790 ಸಾವಿರ ಅಮೇರಿಕನ್ ಡಾಲರ್ ಸಂಗ್ರಹಿಸಿದ ಹೂವು ಫ್ರೆಶ್

0
20

ಬೆಂಗಳೂರು; ತಾಜಾ ಹೂವುಗಳ ನವೋದ್ಯಮ ಹೂವು ಫ್ರೆಶ್ ನಿಧಿ ಸಂಗ್ರಹದ ಪ್ರೀ-ಸೀರೀಸ್‍ನಲ್ಲಿ 790,000 ಅಮೇರಿಕನ್ ಡಾಲರ್‍ಗಳನ್ನು ಸಂಗ್ರಹಿಸಿದೆ. ಈ ನಿಧಿ ನೆರವು ಸುತ್ತಿನ ಪೂರ್ವ ಸರಣಿಯ ನೇತೃತ್ವವನ್ನು ಸಾಸ್.ವಿಸಿ ವಹಿಸಿದ್ದು, ಏಂಜಲ್ ಇನ್ವೆಸ್ಟರ್‍ಗಳಾದ ಸಂಗೀತ್ ಅಗರ್‍ವಾಲ್(ಮೋಕೊಬಾರ ಸ್ಥಾಪಕರು), ಅಕ್ಷಯ್ ದುಜೋಡ್‍ವಾಲ(ಮಂಗಳಮ್ ಆರ್ಗನಿಕ್ಸ್‍ನಲ್ಲಿ ಸಿಎಸ್‍ಒ), ನಿಖಿಲ್ ಭಂಡಾರ್‍ಕರ್(ಪ್ಯಾಂಥೇರ ಪೀಕ್ ಕ್ಯಾಪಿಟಲ್‍ನ ಸ್ಥಾಪಕರು), ಮಿಲ್ಕ್‍ಟ್ರಿ ಫ್ಯಾಮಿಲಿ ಆಫೀಸ್, ಕೆಫೆ ಕಾಫಿ ಡೇಸ್ ಫ್ಯಾಮೀಲಿ ಆಫೀಸ್ ಮುಂತಾದವರು ಇದರಲ್ಲಿ ಕೈಜೋಡಿಸಿರುತ್ತಾರೆ.

ಇದು ಹೇಗೆ ಆರಂಭವಾಗಿತ್ತು : ಫೆಬ್ರವರಿ 2019ರಲ್ಲಿ ಯಶೋದ ಕರುತೂರಿ ಮತ್ತು ರಿಯಾ ಕರುತೂರಿ ಸೋದರಿಯರು ಈ ಸಂಸ್ಥೆಯನ್ನು ಆರಂಭಿಸಿದ್ದು, ಕೈಗೆಟುಕುವ ಬೆಲೆಗಳಲ್ಲಿ ತಾಜಾ ಹೂವುಗಳನ್ನು ಪ್ರತಿದಿನ ಲಭ್ಯವಾಗುವಂತೆ ಮಾಡುವುದು ಹೂವು ಸಂಸ್ಥೆಯ ಗುರಿಯಾಗಿದೆ. ಇದಕ್ಕಾಗಿ ತಂತ್ರಜ್ಞಾನವನ್ನು ಬಳಸಿ ಪ್ಯಾಕೇಜಿಂಗ್ ಮತ್ತು ನವೀನತೆಗಳನ್ನು ಅಳವಡಿಸಿ ಪೂರೈಕಾ ಸರಣಿಯನ್ನು ಮೊಟಕುಗೊಳಿಸಿ ಅತ್ಯಂತ ಉನ್ನತ ಗುಣಮಟ್ಟದ ತಾಜಾ ಹೂವುಗಳನ್ನು ಅವರು ವಿತರಿಸುತ್ತಾರೆ. “ಗುಣಮಟ್ಟ ಹೊಂದಿರುವ ತಾಜಾ ಹೂವುಗಳಿಗೆ ಪ್ಯಾನ್ ಇಂಡಿಯಾದಲ್ಲಿ ಪರ್ಯಾಯ ನಾಮ ಹೂವು ಆಗಿರುತ್ತದೆ.

