ಡಾ.ಅಂಬೇಡ್ಕರ್ ನಿಗಮದ ಡಿಜಿಎಂ ವಿರುದ್ಧ ಜಿಲ್ಲಾಧಿಕಾರಿಗೆ ದೂರು

0
122

ಕಲಬುರಗಿ: ಕಳೆದ 5 ವರ್ಷಗಳಿಂದ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಉಪ ಪ್ರದಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಹರ್ಷ ಡಿ ಗಾಂವಕರ್ ಅವರ ಜಿಲ್ಲಾಧಿಕಾರಿಗಳು ನಡೆಸುವ ಯಾವುದೇ ಸಭೆಗೆ ಹಾಜರಾಗುವುದಿಲ್ಲ. ಖಾಯಂ ಧಾರವಾಡದಲ್ಲೇ ಇದ್ದು ಸರ್ಕಾರದ ಸಂಬಳ ಪಡೆಯುತ್ತಾರೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಜಿಲಾಧ್ಯಕ್ಷ ಮಲ್ಲಿಕಾರ್ಜುನ ಕೆರಮಗಿ ಅವರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿಗಳು ಕರೆಯವ ಸಭೆಗೆ ಕಡ್ಡಾಯವಾಗಿ ಡಿಜಿಎಂ ಇರುವಂತೆ ಆದೇಶ ಹೊರಡಿಸಬೇಕು. 3 ತಿಂಗಳಿಗೊಮ್ಮೆ ಬಂದು ಕಲಬುರಗಿಯ ಐಶಾರಾಮಿ ಲಾಡ್ಜ್ ನಲ್ಲಿ ಉಳಿದುಕೊಂಡು ಕಡತಗಳನ್ನು ಅಲ್ಲಿಗೆ ತರಿಸಿಕೊಳ್ಳುತ್ತಾರೆ. ಈ ಬಗ್ಗೆ ನಿಗಮದ ಸಿಸಿಟಿವಿ ಪರಿಶೀಲಿಸಬೇಕು. ಮಹಿಳಾ ಫಲಾನುಭವಿಗಳಿದ್ದರೂ ಸಹ ಲಾಡ್ಜ್ ಗೆ ಕರೆಸಿಕೊಂಡು ಸಹಿ ಮಾಡಿಕೊಡುವ ಭರವಸೆ ನೀಡುತ್ತಿದ್ದಾರೆ. ನಿಗಮದ ಹೊರಮೂಲ ಸಿಬ್ಬಂದಿಗಳಿಂದ ಹಣವನ್ನು ಸಂಗ್ರಹಿಸಿಕೊಂಡು ಹೋಗಲು ಮಾತ್ರ ನಿಗಮಕ್ಕೆ ಬರುತ್ತಾರೆ.

Contact Your\'s Advertisement; 9902492681

ಪರಿಶಿಷ್ಟ ಜಾತಿಯ ಮಹಿಳಾ ಫಲಾನುಭವಿಗಳಿಗೆ ಲಾಡ್ಜ್ ಗೆ ಕರೆಸಿಕೊಂಡು ಕಡತ ಪರಿಶೀಲನೆ ಮಾಡುತ್ತಿರುವ ಡಿಜಿಎಂ ಹರ್ಷಾ ಗಾಂವಕರ್ ಮೇಲೆ ದಲಿತ ದೌರ್ಜನ್ಯ(ಅಟ್ರಾಸಿಟಿ) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು. ಅಲ್ಲದೆ ಫಲಾನುಭವಿಗಳ ಭೂ ಒಡೆತನ ಯೋಜನೆಯ 10% ಮತ್ತು ಗಂಗಾಕಲ್ಯಾಣ ಯೋಜನೆಯ 10% ಡಿಜಿಎಂ ಖುದ್ದು ಪರಿಶೀಲಿಸಬೇಕು ಎಂಬ ನಿಯಮ ಇದ್ದರೂ ಸಹ ಇಡೀ ವಿಭಾಗದಲ್ಲಿ ಯಾವ ಜಮೀನಿಗೂ ಭೇಟಿ ನೀಡುವುದಿಲ್ಲ. ನಕಲಿ ಜಿಪಿಎಸ್ ಮಾಡಿಕೊಂಡ ಪೋಟೊಗಳು ದಾಖಲೆಗಳಲ್ಲಿ ಇಡಲಾಗುತ್ತಿದೆ.

ಡಿಜಿಎಂ ಅವರ ಚಲನವಲನದ ಡೈರಿ, ಲಾಗ್‍ಬುಕ್, ವಾಹನದ ಡಿಸೇಲ್ ಖರ್ಚು, ಎಲ್‍ಪಿಎಸ್ ಜಿಪಿಎಸ್ ಪೋಟೋ, ಗಂಗಾಕಲ್ಯಾಣ ಜಿಪಿಎಸ್ ಪೋಟೋ ಸಂಪೂರ್ಣ ತನಿಖೆಗೆ ಒಳಪಡಿಸಬೇಕು ಎಂದು ಜಿಲಾಧಿಕಾರಿಗಳ ಮೂಲಕ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಜಿ.ಎಂ ಬಡಿಗೇರ, ಜಿ. ಶಿವಶಂಕರ್, ಸಂಜೀವ ಕುಮಾರ ಮೇಲಿನಮನಿ, ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here