ಬಿಲಗುಂದಿಗೆ ಸಿದ್ಧಗಂಗಾಶಿವಕುಮಾರಶ್ರೀ ಪ್ರಶಸ್ತಿ

0
24

ಕಲಬುರಗಿ: ಸಿದ್ಧಗಂಗಾ ಮಠದ ಹಳೇ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದಿಂದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಅವರು `ಸಿದ್ಧಗಂಗಾ ಶಿವಕುಮಾರಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ್ ಕೂಡಲಹಂಗರಗಾ ತಿಳಿಸಿದ್ದಾರೆ.

ಡಿಸೆಂಬರ್ 18ರಂದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸಂಘದ 66ನೇ ಮಹಾ ಅಧಿವೇಶನದಲ್ಲಿ ಶ್ರೀ ಮಠದ ಪೀಠಾಧಿಪತಿ ಪೂಜ್ಯಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಈ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆ ಜತೆಗೆ ಶ್ರೀ ಮಠದ ಮೇಲಿನ ಅಪಾರ ಭಕ್ತಿಯನ್ನಿಟ್ಟುಕೊಂಡ ಬಿಲಗುಂದಿ ಅವರು, ತಮ್ಮ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ತ್ರಿವಿಧ ದಾಸೋಹಿ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳ ಪುತ್ಥಳಿ ಸ್ಥಾಪನೆ ಮಾಡುವ ಮೂಲಕ ಶ್ರೀಮಠದ ಮೇಲಿನ ಅವರ ಭಕ್ತಿ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಹೀಗಾಗಿ ಈ ಬಾರಿಯ `ಸಿದ್ಧಗಂಗಾ ಶಿವಕುಮಾರಶ್ರೀ’ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಕೋವಿಡ್ ಕಾರಣ ಎರಡು ವರ್ಷದ ಪ್ರಶಸ್ತಿಯನ್ನು ಈ ಬಾರಿ ವಿತರಿಸಲಾಗುತ್ತಿದ್ದು, ಸಿದ್ಧಗಂಗಾಶ್ರೀ ಪ್ರಶಸ್ತಿಯನ್ನು ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವಸ್ವಾಮೀಜಿ ಹಾಗೂ ಬೆಂಗಳೂರಿನ ಜಯದೇವ ಹೃದ್ರೋಗ ಕೇಂದ್ರದ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ ಅವರಿಗೆ ನೀಡಲಾಗುತ್ತಿದೆ.

ಸಿದ್ಧಗಂಗಾ ಶಿವಕುಮಾರಶ್ರೀ ಪ್ರಶಸ್ತಿ: ವಿಜ್ಞಾನ ಮತ್ತು ತಂತ್ರಜ್ಞಾನ ತಜ್ಞರು ಡಾ.ವೈ.ಸಿ.ಕಮಲ, ಕೃಷಿ ತಜ್ಞೆ ಕವಿತಾ ಮಿಶ್ರಾ, ಸಾಹಿತಿ ಎಸ್. ಮಲೆಯೂರು ಗುರುಸ್ವಾಮಿ ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ಸಮಾಜ ಸೇವಕಿ ಡಾ.ಶಕುಂತಲಾ ಜಯದೇವ್ ಅವರನ್ನು ಆಯ್ಕೆ ಮಾಡಲಾಗಿದೆ.

ಕಾಯಕಯೋಗಿ ಪ್ರಶಸ್ತಿ: ರಂಜಾನ್ ದರ್ಗಾ ಪತ್ರಕರ್ತರು ಹಾಗೂ ಎಂ.ಶಿವಕುಮಾರ ಅಧ್ಯಕ್ಷರು, ಕಾಯಕಯೋಗಿ ಪ್ರತಿಷ್ಠಾನ ಮಂಡ್ಯ. ಅಲ್ಲದೆ ಶ್ರೀ ಮಠದ ಹಳೆಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಮೂಲಕ ಶ್ರೀಮಠದ ಸೇವೆಯಲ್ಲಿ ತೊಡಗಿರುವ ಎಚ್.ಜಿ.ಈಶ್ವರಯ್ಯ, ತುಳಸೀರಾಮಯ್ಯ, ಆರ್.ಎಸ್. ಹುಚ್ಚಾಚಾರಿ, ಲಕ್ಷ್ಮಯ್ಯ, ಚನ್ನನಗೌಡ, ದೇವೇಂದ್ರ ಕರಂಜೆ, ಮಹೇಶ ಶಾಸ್ತ್ರಿ ಅವರನ್ನು ಸಂಘಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here