ಕೊಪ್ಪಳ: ಸಹಜ ಟ್ರಸ್ಟ್ ಮತ್ತು ದೇವದಾಸಿ ವಿಮೋಚನಾ ವೇದಿಕೆ ವತಿಯಿಂದ ಅಲೆಮಾರಿ ಮತ್ತು ದೇವದಾಸಿ ಸಮುದಾಯದ ಐಕ್ಯ ಸಮಾವೇಶದ ಭಾಗವಾಗಿ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಿಂದ ಜಾಗೃತಿ ಜಾಥ ಜರುಗಿತು.
ಈ ಮೆರವಣಿಗೆಯಲ್ಲಿ ಅಲೆಮಾರಿ ಮತ್ತು ದೇವದಾಸಿ ಸಮುದಾಯದ ಕಲೆ ಮತ್ತು ಸಂಸ್ಕೃತಿಗಳ ಮೂಲಕ ಹೋರಾಟದ ಗೀತೆಗಳನ್ನು ಹಾಡಿ ಪ್ರತಿರೋಧದ ಘೋಷಣೆಗಳನ್ನು ಕೂಗುವ ಮೂಲ ಸಾಹಿತ್ಯ ಭವನದ ವರೆಗೆ ಮೆರವಣಿಗೆ ನಡೆಯಿತು.
ಜಾಥದಲ್ಲಿ ಲೇಖಕಿ ಹೋರಾಟ ಗಾರ್ತಿಯಾದ ದುಸರಸ್ವತಿ, ಸಹಾಜ ಟ್ರಸ್ಟ್ ನ ಶೀಲಾ, ದೇವದಾಸಿ ವಿಮೋಚನಾ ವೇದಿಕೆಯಿಂದ ಶಶಿಕಲಾ, ಸೌಭಾಗ್ಯ ದೊಡ್ಡಮನಿ, ಭೀಮ್ ಆರ್ಮಿಯ ಕೊಪ್ಪಳ ಜಿಲ್ಲಾ ಅಧ್ಯಕ್ಷ ರಾಘು ಚಾಕ್ರಿ, ಉಪಾಧ್ಯಕ್ಷ ಶರಣಬಸಪ್ಪುಜನಹಳ್ಳಿ, ವಿರೇಶ್, ರೂಪಾಂತರ ವೇದಿಕೆಯಿಂದ ಅಸ್ಮ, ಪ್ರಿಯಾಂಕಾ ಮಾವಿನಕರ್, ಅಂಜಲಿ, ಜಾಯಸ್, ರಮ್ಯಾ, ರೂಪಾಂತರ ತಂಡದಿಂದ ಸುರೇಖಾ ಬೀದರ್, ವಿಕ್ರಮ್ ತೇಜಸ್, ಭುವನೇಶ್ವರಿ ವಿಜಯಪುರ, ಪೂಜಾ, ಸಾಜಿದ್ ಅಲಿ ಕಲಬುರಗಿ, ಮಲ್ಲು ಕುಂಬಾರ್ ಪ್ರಬುದ್ಧ ಭಾರತ ಸಂಘರ್ಷ ಸಮಿತಿ ಭವಾನಿ ಸೇರಿದಂತೆ ಹಲವಾರು ಇದ್ಧರು.