Contact Your\'s Advertisement; 9902492681

ಲಕ್ಷಾಂತರ ಭಾರತೀಯರು ತಮ್ಮ ಕೃತಜ್ಞತೆಯನ್ನು ಪ್ರತಿದಿನ ಅಭಿವ್ಯಕ್ತಿಸುವ ಮಾರ್ಗ ಈ ಹೂವುಗಳಾಗಿವೆ ಎಂದು ನಾವು ನಂಬುತ್ತೇವೆ. ಪ್ರಾರ್ಥನೆಯಲ್ಲಿ ಬಳಸಲಿ ಅಥವಾ ನಿಮ್ಮ ಕೇಶ ಶೃಂಗಾರವಾಗಿ ಬಳಸಲಿ ಅಥವಾ ನಿಮ್ಮ ಪ್ರೀತಿಪಾತ್ರರ ಛಾಯಾಚಿತ್ರಗಳ ಮೇಲೆ ನೇತು ಹಾಕಲು ಬಳಸಿದರೂ ಕೂಡ ಇದು ಕೃತಜ್ಞತೆಯ ಸಂಕೇತವಾಗಿರುತ್ತದೆ. ಈ ಕ್ಷಣಗಳನ್ನು ಪ್ರತಿಯೊಬ್ಬರಿಗೆ ಸುಂದರವಾಗಿಸಲು ನಾವು ಇಚ್ಛಿಸುತ್ತೇವೆ’’ ಎಂದು ಯಶೋಧ ಮತ್ತು ರಿಯಾ ಹೇಳಿದರು.

ತಂತ್ರಜ್ಞಾನ : ಸ್ಥಳೀಯ ತೋಟಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವುದು, ನವೀನ ಪ್ಯಾಕೇಜಿಂಗ್ ಮತ್ತು ಬಹು ವಿತರಣಾ ಮಾರ್ಗಗಳ ಮೂಲಕ ಹೂವು ಸಂಸ್ಥೆಯು ತೋಟಗಳಿಂದ ಗ್ರಾಹಕರಿಗೆ ಹೂವುಗಳು ತಲುಪುವ ಸಮಯವನ್ನು 12-24 ಗಂಟೆಗಳಿಗೆ ಇಳಿಸಿದ್ದು, ಇದರೊಂದಿಗೆ ಹೂವುಗಳ ಜೀವನಾವಧಿಯನ್ನು 2ರಿಂದ 5 ಪಟ್ಟು ವಿಸ್ತರಿಸಲು ಅವಕಾಶ ಮಾಡಿಕೊಟ್ಟಿದೆ. “ನಮ್ಮ ಅಭಿವೃದ್ಧಿಪಡಿಸಲಾದ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ತಂತ್ರಜ್ಞಾನದೊಂದಿಗೆ ನಮ್ಮ ಹೂವುಗಳು 15 ದಿನಗಳವರೆಗೆ ತಾಜಾ ಸ್ಥಿತಿಯಲ್ಲಿ ಇರುತ್ತವೆ. ಇದರ ಹೋಲಿಕೆಯಲ್ಲಿ ಸಾಮಾನ್ಯ ಹೂವುಗಳು ಸರಾಸರಿ 2ರಿಂದ 3 ದಿನಗಳವರೆಗೆ ಇರುತ್ತವೆ. ಈ ಸಾಧನೆ ಉದ್ಯಮದಲ್ಲಿ ಯಾರೂ ಕೇಳಿರದ ವಿಷಯವಾಗಿದೆ. ಈ ರೀತಿ ನಾವು ರೈತರು ಮತ್ತು ಅಂತಿಮ ಗ್ರಾಹಕರಿಬ್ಬರಿಗೂ ಮೌಲ್ಯ ಸೃಷ್ಟಿಸಲು ಸಾಧ್ಯವಾಗಿದೆ’’ ಎಂದು ಯಶೋಧ ಮತ್ತು ರಿಯಾ ಹೇಳಿದರು.

