ಸಾಧನಗೆ ದೃಢವಾದ ಮನಸ್ಸು, ಛಲ ಇರಬೇಕು

0
29

ಚಿಟಗುಪ್ಪ: ಸಾಧನಗೆ ದೃಢವಾದ ಮನಸ್ಸು, ಛಲ ಇರಬೇಕು. ಇವೆರಡು ಇದ್ದರೇ ಯಾವ ವ್ಯಕ್ತಿಯಾದರೂ ಏನು ಬೇಕಾದ್ರೂ ಸಾಧಿಸಬಹುದಾಗಿದೆ. ಅಂಗವೈಕಲ್ಯ ಹೊಂದಿದವರು ತಮ್ಮನ್ನು ಅಸಹಾಯಕರು ಎಂದು ತಿಳಿದುಕೊಳ್ಳಲೇಬೇಕಿಲ್ಲ. ಅವರಿಗೂ ವಿಶೇಷ ಶಿಕ್ಷಣ, ಉದ್ಯೋಗಾವಕಾಶಗಳಿವೆ. ಅದರಾಚೆಯೂ ಸ್ವತಂತ್ರ, ಸ್ವಾವಲಂಬಿ ಬದುಕನ್ನು ಆಯ್ಕೆ ಮಾಡುಕೊಳ್ಳುವವರಿಗೆ ಹೊಸ ತಾಂತ್ರಿಕ ಆವಿಷ್ಕಾರಗಳು ಅಗತ್ಯ ನೆರವು ನೀಡಿ ಮುನ್ನಡೆಸಲಿವೆ ಎಂದು ಸಾಹಿತಿ, ಸಾಮಾಜಿಕ ಸೇವಕರಾದ ಸಂಗಮೇಶ ಎನ್ ಜವಾದಿ ಯವರು ನುಡಿದರು.

ನಗರದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ವಿಕಲಚೇತನರ ಕುರಿತು
ಉಪನ್ಯಾಸ ಗೋಷ್ಠಿ ಹಾಗೂ ವಿಕಲಚೇತನ ದಶರಥ ಬಿಜಾಪೂರೆ ಯವರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿಕಲಚೇತನರು ಕೂಡ ಮನುಷ್ಯರೇ ಅವರಿಗೂ ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯವಿದೆ. ಆದರೆ, ಬಹುತೇಕ ಸಂದರ್ಭಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಪರಿಗಣಿಸುವ ಪರಿಪಾಠವೂ ಕೆಲವೆಡೆ ಕಾಣಿಸುತ್ತಿದೆ. ಅಥವಾ ಕೆಲವೆಡೆ ಅವರಿಗೆ ಇನ್ನಿಲ್ಲದ ಅನುಕಂಪ ತೋರುವುದು ಇದೆ. ಇದು ತಪ್ಪು. ವಿಕಲಚೇತನರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅವರು ಸಮಾಜದ ಮುಖ್ಯವಾಹಿನಿಗಳಲ್ಲಿ ಗುರುತಿಸಿಕೊಳ್ಳಬಲ್ಲರು. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷ ಣಿಕ, ಮಾಹಿತಿ ತಂತ್ರಜ್ಞಾನ, ಮನೊರಂಜನೆ ಮುಂತಾದ ಕ್ಷೇತ್ರದಲ್ಲಿ ಗುರುತಿಸಬಲ್ಲರು ಎಂಬುದು ಇಂದಿನ ಪ್ರಜ್ಞಾವಂತ ನಾಗರಿಕರು ಮರೆಯಬಾರದು ಎಂದು ತಿಳಿಸಿದರು.

Contact Your\'s Advertisement; 9902492681

ಪರಿಷತ್ತಿನ ಗೌರವ ಕಾರ್ಯದರ್ಶಿ ಎನ್ ಎಸ್ ಮಲ್ಲಶೆಟ್ಟಿ ಯವರು ಮಾತನಾಡಿ ಅಂಗವಿಕಲರಿಗೂ ಸಮಾಜದ ಇತರ ವ್ಯಕ್ತಿಗಳಂತೆ ಸಮಾನವಾದ ಅವಕಾಶಗಳು ಸಿಗಬೇಕು, ಅವರಿಗೆ ಯೋಗ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು.ಅಂದಾಗಲೇ ಮಾತ್ರ ಅವರ ಬದುಕು ನಂದನವಾಗುತ್ತದೆ. ಈ ದಿಸೆಯಲ್ಲಿ ಸರ್ಕಾರ ಇನ್ನು ಹೆಚ್ಚಿನ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ವಿನಂತಿಸಿದರು.

ಪರಿಷತ್ತಿನ ಗೌರವ ಸಂಚಾಲಕರಾದ ಭೀಮಶೆಟ್ಟಿ ವಡ್ಡನಕೇರಾ ರವರು ಮಾತನಾಡಿ ವಿಕಲಚೇತನರನ್ನು ಕೀಳರಿಮೆಯಿಂದ ಯಾರು ನೋಡಬಾರದು.ಅವರು ನಮ್ಮಂತೆ ಎಂಬುದು ತಿಳಿದುಕೊಂಡು ನಾವೆಲ್ಲರೂ ಸಾಗಬೇಕು. ವಿಕಲಚೇತನರ ನಿಸ್ವಾರ್ಥ ಸೇವಾ ಕೈಂಕರ್ಯಗಳು ಗುರುತಿಸಿ ಅವರನ್ನು ಗೌರವಿಸುವ ಕೆಲಸ ಈ ಸಮಾಜ ಮಾಡಬೇಕೆಂದರು.

ಇದೆ ಸಂದರ್ಭದಲ್ಲಿ ವಿಕಲಚೇತನರಾಗಿದುಕೊಂಡು ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ, ತಮ್ಮದೇ ಆದ ನಿಸ್ವಾರ್ಥವಾಗಿ ಜನಸೇವೆಯನ್ನು ಮಾಡುತ್ತಿರುವ ದಶರಥ ಬಿಜಾಪೂರೆ ಯವರಿಗೆ ಗೌರವ ಸನ್ಮಾನ ಮಾಡಲಾಯಿತು.

ಈ ಸಮಯದಲ್ಲಿ ಪರಿಷತ್ತಿನ ಪದಾಧಿಕಾರಿಗಳು, ನಾಗರಿಕರು, ಮಾತೆಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here