ಕ್ರೀಡೆಗಳು ಭಾರತೀಯ ಏಕತೆ ಸಂಸ್ಕøತಿಯ ಸಂಕೇತ

0
17

ಮಾದನಹಿಪ್ಪರಗಿ: ಕ್ರೀಡೆಗಳು ಯಾವುದೇ ಜಾತಿ ಧರ್ಮ ವಿರೋಧಿಸುವುದಿಲ್ಲ. ಆಟಗಳು ಯಶಸ್ವಿ ಜೀವನ ರೂಪಿಸಲು ಸಹಕಾರಿಯಾಗಿದೆ. ಆಟಗಳು ಜೀವಂತ ಜೀವನದ ಆಧಾರವಾಗಿದೆ. ಮತ್ತು ಭಾರತೀಯ ಏಕತೆ ಮತ್ತು ಸಂಸ್ಕøತಿಯ ಸಂಕೇತ ಸೂಚಿಸುತ್ತವೆ ಎಂದು ಶಿವಲಿಂಗೇಶ್ವರ ಸರಕಾರಿ ಪ್ರಥಮ ದರ್ಜೇ ಕಾಲೇಜಿನ ಪ್ರಾಚಾರ್ಯ ಡಾ.ಕೈಲಾಸಬಾಬು ಹೊಸಮನಿ ಹೇಳಿದರು.

ಸ್ಥಳೀಯ ಶಿವಲಿಂಗೇಶ್ವರ ಸರಕಾರಿ ಪದವಿ ಕಾಲೇಜಿನ ಮೈದಾನದಲ್ಲಿ ನಡೆದ ಕಾಲೇಜು ಶಿಕ್ಷಣ ಇಲಾಖೆ ಗುಲಬರ್ಗಾ ವಿಶ್ವವಿದ್ಯಾಲಯದ ಮಹಿಳಾ ಕಬ್ಬಡ್ಡಿ, ಖೋ-ಖೋ ಮತ್ತು ವಾಲಿಬಾಲ್ ಅಂತರಕಾಲೇಜು ಏಕವಲಯ ಪಂದ್ಯಾಟ ಹಾಗೂ ವಿಶ್ವವಿದ್ಯಾಲಯ ತಂಡದ ಆಯ್ಕೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಓದಲಿಂಗ ಸಿಕೆ ಮಾತನಾಡಿ, ಓದು ಮತ್ತು ಕ್ರೀಡೆ ಮನುಷ್ಯನಿಗೆ ಮುಖ್ಯವಾದುದು. ಓದು ನಮ್ಮ ಜೀವನ ರೂಪಿಸಿದರೆ ಕ್ರೀಡೆಯಿಂದ ನಮ್ಮ ಆರೋಗ್ಯ ಚೆನ್ನಾಗಿಡಬಹುದು.

Contact Your\'s Advertisement; 9902492681

ಕ್ರೀಡಾ ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಆಟವಾಡಿರಿ ಎಂದು ಹೇಳಿದರು. ಕ್ರೀಡಾ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಶಂಕರ ಸೂರೆ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯವಹಿಸಿದ ಶಿವಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮಿ ಆಶೀರ್ವಚನ ನೀಡಿದರು. ವೇದಿಕೆಯ ಮೇಲೆ ಗ್ರಾಮ ಪಂಚಾಯತ ಉಪಾಧ್ಯಕ್ಷ ಚೆನ್ನಪ್ಪ ಹಾಲೆನವರು, ಮಲ್ಲಿನಾಥ ದುಧಗಿ, ಶಿವಪ್ಪ ಕೋಳಶೆಟ್ಟಿ, ಶಿವಲಿಂಗಪ್ಪ ಮಾತಂಗಿ ಡಾ.ಬಲಭೀಮ ಸಾಂಗ್ಲಿ, ಉಮರಸಾಬ ಮಸಳ್ಳಿ, ಶರಣಪ್ಪ, ಗೋದಾವರಿ ಪಾಟೀಲ, ಡಾ. ಪ್ರತಿಭಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here