ಕೊಡುಗೆಗಳ ವಿಸ್ತರಣೆ : ಕಳೆದ ವರ್ಷಗಳಲ್ಲಿ ಹೂವು ಸಂಸ್ಥೆ ತನ್ನ ಕೊಡುಗೆಗಳನ್ನು ದೇವಾಲಯಗಳಿಗೂ ಕೂಡ ವಿಸ್ತರಿಸಿದೆ. ಬೆಂಗಳೂರಿನ ಇಸ್ಕಾನ್ ದೇವಸ್ಥಾನ ಸೇರಿದಂತೆ ಇತರೆ ಅನೇಕ ದೇವಾಲಯಗಳಲ್ಲಿ ಹೂವುಗಳ ಅಲಂಕಾರ ಮಾಡುವ ಜವಾಬ್ಧಾರಿಯನ್ನು ಹೂವು ತಂಡ ವಹಿಸಿಕೊಂಡಿದೆ. ಹೂವು ಸಾದರಪಡಿಸುವ ಉತ್ಪನ್ನಗಳ ಶ್ರೇಣಿಯಲ್ಲಿ ವಿವಿಧ ರೀತಿಯ ಗುಲಾಬಿಗಳು, ವಿವಿಧ ರೀತಿಯ ಪೂಜೆಯ ಹೂವುಗಳು, ಹಸಿರು ಮಿಶ್ರಣಗಳು ಸೇರಿವೆ. ಇವುಗಳನ್ನು ಗ್ರಾಹಕರು ಪ್ರತ್ಯೇಕವಾಗಿ ವೈಯಕ್ತಿಕ ಬಾಕ್ಸ್‍ಗಳಲ್ಲಿ ಅಥವಾ ಮಾಸಿಕ ಚಂದಾದಾರಿಕೆಗೆ ಸಹಿ ಹಾಕುವುದರ ಮೂಲಕ ಪಡೆಯಬಹುದಾಗಿರುತ್ತದೆ.

ಹಬ್ಬಗಳು, ಉತ್ಸವಗಳು, ಪೂಜಾ ಸ್ಟೇಪಲ್‍ಗಳು ಮತ್ತು ಇತರೆ ಆಯ್ಕೆ ಮಾಡಲಾದ ಪ್ರತ್ಯೇಕ ಹೂವುಗಳ ವಿಶೇಷ ಪ್ಯಾಕೇಜ್‍ಗಳನ್ನು ಸಂಸ್ಥೆ ಸಾದರಪಡಿಸುತ್ತದೆ. ವಿವಿಧ ಹೂವುಗಳು ಮತ್ತು ಹಸಿರುಗಳನ್ನು ಒಳಗೊಂಡ ಪ್ಯಾಕೇಜ್ ಅತ್ಯಂತ ಜನಪ್ರಿಯವಾಗಿದೆ. ಇದರಲ್ಲಿ ಗರಿಕೆ, ಬಿಲ್ಲುಪತ್ರೆ, ತೊಳಸಿ ಮುಂತಾದ ಪವಿತ್ರ ಹಸಿರು ಪತ್ರೆಗಳು ಸೇರಿದ್ದು, ಇವುಗಳನ್ನು ಜನರು ವಿಶೇಷ ಪೂಜೆಗಳಿಗೆ ಬಳಸುತ್ತಾರೆ. ಗ್ರಾಹಕರಿಗೆ ಇಷ್ಟವಾದ ಮತ್ತೊಂದು ಕೊಡುಗೆ ಎಂದರೆ ರೋಸ್ ಪೆಟಲ್ ಮಾಲ ಆಗಿದ್ದು, ಗುಲಾಬಿ ಹೂವುಗಳನ್ನು ಬಳಸಿ ಹಾರವಾಗಿ ತಯಾರಿಸಲಾಗುತ್ತದೆ.

