ಕಲಬುರಗಿ: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮಹಾವಿದ್ಯಾಲಯ, ಕಲಬುರಗಿಯ ಅಚಿತಿಮ ಅಂತಿ ಬಿ.ಎಸ್.ಸಿ (ಕೃಷಿ) ಗ್ರಾಮೀಣ ಕೃಷಿ ಅನುಭವ ಕಾರ್ಯಕ್ರಮವನ್ನು ಕಲಬುರಗಿ ತಾಲೂಕಿನ ಬೀಮಳ್ಳಿ ಗ್ರಾಮದಲ್ಲಿ ದ್ವಿದಳ ಧಾನ್ಯ ಬೆಳೆಗಳು ಮತ್ತು ಹವಾಮಾನ ವೈಪರೀತ್ಯದಿಂದಾಗಿ ಸಸ್ಯರೋಗಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗ ತಜ್ಞರಾದ ಡಾ. ಜಹೀರ್ ಅಹೆಮದ್ ರವರು ಮಾತನಾಡಿ ಬದಲಾಗುತ್ತಿರುವ ಹವಾಮಾನ, ಬೀಸುತ್ತಿರುವ ಮೂಡಣ ಗಾಳಿ, ಅಕಾಲಿಕ ಮಳೆ, ಮಂಜಿನ ವಾತಾವರವು ಭೂಮಿಯ, ಗಿಡಮರಗಳ ಸದೃಡತೆಯನ್ನು ಏರುಪೇರು ಮಾಡುತ್ತಿದ್ದು, ರೈತರು ಸಾವಯವ ಅಂಶ ಭೂಮಿಗೆ ಬಳಸಿ, ದುಂಡು ತೆನೆಯ ಜೋಳ, ತೊಗರಿ ಮತ್ತು ಕಡಲೆ ಬೆಳೆದ ಪ್ರದೇಶಗಳಲ್ಲಿ ಅಲ್ಲಿಲ್ಲಿ ಬಿತ್ತನೆ ಮಾಡಬೇಕು. ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯದ, ಮಣ್ಣು ವಿಜ್ಞಾನದ ಸಹ ಪ್ರಾಧ್ಯಾಪಕರಾದ ಡಾ. ಮಲ್ಲಪ್ಪಾ ಎ. ಬೆಳ್ಳಕ್ಕಿ, ಜೀವ ರಸಾಯನಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಡಾ. ತ್ರಿವೇಣಿ ಇಂಗನಕಲ್ಲ ಉಪಸ್ಥಿತರಿದ್ದರು.
ತೊಗರಿ, ಟೊಮ್ಯಾಟೋ, ಹತ್ತಿ, ಪಾಲಕ್ ಕ್ಷೇತ್ರ ಭೇಟಿಯಲ್ಲಿ ಸೂಕ್ಷ್ಮಾಣುಜೀವಿ ಸಹಾಯಕಿ ಪ್ರಾಧ್ಯಾಪಕಿ ಡಾ. ಅಮೃತ ಜಿ, ಕೃಷಿ ವಿದ್ಯಾರ್ಥಿಗಳು ಮತ್ತು ಬೀಮಳ್ಳಿ ರೈತರು ಉಪಸ್ಥಿತರಿದ್ದರು. ಪ್ರಶ್ನೊತ್ತರ ಕಾರ್ಯಕ್ರಮದಲ್ಲಿ ರೈತರ ಬೆಳೆದ ಬೆಳೆಗಳಿಗೆ ಬರುವ ಕೀಟ, ರೋಗ, ಪೋಷಕಾಂಶ ನ್ಯೂನತೆಗಳಿಗೆ ವಿಜ್ಞಾನಿಗಳು ಉತ್ತರಿಸಿದರು.