ಕಲಬುರಗಿ: ಸೇಡಂ ತಾಲೂಕಿನ ಮಳಖೇಡ ಉತ್ತರಾದಿ ಮಠದಲ್ಲಿ ಶ್ರೀ ಅಕ್ಷೋಭ್ಯತೀರ್ಥರ ಆರಾಧನಾ ಮಹೋತ್ಸವ ನಿಮಿತ್ತ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ ಸಾನ್ನಿಧ್ಯದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಮಂಗಳವಾರ ಸಣಮತೆವೈಙವದಿಂದ ನೆರವೇರಿತು.
ಶ್ರೀಪಾದಂಗಳವರ ಸಂಕಲ್ಪದಂತೆ ಆರಾಧನೆ ದಿನ ಒಂದು ಲಕ್ಷ ಪ್ರಣತಿಯಲ್ಲಿ ಐದು ಲಕ್ಷ ದೀಪಗಳು ಪ್ರಜ್ವಲಿಸಲಿಸಿದವು. ಅದಲ್ಲದೆ ಒಂದೇ ಬೃಹತ್ ಪ್ರಣತಿಯಲ್ಲಿ ಒಂದು ಲಕ್ಷ ಬತ್ತಿಯ ಮೂಲಕ ಲಕ್ಷ ದೀಪ ಹಚ್ಚಲಾಯಿತು. ಸಂಜೆ ೬ರಿಂದ ೮ರ ವರೆಗೆ ಈ ದೀಪೋತ್ಸವ ಕಾರ್ಯಕ್ರಮ ನಡೆಯಿತು. ಒಟ್ಟು ಆರು ಲಕ್ಷ ದೀಪದ ಬೆಳಕು ಝಗಮಗಿಸಿದವು.
ಮಠದ ಮಹಾದ್ವಾರದಿಂದ ವೇಂದಾವನ ಸ್ಥಳದ ವರೆಗೆ ರಸ್ತೆಯ ರೆಡು ಬದಿಯಲ್ಲಿ ಪ್ರಣತಿಗಳಲ್ಲಿ ದೀಪ ಬೆಳಗಿದವು. ಮಠದ ಆವರದ ತುಂಬಾ ದೀಗಳ ಬೆಳಕು ಗೀಚರವಾಯಿತು.
ಬೆಳಗ್ಗೆ ಶ್ರೀ ಅಕ್ಷೋಭ್ಯತೀರ್ಥರ, ಶ್ರೀ ಜಯತೀರ್ಥರ ಹಾಗೂ ಶ್ರೀ ರಘುನಾಥತೀರ್ಥರ ಮೂಲ ವೃಂದಾವನಗಳಿಗೆ ವಿಶೇಷ ಪೂಜೆ, ಅಲಂಕಾರ, ಪಂಚಾಮೃತಾಭಿಷೇಕ ಹಾಗೂ ಹಸ್ತೋದಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ ೬ಕ್ಕೆ ಲಕ್ಷ ದೀಪೋತ್ಸವ ನಂತರ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಅನುಗ್ರಹ ಸಂದೇಶ ನೀಡಿದರು.
.
ಮಳಖೇಡ ಉತ್ತರಾದಿ ಮಠದಿಂದ ಜ್ಞಾನದ ಬೆಳಕು ಜಗತ್ತನ್ನು ಬೆಳಗಲಿ ಎಂಬ ಉದ್ದೇಶದಿಂದ ಲಕ್ಷ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಮಠದ ಆವರಣ ಸ್ವಚ್ಛಗೊಳಿಸಲಾಗಿದೆ. ಕಾರ್ಯಕ್ರಮ ಅದ್ಧೂರಿಯಾಗಿ ನಡೆಸಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ. ರಾಜ್ಯ ಸೇರಿ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟç, ತಮಿಳುನಾಡಿನಿಂದ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದ ಹಿನ್ನೆಲೆಯಲ್ಲಿ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದAತೆ ನೋಡಿಕೊಳ್ಳುವ ಉದ್ದೇಶದಿಂದ ಎಲ್ಲ ವ್ಯವಸ್ಥೆ ಮಾಡಲಾಗಿತ್ತು.