ಕಠಿಣ ಪರಿಶ್ರಮ ಪಟ್ಟರೆ ಗುರಿ ತಲುಪುವುದು ಅಸಾಧ್ಯದ ಕೆಲಸವೇನಲ್ಲ

0
24

ಯಾದಗಿರಿ:ಇಂದಿನ ಯುವ ಪೀಳಿಗೆ ತಾವು ಜೀವನದಲ್ಲಿ ಸಾಧನೆ ಮಾಡಲು ಬೇಕಾದ ಮಾರ್ಗಗಳನ್ನು ಬಿಟ್ಟು, ಸಂಬಂಧವೇ ಇಲ್ಲದ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಿಕೊಳ್ಳುತ್ತಿರುವ ಕಾರಣ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿಂದೆ ಬೀಳುತ್ತಿದ್ದಾರೆ ನಾವೆಲ್ಲರೂ ಸರಿಯಾದ ಸಮಯದಲ್ಲಿ ಸರಿಯಾದ ವಯೋಮಾನದಲ್ಲಿ ಸರಿಯಾದ ಕ್ರಮ ಮತ್ತು ಮಾರ್ಗದಲ್ಲಿ ಓದಿದರೆ ಜೀವನದಲ್ಲಿ ಯಶಸ್ಸು ಸಾದ್ಯವಾಗುತ್ತದೆ ಎಂದು ಶಿಕ್ಷಣ ತಜ್ಞ ವಿಶ್ವನಾಥ ಮರತೂರ ತಿಳಿಸಿದರು.

ರವಿವಾರ ಇಲ್ಲಿನ ಸಕ್ಸಸ್ ಗ್ರಂಥಾಲಯದಲ್ಲಿ ಪ್ರಜ್ಞಾ ದಿ ಇನ್ಸ್ಟಿಟ್ಯುಟ್ ಇನ್ನೋವೆಟಿವ್ ಲರ್ನಿಂಗ್ ಸಂಸ್ಥೆ, ಶಶಿ ಸೂಪರ್ ಬಜಾರ್ ಸಂಯುಕ್ತಾಶ್ರಯದಲ್ಲಿ ಸ್ಪರ್ಧಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕೌನ್ ಬನೇಗಾ ಜ್ಞಾನಪತಿ ವಿಶಿಷ್ಟ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿ, ಆಧುನೀಕರಣದ ಇಂದಿನ ಜಗತ್ತಿನಲ್ಲಿ ಎಲ್ಲ ರಂಗಗಳಲ್ಲಿ ಸ್ಪರ್ಧೆ ಇದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ವ್ಯವಸ್ಥಿತವಾಗಿ ಓದುವ ಕೌಶಲ ಬೆಳಸಿಕೊಳ್ಳುವಂತೆ ಸಲಹೆ ನೀಡಿದರು.

Contact Your\'s Advertisement; 9902492681

ಕ್ರಮಬದ್ಧ ಅಧ್ಯಯನ, ಸಮಯ ಪರಿಪಾಲನೆ ಮತ್ತು ಕಠಿಣ ಪರಿಶ್ರಮ ಪಟ್ಟರೆ ನಾವು ಹಾಕಿಕೊಂಡ ಗುರಿ ತಲುಪುವುದು ಅಸಾಧ್ಯದ ಕೆಲಸವೇನಲ್ಲ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಯುವ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಈ ರೀತಿ ಸ್ಪರ್ಧಾ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಖ್ಯಾತ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಮುಂದೆ ಬರಬೇಕು ಎಂಬು ಅಚಲ ವಿಶ್ವಾಸವಿರಬೇಕು. ಪರೀಕ್ಷೆಗಳಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಯೋಜನೆ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಉದ್ಯಮಿ ಮಲ್ಲಿಕಾರ್ಜುನ ಶಿರಗೋಳ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ತಾಳ್ಮೆ ಅತೀಮುಖ್ಯ. ತಾಳಿದವನು ಬಾಳಿಯಾನು ಎಂಬ ನಾಣ್ನುಡಿಯಂತೆ, ಜೀವನದಲ್ಲಿ ಬರುವ ಕಷ್ಟಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಬಾಲಕಾರ್ಮಿಕ ಇಲಾಖೆಯ ಯೋಜನಾ ಸೊಸೈಟಿಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ಕಾರ್ಯಕ್ರಮ ಉದ್ಘಾಟಿಸಿ, ಪ್ರಜ್ಞಾ ಸಂಸ್ಥೆ ನಡೆಸುವ ಅನೇಕ ಕಾರ್ಯಕ್ರಮದಲ್ಲಿ ನಾನೂ ಸಹ ಕೆಲಸ ಮಾಡಿದ್ದೇನೆ. ಕಲ್ಯಾಣ ಕರ್ನಾಟಕ ಭಾಗದ ಯುವಕರಲ್ಲಿ ಹೊಸ ಕಲ್ಪನೆ ಮೂಡಿಸುವ ಕೆಲಸ ವಿಶ್ವನಾಥ ಮಾಡುತ್ತಿದ್ದಾರೆ ಎಂದರು.

ಪತ್ರಕರ್ತ ಲಕ್ಷ್ಮೀಕಾಂತ್ ಕುಲಕರ್ಣಿ, ಮುಖ್ಯಗುರು ಮಂಜೂಳಾ ಜನ್ನೂರ, ಸಹ ಶಿಕ್ಷಕ ಬಸವರಾಜ, ಉದ್ಯಮಿ ತಾಯಪ್ಪ ಯಾದವ್, ಉಪನ್ಯಾಸಕ ನಾರಾಯಣ, ಸಂಸ್ಥೆ ಅಧ್ಯಕ್ಷ ಕಾಶಿನಾಥ ಮರತೂರ, ಅಶೋಕ ಯಾದವ ಇದ್ದರು. ಮಾಳಪ್ಪ ಯಾದವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here