ಲಭ್ಯತೆ : ಹೂವು ಸಂಸ್ಥೆ ಬೆಂಗಳೂರು, ಹೈದ್ರಾಬಾದ್ ಮತ್ತು ಮುಂಬಯಿಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಬಿಗ್ ಬಾಸ್ಕೆಟ್, ಝೆಪ್ಟೊ, ಮಿಲ್ಕ್ ಬಾಸ್ಕೆಟ್ ಮತ್ತು ಇತರೆ ದಿನಸಿ ಆ್ಯಪ್‍ಗಳ ಮೂಲಕ ಹೂವುಗಳಿಗೆ ಆರ್ಡರ್ ಮಾಡಬಹುದಾಗಿದೆ. ಹೂವು ಫ್ರೆಶ್‍ಗೆ ಪುನರ್ ಬಳಕೆ ಮಾಡಲಾದ ದೇವಸ್ಥಾನದ ನೈರ್ಮಲ್ಯವಾದ ಹೂವುಗಳಿಂದ ತಯಾರಿಸಲಾದ ಅಗರಬತ್ತಿಗಳನ್ನು ಕೂಡ ಸಾದರಪಡಿಸುತ್ತಿದೆ. ಜೊತೆಗೆ ಸಂಸ್ಥೆ ಸಾದರಪಡಿಸುವ ಇತರೆ ಪೂಜಾ ಸಾಮಗ್ರಿಗಳನ್ನು ತಿತಿತಿ.hoovuಜಿಡಿesh.ಛಿom ರಲ್ಲಿ ಖರೀದಿ ಮಾಡಬಹುದು.

“ತಾಜಾ ಹೂವುಗಳ ಸರಬರಾಜು ಸರಣಿಯಲ್ಲಿ ಹೂವು ಸಂಸ್ಥೆಯ ಶಕ್ತಿ ಮತ್ತು ದೇಗುಲಗಳ ಮೂಲಕ ಪ್ರಭಾವ ನಿರ್ಮಿಸಿ ಗ್ರಾಹಕರೊಂದಿಗೆ ನಂಬಿಕೆ ಸ್ಥಾಪಿಸಿಕೊಳ್ಳಲು ಈ ಸಂಸ್ಥೆಯ ಅನನ್ಯ ಮಾರುಕಟ್ಟೆಗೆ ಹೋಗುವಂತಹ ಕಾರ್ಯತಂತ್ರವನ್ನು ನಾವು ಆಧರಿಸಿದ್ದೇವೆ. ಪೂಜೆಗೆ ಬಳಸುವ ವಸ್ತುಗಳ ಬೃಹತ್ ಅಸಂಘಟಿತ ಕ್ಷೇತ್ರದಲ್ಲಿ ಹೂವು ಅನ್ನು ನಾವು ಆವಿಷ್ಕಾರಿ ಬ್ರಾಂಡ್ ಎಂದು ನೋಡುತ್ತೇವೆ.

ಆರಂಭದ ಹಂತಗಳಲ್ಲಿ ರಿಯಾ ಮತ್ತು ಯಶೋದ ಅವರು ತ್ಯಾಜ್ಯವನ್ನು ಮರಳಿ ಬಳಸುವ ತಂತ್ರಜ್ಞಾನವನ್ನು ಅಳವಡಿಸಿಕೊಂಡರಲ್ಲದೆ, ಆರಂಭದ ದಿನದಿಂದಲೇ ಅಂತರಗಳನ್ನು ಸುಧಾರಿಸಿ ಬೆಳವಣಿಗೆ ಮತ್ತು ಲಾಭಗಳನ್ನು ವಿತರಿಸಿದ್ದು, ಅವರ ಶಿಸ್ತಿನ ಮತ್ತು ಕಾರ್ಯದಲ್ಲಿ ಗಮನ ಕೇಂದ್ರೀಕರಿಸುವ ಮನಸ್ಥಿತಿಗೆ ಸಾಕ್ಷಿಯಾಗಿದೆ.

