ಸುರಪುರ: ತಾಲೂಕಿನ ಬಾದ್ಯಾಪೂರ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಸಾಂಸ್ಕ್ರತಿಕ ಯುವಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದಲ್ಲಿ ಸಾಂಸ್ಕ್ರತಿಕ ಉತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ತಾ.ಪಂ ಸದಸ್ಯ ದೊಡ್ಡಕೊತಲೆಪ್ಪ ಹಾವಿನ್ ಮಾತನಾಡಿ, ಜನಪದ ಕಥೆ-ಕಾವ್ಯಗಳಲ್ಲಿ ಸತ್ಯ ಮತ್ತು ನೀತಿ ಬೋಧನೆ ಅಡಗಿವೆ ಎಂದರು. ಜನಪದ ಕಥೆ-ಕಾವ್ಯಗಳು ಆಧರಿಸಿ ಧಾರವಾಹಿ,ಸಿನಿಮಾ ನಿರ್ಮಾಣವಾಗುತ್ತಿದ್ದು ಒಂದು ವಿಶ್ವವಿದ್ಯಾಲಯಕ್ಕೆ ಸಮಾನ ಜ್ಞಾನ ಹೊಂದಿರುತ್ತಾರೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೀರಲಿಂಗಪ್ಪ ಎನ್ ಮಗ್ಗದ್ ಮಾತನಾಡಿ, ಭಾರತೀಯ ಭಾಷೆ ಇತಿಹಾಸದಲ್ಲಿ ಕನ್ನಡಕ್ಕೆ ವಿಶೇಷ ಮಾನ್ಯತೆ ಇದೆ. ಜನಪದ ಕಥೆ-ಕಾವ್ಯಗಳು ಸಾಹಿತ್ಯಕ್ಕೆ ಮೂಲ ಬೇರು ಏನಿಸಿವೆ. ಸಂಸ್ಥೆಯ ಅಧ್ಯಕ್ಷ ಮಲ್ಲು ಬಾದ್ಯಾಪುರ ಪ್ರಾಸ್ಥವಿಕವಾಗಿ ಮಾತನಾಡಿ, ಜನಪದ ಕಲೆ ನಮ್ಮ ಭಾಗದಲ್ಲಿ ಹೆಚ್ಚು ಇದ್ದು ಕಲಾವಿದರಿಗೆ ವೇದಿಕೆ ಕಲ್ಪಿಸುವುದರ ಮುಖಾಂತರ ಜನಪದ ಕಲೆ ಉಳಿಸುವಂತಹ ಕೆಲಸ ಮಾಡಬೇಕು ಕಲಾವಿದರ ಕಲೆಯನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಲು ಪ್ರೋತ್ಸಾಹಿಸಬೇಕೆಂಬ ಉದ್ದೇಶದಿಂದ ಈ ಸಂಸ್ಥೆಯನ್ನು ಹುಟ್ಟು ಹಾಕಲಾಗಿದ್ದು ಕಲಾವಿದರು ಯುವ ಕಲಾವಿದರ ಬೆಳವಣಿಗೆಗೆ ಸಂಸ್ಥೆಯೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಮುಖಂಡರಾದ ಶರಣಪ್ಪ ಎತ್ತಿನಮನಿ, ದೇವಿಂದ್ರಪ್ಪ ಬಡಿಗೇರ, ನಿಂಗಣ್ಣ ಬಾಡದ್, ಭೀಮಣ್ಣ ಕೊಡಮನಳ್ಳಿ ಹಣಮಂತ್ರಾಯಗೌಡ,ಕಾಳಪ್ಪ ಬಡಿಗೇರ ರವರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಹಿರಿಯ ಜನಪದ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಯಿತು.