ಗುಣಮಟ್ಟದ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಕರಡ್ಯಾಳ ಗುರುಕುಲ

0
15

ಭಾಲ್ಕಿ: ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ಶಾಲೆಯಲ್ಲಿ ಹಮ್ಮಿಕೊಂಡಿರುವ ಸತ್ಸಂಗ ಸಮಾರಂಭದ ದಿವ್ಯ ಸನ್ನಿಧಾನ ವಹಿಸಿದ ಬೀದರನ ಚಿದಂಬರಾಶ್ರಮ, ಶ್ರೀ ಸಿದ್ಧಾರೂಢ ಮಠದ ಪೂಜ್ಯ ಶ್ರೀ ಶ್ರೋ. ಬ್ರ. ಡಾ.ಶಿವಕುಮಾರ ಮಹಾಸ್ವಾಮಿಗಳು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಒಳ್ಳೆಯ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣವನ್ನು ಪೂಜ್ಯರು ನೀಡುತ್ತಿರುವುದು ಅಭಿನಂದನಾರ್ಹವಾಗಿದೆ. ಇಲ್ಲಿ ಕಲಿತ ಗ್ರಾಮೀಣ ಭಾಗದ ಮಕ್ಕಳು ದೇಶ-ವಿದೇಶಗಳಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕಲ್ಯಾಣ ಕರ್ನಾಟಕ ಹಿಂದುಳಿದ ಭಾಗವಲ್ಲ. ಇದು ಬಸವಾದಿ ಶರಣ ನಡೆದಾಡಿದ ಪುಣ್ಯಭೂಮಿಯಾಗಿದೆ. ಈ ಕಲ್ಯಾಣ ನಾಡಿಗೆ ದೊಡ್ಡ ಪರಂಪರೆಯೆ ಇದೆ. ಇಂತಹ ಭೂಮಿಯಲ್ಲಿ ಇರುವ ನಾವೆಲ್ಲರೂ ಪುಣ್ಯವಂತರು ಎಂದು ನುಡಿದರು.

Contact Your\'s Advertisement; 9902492681

ಅಧ್ಯಕ್ಷತೆ ವಹಿಸಿದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳವರು ಅನೇಕ ವರ್ಷಗಳ ಹಿಂದೆ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಈ ಭಾಗದಲ್ಲಿ ಶಿಕ್ಷಣದ ಉಳಿವಿಗಾಗಿ ಶ್ರಮಿಸಿದ್ದಾರೆ ಎಂದು ನುಡಿದರು.

ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದ ಪಂಚಕಮೀಟಿಯ ಹೊಸ ಅಧ್ಯಕ್ಷರಾದ ಶ್ರೀ ಬಸವರಾಜ ಭೊಜಪ್ಪ ಕೊರ್ಕೆ, ಹಾಗೂ ಉಪಾಧ್ಯಕ್ಷರಾದ ಶ್ರೀ ಶ್ರೀಕಾಂತ ಬಡದಾಳೆ ಅವರಿಗೆ ಪೂಜ್ಯ ಶ್ರೀಗಳಿಂದ ಗೌರವಿಸಿ ಸನ್ಮಾನ ಮಾಡಲಾಯಿತು. ಶರಣರಾದ ಸಿದ್ರಾಮಪ್ಪ ಕಪಲಾಪೂರೆ ಅವರು ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಪ್ರಾಚಾರ್ಯರಾದ ಬಸವರಾಜ ಮೊಳಕೆರೆ ಅವರು ಮಾತನಾಡಿದರು. ಲಕ್ಷ್ಮಣ ಮೇತ್ರೆ ನಿರೂಪಿಸಿದರು. ಪಿ.ಯು.ಕಾಲೇಜು ವಿದ್ಯಾರ್ಥಿಯಾದ ಕು.ಅಂಕಿತಾ ಅವರಿಂದ ವಚನ ಪ್ರಾರ್ಥನೆ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here