ಈ ವ್ಯವಹಾರದ ಉದ್ಯೋಗ ಸೃಷ್ಟಿ ಸಾಮಥ್ರ್ಯ ಕುರಿತು ನಾನು ಬಹಳ ಉತ್ಸಾಹಿತನಾಗಿದ್ದೇನೆ. ಅದರಲ್ಲೂ ಮುಖ್ಯವಾಗಿ ಇದು ಸಮಾಜದ ಕೆಳಹಂತದ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುತ್ತದೆ. ವಿಶೇಷ ಉದ್ದೇಶದೊಂದಿಗೆ ಲಾಭದ ಶ್ರೇಷ್ಠ ವಿವಾಹ ಇದಾಗಿದೆ’’ ಎಂದು ಸಾಸ್.ವಿಸಿನ ಸ್ಥಾಪಕರು ಮತ್ತು ವ್ಯವಸ್ಥಾಪಕ ಪಾಲುದಾರರಾದ ಮನು ಚಂದ್ರ ಅವರು ಹೇಳಿದರು.

“ಹೂವು ಅತ್ಯಂತ ಉತ್ಸಾಹಪೂರ್ಣ ವಿಷಯವಾಗಿದೆ. ಏಕೆಂದರೆ ಹಿಂದೆ ಕೇವಲ ವಸ್ತುವಾಗಿದ್ದರ ಸುತ್ತ ಅವರು ಬ್ರಾಂಡ್‍ವೊಂದನ್ನು ಸೃಷ್ಟಿಸುತ್ತಿದ್ದಾರೆ. ಪೂಜೆಯ ಹೂವುಗಳಿಗಾಗಿ ಅವರು ಪ್ರತ್ಯೇಕ ಸ್ಥಾನವನ್ನು ನಿರ್ಮಿಸುತ್ತಿದ್ದಾರೆ. ಜೊತೆಗೆ ಆಧುನಿಕ/ಧಾರ್ಮಿಕ ಗ್ರಾಹಕರ ಅತ್ಯಂತ ದೃಢವಾದ ಸಮುದಾಯವನ್ನು ಕೂಡ ಸೃಷ್ಟಿಸುತ್ತಿದ್ದಾರೆ. ಪೂಜಾ ಕ್ಷೇತ್ರವು ನೂತನ ಪೀಳಿಗೆಯ ಬ್ರಾಂಡ್‍ಗಳಿಗೆ ತಾಜಾ ರೀತಿಯಲ್ಲಿ ಬೆಳೆಯುತ್ತಿದೆಯಲ್ಲದೆ, ಹೂವು ಸಂಸ್ಥೆ ಈ ಕ್ಷೇತ್ರದಲ್ಲಿ ನೇತೃತ್ವ ವಹಿಸುತ್ತಿದೆ’’ ಎಂದು ಮೋಕೊಬಾರಾದ ಸ್ಥಾಪಕರಾದ ಸಂಗೀತ್ ಅಗರ್‍ವಾಲ್ ಅವರು ಹೇಳಿದರು.

ಸ್ಥಾಪಕರನ್ನು ಕುರಿತು :- ಯಶೋದ ಮತ್ತು ರಿಯಾ ಅವರು ಹೂವಿನ ತೋಟಗಳಲ್ಲಿಯೇ ಬೆಳೆದಿದ್ದಾರೆ ಎಂದರೆ ಅದು ಅತಿಶಯೋಕ್ತಿ ಆಗದು. “ಕೃಷಿ ನಮ್ಮ ಕುಟುಂಬದ ವ್ಯವಹಾರವಾಗಿದೆ. ಒಂದು ಸಮಯದಲ್ಲಿ ನಮ್ಮ ತಂದೆ ಕೀನ್ಯಾದಲ್ಲಿ ಜಗತ್ತಿನ ಅತ್ಯಂತ ದೊಡ್ಡದಾದ ಗುಲಾಬಿ ತೋಟವನ್ನು ನಡೆಸುತ್ತಿದ್ದರು. ಈ ವ್ಯವಹಾರದಲ್ಲಿ ನಾವು ಕೂಡ ಕೆಲಸ ಮಾಡಿದ್ದೇವೆ.

