ಕಲಬುರಗಿ: ನಗರದ ಕ್ಯಾಂಪ್‍ಬೆಲ್ಸ್ ಶಾಲೆಯಲ್ಲಿ 3 ನೇ ತರಗತಿಯಿಂದ 10 ನೇ ತರಗತಿಯ ವರೆಗೆ ಸುಮಾರು 250 ವಿದ್ಯಾರ್ಥಿಗಳಿಂದ ಎಲ್ಲ ವಿಷಯಗಳ 125 ಪೆÇ್ರೀಜೆಕ್ಟ್ ಮಾಡಿಸಿ ಇದರ ಒಂದು ಪ್ರದರ್ಶನವನ್ನು ವಿಜ್ಞಾನ ಮತ್ತು ಕಲಾ ಪ್ರದರ್ಶನ ನಾಮದಡಿಯಲ್ಲಿ ಆಯೋಜಿಸಲಾಯಿತು.
ವಿಜ್ಞಾನ ಮತ್ತು ಕಲಾ ಪ್ರದರ್ಶನವನ್ನು ಜಿಲ್ಲಾ ವಿಜ್ಞಾನ ಕೇಂದ್ರದ ಜಿಲಾ ವಿಜ್ಞಾನ ಅಧಿಕಾರಿ ಭರ್ಧನ ರಾಮಯ್ಯು ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಬಾಬುರಾವ ಯಡ್ರಾಮಿ ಅವರು ಜಂಟಿಯಾಗಿ ಉದ್ಘಾಟಿಸಿದರು.
ಮುಖ್ಯ ಅಥಿತಿಗಳು ಮಕ್ಕಳು ತೈಯಾರಿಸಿದ ಪೆÇ್ರೀಜೆಕ್ಟ್‍ಗಳನ್ನು ವಿಕ್ಷಿಸಿದರು. ಇವರ ಜೋತೆಯಲ್ಲಿ ಶಾಲಾ ಆಡಳಿತಾಧಿಕಾರಿಗಳಾದ ಇಮ್ಯಾನ್ಮೂಲ್ ಜೆ, ಮುಖ್ಯಗುರು ಸೂರ್ಯಕಾಂತ ಪವಾರ, ಪತ್ರಕರ್ತ ಶಿವಶರಣಪ್ಪ, ಶಿಕ್ಷಕರಾದ ದತ್ತಾತ್ರೇಯ ಜೇವರ್ಗಿ, ಸಂತೋಷ ದೇಶಮುಖ, ಶಾಲೆಯ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.