ಅಂಬೇಡ್ಕರ್ 66 ನೇ ಮಹಾಪರಿನಿರ್ವಾಣ ದಿನಾಚರಣೆ ಆಚರಣೆ

0
18

ಕಲಬುರಗಿ: ಅನನ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ 66 ನೇ ಮಹಾಪರಿನಿರ್ವಾಣ ದಿನಾಚರಣೆ ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಕಾಲೇಜಿನ ಅಧ್ಯಕ್ಷ ಸುಷ್ಮಾವತಿ ಹೊನ್ನಗೆಜ್ಜೆ ಮಾತನಾಡಿ ಅಂಬೇಡ್ಕರ ರವರ ಜೀವನ ಹಾಗೂ ಸಾಧನೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

Contact Your\'s Advertisement; 9902492681

ಪ್ರಾಂಶುಪಾಲರಾದ ಡಾ. ಶರಣಪ್ಪ ಹೊನ್ನಗೆಜ್ಜೆ ಅವರು ಮಾತನಾಡಿ ಅಂಬೇಡ್ಕರ ರವರ ತತ್ವಗಳಾದ ಶಿಕ್ಷಣ, ಸಂಘಟನೆ, ಹೋರಾಟಗಳ ವಿಚಾರಣೆಗಳನ್ನು ಕುರಿತು ವ್ಯಕ್ತಪಡಿಸಿದರು.

ಉಪನ್ಯಾಸಕಿ ಡಾ. ಸರಿತಾ ಕರಿಗುಡ್ಡ ಮಾತನಾಡಿ ಬೌಧ್ಧ ಧರ್ಮದಲ್ಲಿ ಪರಿನಿರ್ಮಾಣದ ತತ್ವದ ಅರ್ಥ ವಿವರಣೆ ಮಕ್ಕಳಿಗೆ ಮನವರಿ ಮಾಡಿಕೊಟ್ಟರು. ಇನ್ನೊರ್ವ ಉಪನ್ಯಾಸಕರಾದ ಗೌರಿ ಬೇಚಗೇರಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ರವರು ಭಾರತಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ತಿಳಿ ಹೇಳಿದರು. ಈ ಸಂಧರ್ಭದಲ್ಲಿ ಆಶಾರಾಣಿ ಕಂಕ್ಕೋರಿ, ಪ್ರೀತಿ ಸಜ್ಜನ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here