ಅಲ್ಲದೆ, ಬೊಕೆ ಹೂವುಗಳ ಕೃಷಿ ಕ್ಷೇತ್ರವನ್ನು ಪ್ರೀತಿಸಲು ಆರಂಭಿಸಿದ್ದೇವೆ’’ ಎಂದು ಯಶೋದ ಮತ್ತು ರಿಯಾ ಹೇಳಿದರು. ಆದರೆ, ಬೊಕೆ ಹೂವುಗಳ ಉದ್ಯಮ ಬಹಳಷ್ಟು ಸಂಘಟಿತವಾಗಿದೆ. ಆದರೆ, ಪೂಜೆಯ ಹೂವುಗಳ ಕ್ಷೇತ್ರ ಸಂಪೂರ್ಣ ವಿಭಿನ್ನ ವ್ಯವಹಾರವಾಗಿದೆ ಎಂಬುದನ್ನು ಅವರು ತಿಳಿದುಕೊಂಡರು.

ದೈನಂದಿನ ಪೂಜೆಯ ಆಚರಣೆಯಲ್ಲಿ ಅವರ ತಾಯಿ ಹೂವುಗಳನ್ನು ಬಳಸುವುದನ್ನು ಅವರು ವೀಕ್ಷಿಸಿದ್ದರು. ಕೆಲವೊಮ್ಮೆ ಹೂವುಗಳು ಇಲ್ಲದಿರುವುದು ಅಥವಾ ಇರುವ ಹೂವುಗಳು ಕಳಪೆ ಗುಣಮಟ್ಟದ್ದಾಗಿರುವುದನ್ನು ಅವರು ಗಮನಿಸಿದ್ದರು. ಈ ಉದ್ಯಮ ಪ್ರತಿದಿನ ಲಕ್ಷಾಂತರ ಭಾರತೀಯರನ್ನು ಸ್ಪರ್ಶಿಸಿದ್ದರೂ ಕೂಡ ಪ್ಯಾಕೇಜಿಂಗ್ ಅಥವಾ ಗುಣಮಟ್ಟಗಳಲ್ಲಿ ಯಾವುದೇ ನವೀನತೆ ಇರಲಿಲ್ಲ. ಈ ಸಂದರ್ಭದಲ್ಲಿಯೇ ಅವರು ಸಂಭ್ರಮಾಚರಣೆಗಳಿಗೆ ಪ್ರತಿದಿನ ಉತ್ತಮ ಗುಣಮಟ್ಟದ ಮತ್ತು ತಾಜಾ ಹೂವುಗಳು ಲಭ್ಯವಾಗುವುದನ್ನು ಮಾಡುವ ಗುರಿಯೊಂದಿಗೆ ಹೂವು ಸಂಸ್ಥೆಯನ್ನು ಆರಂಭಿಸಲು ನಿರ್ಧರಿಸಿದ್ದರು.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಈ ಸೋದರಿಯರು ಎರಡು ವರ್ಷಗಳ ಕಾಲ ಇಥಿಯೋಪಿಯಾ(ಆಫ್ರಿಕಾ)ದಲ್ಲಿ ವಾಸಿಸಿದ್ದರು. ನಾಲ್ಕು ವರ್ಷಗಳ ಕಾಲ ಅಮೇರಿಕಾದಲ್ಲಿ ಅಧ್ಯಯನ ನಡೆಸಿದರು. ಯಶೋದ (27ವರ್ಷ) ಅವರು ಅಕೌಂಟಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಮತ್ತು ವ್ಯವಹಾರ ಆಡಳಿತದಲ್ಲಿ ಪದವಿಯನ್ನು ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಪಡೆದಿರುತ್ತಾರೆ.

