ಸುರಪುರ; ನಗರದ ನ್ಯಾಯಾಲಯ ಆವರಣದಲ್ಲಿ ತಾಲುಕು ಕಾನೂನು ಸೇವಾ ಸಮಿತಿ,ತಾಲೂಕು ನ್ಯಾಯವಾದಿಗಳ ಸಂಘದ ವತಿಯಿಂದ ವಿಶ್ವ ಅಂಗವಿಕಲರ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ದಿವಾಣಿ ನ್ಯಾಯಾಧೀಶ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ ಮಾತನಾಡಿ,1994 ರಲ್ಲಿ ವೀಶ್ವ ಸಂಸ್ಥೆ ಮೊದಲಬಾರಿಗೆ ಅಂಗವಿಕಲರ ದಿನವನ್ನು ಆಚರಿಸಿದೆ.ಇಂದು ವಿಕಲ ಚೇತನರಿಗೆ ಸರಕಾರ ಅನೇಕ ಸೌಲಭ್ಯಗಳನ್ನು ನೀಡಿದ್ದು ಅವುಗಳ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಎಮ್.ಆರ್.ಡಬ್ಲ್ಯೂ ಮಾಳಪ್ಪ ಪೂಜಾರಿ ಮಾತನಾಡಿ,ವಿಕಲ ಚೇತನರಿಗೆ ಸರಕಾರ ಶಿಕ್ಷಣ,ಉದ್ಯೋಗದಲ್ಲಿ ಮೀಸಲಾತಿ ನೀಡಿದೆ,ವಸತಿ ಯೋಜನೆಯಲ್ಲಿ ಮೀಸಲಾತಿ ನೀಡಿದೆ,ತಿಂಗಳ ಮಾಸಾಶನ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಿದೆ.ಅಲ್ಲದೆ 1995ರ ಕಾಯಿದೆಯಂತೆ ಕೇವಲ 7 ವಿಧದ ವಿಕಲ ಚೇತನರನ್ನು ಗುರುತಿಸಲಾಗಿತ್ತು,ಈಗ 2015ರ ಕಾಯಿದೆಯಂತೆ 21 ವಿಧದ ವಿಕಲ ಚೇತನರನ್ನು ಗುರುತಿಸಿ ಸೌಲಭ್ಯಗಳ ನೀಡಲಾಗುತ್ತಿದೆ ಎಂದರು.ಅಲ್ಲದೆ ನ್ಯಾಯಾಲಯದಲ್ಲಿ ವಿಕಲ ಚೇತನರ ಯಾವುದೇ ಪ್ರಕರಣ ಅಥವಾ ಕಾರ್ಯಗಳಿದ್ದಲ್ಲಿ ತಕ್ಷಣದಲ್ಲಿಯೇ ಮಾಡಿಕೊಡುವಂತೆ ನ್ಯಾಯಾಲಯಕ್ಕೆ ವಿನಂತಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ವಕೀಲ ಚನ್ನಪ್ಪ ಹೂಗಾರ ಹಾಗೂ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ನಂದಪ್ಪ ಬಾಕ್ಲಿ ಮಾತನಾಡಿದರು. ವೇದಿಕೆ ಮೇಲೆ ದಿವಾಣಿ ನ್ಯಾಯಾಧೀಶರಾದ ಮಾರುತಿ ಕೆ,ಬಸವರಾಜ ಹಾಗೂ ಸಹಾಯಕ ಸರಕಾರಿ ಅಭಿಯೋಜಕರಾದ ಮರೇಪ್ಪ ಹೊಸಮನಿ,ವಸಂತ,ವಕೀಲರ ಸಂಘದ ಉಪಾಧ್ಯಕ್ಷ ಮಾನಪ್ಪ ಕವಡಿಮಟ್ಟಿ,ವಕೀಲರಾದ ಬಸವರಾಜ ಕಿಲ್ಲೇದಾರ,ವಿ.ಎಸ್.ಬೈಚಬಾಳ,ವಿಕಲ ಚೇತನರ ಸಂಘದ ಅಧ್ಯಕ್ಷ ನಾಗೇಂದ್ರ ಚಂದಲಾಪುರ ಇದ್ದರು,ವಕೀಲ ಕೃಷ್ಣಾ ಕೊಂಗಿ ನಿರೂಪಿಸಿದರು,ಮಂಜುನಾಥ ಉದ್ದಾರ ವಂದಿಸಿದರು.ಇದೇ ಸಂದರ್ಭದಲ್ಲಿ ನ್ಯಾಯಾಲಯ ಆವರಣದಲ್ಲಿ ವಿಲಕ ಚೇತನರಿಗೆ ತ್ರೀಚಕ್ರ ವಾಹನಗಳನ್ನು ವಿತರಿಸಲಾಯಿತು.