ಮಾಹತ್ಮರ ವಿಚಾರ ಸರ್ವಕಾಲಕ್ಕು ಶ್ರೇಷ್ಠ: ಕಮಾನಮನಿ

0
240

ಚಿಂಚೋಳಿ: ಸಮಾಜದಲ್ಲಿ ಪ್ರತಿಯೊಬ್ಬರು ಮಾಹತ್ಮರ ಆಚಾರ-ವಿಚಾರಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಡೆದಾಗ ಮಾಹತ್ಮರು ಕಂಡ ಸಮಾ-ಸಮಾಜದ ಕನಸು ನನಸಾಗುವುದರಲ್ಲಿ ಯಾವುದೇ ಸಂದೇಹವಿಲ್ಲಾವೆಂದು ಚಿಂಚೋಳಿ ಪೋಲಿಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರಾದ ಅಂಬರಾಯ ಕಮಾನಮನಿ ಹೇಳಿದರು.

ಚಂದಾಪೂರ ಪಟ್ಟಣದ ಆಶ್ರಯ ಕಾಲೂನಿಯಲ್ಲಿ ಹಮ್ಮಿಕೊಂಡಿರುವ ಡಾ.ಬಿ.ಆರ್.ಅಂಬೇಡ್ಕರ ರವರ ಮಾಹಪರಿನಿರ್ವಾಹಣ ಹಾಗೂ ಶರಣ ಮಾದಾರ ಚೆನ್ನಯ್ಯಾ ರವರ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಮುಂದುವರೆದು ಸಂವಿಧಾನದ ಮುಖಾಂತರ ಸರ್ವರಿಗೂ ಸಮಬಾಳು ಸರ್ವರಿಗು ಸಮಪಾಲು ಕೊಟ್ಟ ಡಾ.ಬೀಮರಾವದ ಅಂಬೇಡ್ಕರವರ ಕೊಡುಗೆ ಅನನ್ಯವಾಗಿದೆ ಎಂದರು ನಂತರ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಪಾದರ್ ವಿನಯ್ ವಿಲ್ಬರ್ಟ ರವರು ಮಾದಾರ ಚೆನ್ನಯ್ಯಾರವರು ೧೨ ನೇಯ ಶತಮಾನದ ಸಮಾನತೆಗಾಗಿ ದುಡಿದ ಕ್ರಾಂತಿಕಾರಿ ಶರಣರಲ್ಲೊಬ್ಬರಾದ ಶರಣ ಚೆನ್ನಯ್ಯಾ ರವರು ತಮ್ಮ ಆಂತರಿಕ ಆದ್ಯಾತ್ಮಕ ಶಕ್ತಿಯಿಂದ ಅಜರಾಮರವಾಗಿದ್ದಾರೆ ಅಂತಹ ಮಾಹತ್ಮರ ಸಂದೇಶಗಳನ್ನು ಮೆಲಕು ಹಾಕುವುದು ಇಂದಿನ ಸಮಾಜಕ್ಕೆ ಅವಶ್ಯವಾಗಿದೆ ಎಂದು ಹೇಳಿದರು ಜಗನ್ನಾಥ ಕಟ್ಟಿಮನಿರವರು ಕಾರ್ಯಕ್ರಮದ ಉಪನ್ಯಾಸ ನೀಡಿದರು.

ಅತಿಥಿಗಳಾಗಿ ಈರಪ್ಪ ತಾಡಪಳ್ಳಿ ಜಗನ್ನಾಥ್ ರಾಮತಿರ್ಥ ಮಹ್ಮದ್ ಲೋಹಿತ್ ಪ್ರೇಮ ಕಟ್ಟಿ ಮಾರುತಿ ಗಂಜಗಿರಿ ಸತೀಶ್ ಸಿದ್ದು ರಂಗನೂರ ವಿಘ್ನೇಶ್ ಜೀವನ ಅಭಿ ಶೇಷಮ್ಮಾಕಮಲಕರ ಹೂವಿನಬಾವಿ ಸರಸ್ವತಿ ಪದ್ಮಾವತಿ ಜಗದೇವಿ ದಸ್ತಮ್ಮ ಸುವರ್ಣ ಭಾಗೇಶ್ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here