಾಗಿ 2021-22 ರ ಸಾಲಿನಲ್ಲಿ ನಗರ ಸಭೆ ನಿಧಿ ಅನುದಾನದಿಂದ ರೂ.11-50 ಲಕ್ಷ ಖರ್ಚು ಮಾಡಲಾಗಿದೆ. 2016-17 ಸಾಲಿನ ಎಸ್.ಎಫ್.ಸಿ ಅನುಧಾನದಿಂದ ರೂ. 15-00 ಲಕ್ಷ ಮತ್ತು ನಗರಸಭೆ ನಿಧಿಯಿಂದ ರೂ.28.68 ಲಕ್ಷ ಒಟ್ಟು ರೂ. 43.68 ಲಕ್ಷ.ರೂಪಾಯಿ ವೆಚ್ಚ ಮಾಡಿ ಸದರಿ ಕಾಮಗಾರಿ ಪೂರ್ಣಗೊಳಿಸಲಾಗಿದೆ.ಈಗಾಗಲೇ ಮೂರ್ತಿ ಕಟ್ಟೆ ಕಟ್ಟಲಾಗಿದೆ. ಮೂರ್ತಿಯೂ ಬಂದಾಗಿದೆ.ಅಲ್ಲದೇಮೂರ್ತಿ ಖರೀದಿಗಾಗಿ 25 ಲಕ್ಷ ರೂ. ಕಾನೂನು ಬಾಹಿರವಾಗಿ ಮುಂಗಡ ಹಣ ಪಾವತಿಸಲಾಗಿದೆ.ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಆಕ್ರೋಶ ಹೊರಹಾಕಿದರು.
ಈಗಾಗಲೇ ಹಣ ಖರ್ಚಾಗಿದೆ.ಆದರೆ ಮತ್ತೆ 2015 – 16ನೇ ಸಾಲಿನÀ ಎಸ್‍ಎಫ್‍ಸಿ ಯೋಜನೆಯ ಹಣವನ್ನು ಮತ್ತೆ ಬಳಕೆ ಮಾಡುವುದು ನೋಡಿದರೇ ಹಣ ದುರ್ಬಳಕೆ ಮಾಡಲು ಬದಲಾವಣೆ ಮಾಡಲಾಗುತ್ತಿದೆ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಆರೋಪಿಸಿದರು. 2016-17 ಸಾಲಿನ ಎಸ್.ಎಫ್.ಸಿ ಅನುದಾನ 15 ಲಕ್ಷ ರೂ.ಇನ್ನೂ ಬಳಕೆ ಮಾಡಿಲ್ಲ ಎಂದು ಪೌರಾಯುಕ್ತರು ಹೇಳಿದಕ್ಕೆ, ಸೂಕ್ತ ದಾಖಲೆ ಹಾಗೂ ಬ್ಯಾಂಕ್ ಪಾಸ್ ಬುಕ್ ನೀಡಲು ಒತ್ತಾಯಿಸಿದರು.ಇದರಿಂದ ಅಧಿಕಾರಿಗಳು ಹಿಂದೆ ಮುಂದೆ ನೋಡುತ್ತ ಉತ್ತರ ನೀಡದೇ ಸಮಜಾಯಿಷಿ ನೀಡಲು ಮುಂದಾದರು.
ಮಧ್ಯದಲ್ಲಿ ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್, ಇನಾಯತಖಾನ ಜಮಾದಾರ ಇತರರು ಮೂರ್ತಿ ಉದ್ಘಾಟನೆಯಾಗಬೇಕೆಂದು ಎಲ್ಲರ ಆಸೆ ಇದೆ.ಇದೊಂದು ಸಾಮಾಜಿಕ ಕಾರ್ಯ.ಇದನ್ನು ಮಾಡಿ ಎಂದು ಅಭಿಪ್ರಾಯ ಸಲ್ಲಿಸಿದರು.ಅಲ್ಲದೇ ಸದಸ್ಯ ಸೂರ್ಯಕಾಂತ ಕೋಬಾಳ ಎಸ್.ಎಫ್.ಸಿ ಅನುದಾನದ ಬಳಕೆಗೆ ಸರ್ವ ಸದಸ್ಯರ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದಕ್ಕೆ, ರವಿ ರಾಠೋಡ, ನಾಗೇಂದ್ರ ಕರಣಿಕ್ ಬಸವೇಶ್ವರ ಮೂರ್ತಿಸ್ಥಾಪನೆಯಾಗುವುದಕ್ಕೆ ವಿರೋಧವಿಲ್ಲ.ಆದರೆ ಮೂರ್ತಿ ಹೆಸರಿನಲ್ಲಿ ಹಣ ದುರ್ಬಳಕೆಯಾಗುತ್ತಿರುವುದಕ್ಕೆ ವಿರೋಧವಿದೆ ಎಂದರು.
ಒಟ್ಟಾರೆ ಪರಸ್ಪರ ಸದಸ್ಯರ ನಡುವೆ ವಾದ ವಿವಾದಗಳು, ವಾಕ್ಸಮರ ನಡೆದು ಕೊನೆಗೂ ಸದ್ದುಗದ್ದಲದಿಂದ ಮುಕ್ತಾಯಗೊಂಡಿತು. ಅನುಮೋದನೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದರೆ, ಕೆಲವು ಸದಸ್ಯರು ಮಾತ್ರ ಅನುಮೋದನೆ ಪಡೆದಿಲ್ಲ ಎಂದು ಕಿಡಿಕಾರಿದರು.
ನಗರ ಸಭೆಯ ಉಪಾಧ್ಯಕ್ಷೆ ಸಲೀಮಾ ಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ, ನಗರ ಸಭೆಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.