ಸುರಪುರ: ಕೃಷಿ ವಿಜ್ಞಾನ ಕೇಂದ್ರ, ಯಾದಗಿರಿ, ಶೋರಾಪುರ ತಾಲೂಕ ಮಿಲ್ಲೆಟ್ಸ ರೈತ ಉತ್ಪಾದಕ ಕಂಪನಿ ನಿಯಮಿತ ಹಾಗು ಪಾರದೀಪ ಫಸ್ಪೇಟ ಲಿಮಿಟೆಡ ಇವರುಗಳ ಸಂಯುಕ್ತಾಶ್ರಯದಲ್ಲಿ ಶೆಳ್ಳಗಿ ಗ್ರಾಮದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನವನ್ನು ರೈತರೂಂದಿಗೆ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರಾದಂತಹ ಡಾ. ಜಯಪ್ರಕಾಶ ನಾರಾಯಣ ರವರು ಮಾತನಾಡಿ ರೈತರ ವ್ಯವಸಾಯ ಜೀವನದಲ್ಲಿ ಮಣ್ಣಿನ ಮಹತ್ವ, ಮಣ್ಣಿನ ಆರೋಗ್ಯ ಮತ್ತು ಫಲವತತ್ತೆ ಕಾಪಾಡುವಲ್ಲಿ ಸಾವಯುವ ಗೂಬ್ಬರ, ಜೈವಿಕ ಗೂಬ್ಬರ, ಕೂಟ್ಟಿಗೆ ಗೂಬ್ಬರ ಮತ್ತು ಬೆಳೆ ಪರಿವರ್ತನೆಯ ಮಹತ್ವದ ಬಗ್ಗೆ ರೈತರಿಗೆ ತಿಳಿಸುದರು. ಸರಿಯಾದ ಸಮಯಕ್ಕೆ ಮಣ್ಣು ಪರೀಕ್ಷೆ ಮಾಡಿಸಿ ಅದರ ಆಧಾರದ ಮೇಲೆ ಭೂಮಿಗೆ ಬೇಕಾದಷ್ಟೆ ಗೂಬ್ಬರ ನೀಡಬೇಕೆಂದು ಸಲಹೆ ನೀಡಿದರು.
ಡಾ. ಉಮೇಶ ಬರಿಕರ ಮಾತನಾಡಿ, ಕೇವಲ ನಾವು ಸಾವಯುವ ಗೂಬ್ಬರ, ಜೈವಿಕ ಗೂಬ್ಬರ ಹಾಗು ಕೂಟ್ಟಿಗೆ ಗೂಬ್ಬರಗಳನ್ನು ಹಾಕಿ ಮಣ್ಣು ಆರೋಗ್ಯವಾಗಿ ಮತ್ತು ಫಲವತ್ತಾಗಿರಿಸಿದರೆ ಸಾಲದು ಬದಲಾಗುತ್ತಿರುವ ಹವಮಾನ ವೈಪರಿತ್ಯಗಳಿಗೆ ಮಣ್ಣು ಮತ್ತು ನೀರು ಸಂರಕ್ಷಣ ವಿಧಾನಗಳ ಬಗ್ಗೆ ತಿಳಿಸಿದರು.
ಡಾ. ಕೋಟ್ರೆಶ ಪ್ರಸಾದ ರವರು ಮಾತನಾಡಿ ಮಣ್ಣು ಆರೋಗ್ಯ ಕಾಪಾಡುವಲ್ಲಿ ಪ್ರಾಣಿಗಳ ತ್ಯಾಜ್ಯದ ಮಹತ್ವ ಹಾಗು ಇತ್ತಿಚಿಗೆ ರಾಸುಗಳಲ್ಲಿ ಕಾಣಿಸಿಕೂಳ್ಳುತ್ತಿರುವ ಲಂಫಿ ರೋಗಕ್ಕೆ ಮುಂಜಾಗ್ರತ ಕ್ರಮಗಳ ಬಗ್ಗೆ ತಿಳಿಸಿದರು. ಪಾರದೀಪ ಫಸ್ಪೇಟ ಲಿಮಿಟೆಡನ ವಿನೋದ ಸಂಕ್ರಿ ಅವರು ಮಾತನಾಡಿ ಮಣ್ಣಿನ ಆರೋಗ್ಯ ಸುಸ್ಥಿರವಾಗಿಡಲು ಕೇವಲ ರಾಸಯನಿಕ ಗೂಬ್ಬರಗಳನ್ನು ಬಳಸದೆ ಅದರ ಜೂತೆ ಸಾವಯುವ ಗೂಬ್ಬರ ಮತ್ತು ಸಿಟಿ ಕಾಂಪೋಸ್ಟಗಳನ್ವು ಬಳಸಲು ತಿಳಿಸಿದರು.
ಪಾರದೀಪ ಫಸ್ಪೇಟ ಲಿಮಿಟೆಡ ನ ಗೂಬ್ಬರಗಳ ಮಾಹಿತಿಯನ್ನು ರೈತರಿಗೆ ತಿಳಿಸಿದರು.ಈ ಸಂಧರ್ಬದಲ್ಲಿ ಎಂ.ಸಿ.ಎಫ್. ಸಿಬ್ಬಂದಿ ಶ್ರೀನಿವಾಸ, ಭಾರತೀಯ ಸಿರಿಧಾನ್ಯ ಸಂಶೋಧನ ಸಂಸ್ಥೆಯ ಸಿಬ್ಬಂದಿ ಕೈಲಾಶ ಕೋರಿಶೆಟ್ಟಿ, ನಿರ್ದೇಶಕರಾದಂತಹ ಅಂಬರಿಶ ನಾಡಗೌಡ, ತಿಪ್ಪಣ್ಣ, ಶೆಳಿಗೆಪ್ಪ ಹಾಗು ಹುಲಗೆಪ್ಪ ಮತ್ತು ಗ್ರಾಮದ ರೈತರು ಹಾಜರಿದ್ದರು.