ಯಶೋದ ಅವರು ಸಿಪಿಎ(ಪ್ರಾಮಾಣೀಕೃತ ಸಾರ್ವಜನಿಕ ಲೆಕ್ಕಪತ್ರ)ಪದವಿಯನ್ನು ಯುಎಸ್‍ನಲ್ಲಿ ಪೂರ್ಣಗೊಳಿಸಿರುತ್ತಾರೆ. ಯುಎಸ್‍ನಲ್ಲಿ ಅಲ್ಪಕಾಲ ಕೆಲಸ ಮಾಡಿದ ನಂತರ ಇಥಿಯೋಪಿಯ ಮತ್ತು ಕೀನ್ಯಾಗಳಲ್ಲಿನ ಕುಟುಂಬದ ವ್ಯವಹಾರದಲ್ಲಿ ತೊಡಗಿಸಿಕೊಂಡಿರುತ್ತಾರೆ. ರಿಯಾ (25ವರ್ಷ) ಅವರು ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದಿಂದ ವಿಜ್ಞಾನ, ತಂತ್ರಜ್ಞಾನ ಮತ್ತು ಸಮಾಜ ವಿಷಯಗಳಲ್ಲಿ ಬಿ.ಎಸ್. ಪದವಿಯನ್ನು ಪಡೆದಿರುತ್ತಾರೆ.

ರಿಯಾ ಅವರು ಓದುವುದು ಮತ್ತು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಯುಎಸ್‍ನಲ್ಲಿ ವಾಸ್ತವ್ಯದ ನಂತರ ಟೈಮ್ಸ್ ಆಫ್ ಇಂಡಿಯಾ, ಡೆಕನ್ ಹೆರಾಲ್ಡ್, ಸ್ಟ್ಯಾನ್‍ಫೋರ್ಡ್ ಡೈಲಿ ಮತ್ತು ಬೇ ಸಿಟಿ ಬೇಕನ್‍ಗಳಲ್ಲಿ ಕೆಲಸ ಮಾಡಿರುತ್ತಾರೆ. ಯಶೋದ ಅವರು ಅತ್ಯಂತ ಆಸಕ್ತಿಯೊಂದಿಗೆ ಭಗವದ್ಗೀತೆಯನ್ನು ಓದುತ್ತಿರುತ್ತಾರೆ. ಅವರ ಪ್ರಕಾರ ಇದು ಅವರ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೂವು ಸಂಸ್ಥೆಯನ್ನು ಆರಂಭಿಸಲು ಕೂಡ ಇದು ಸ್ಫೂರ್ತಿ ನೀಡಿರುತ್ತದೆ.

ಬದಲಾವಣೆ ತರುವಲ್ಲಿ ಅತ್ಯಂತ ಹೆಚ್ಚಿನ ಆಸಕ್ತಿ ಹೊಂದಿರುವ ಯಶೋದ ಮತ್ತು ರಿಯಾ ಅವರು ಸುಸ್ಥಿರತೆ ಮತ್ತು ನ್ಯಾಯಪೂರ್ಣ ಮಾರಾಟದಂತಹ ಮೂಲ ಮೌಲ್ಯಗಳಲ್ಲಿ ದೃಢವಾದ ನಂಬಿಕೆ ಹೊಂದಿರುತ್ತಾರೆ. ಆದ್ದರಿಂದ ಅವರು ರೈತರಿಂದ ನೇರವಾಗಿ ಖರೀದಿಸಲು ಬಯಸುತ್ತಾರೆ. ಇದರಿಂದ ಹೆಚ್ಚಿನ ಮಹಿಳೆಯರಿಗೆ ಉದ್ಯೋಗದ ಅವಕಾಶ ಪೂರೈಕೆಯಾಗುವುದಲ್ಲದೆ, ಹೂವುಗಳ ತ್ಯಾಜ್ಯ ಕಡಿಮೆಯಾಗಿ ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ನೆರವಾಗುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here