ಆಳಂದ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಆಳಂದ ಶಾಸಕ ಸುಭಾಷ ಆರ್ ಗುತ್ತೇದಾರ ಮೋಟಾರ ಪಂಪಸೆಟ್ ಹಾಗೂ ಪೂರಕ ಸಾಮಗ್ರಿ ವಿತರಣೆ ಮಾಡಿದರು.
ಬುಧುವಾರ ಆಳಂದ ಪಟ್ಟಣದಲ್ಲಿ 2019-20 ಮತ್ತು 2020-21ನೇ ಸಾಲಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಕಲಬುರಗಿ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆ ಬಾವಿಗಳಿಗೆ ಮೋಟಾರ, ಪಂಪಸೆಟ್ ಹಾಗೂ ಪೂರಕ ಸಾಮಗ್ರಿಗಳನ್ನು ಆಯ್ಕೆಯಾದ ಫಲಾನುಭವಿಗಳಾದ ಕಲ್ಯಾಣಿ ಕಲಪ್ಪ, ಅಂಬವ್ವಾ ಗುಂಡಪ್ಪ, ಶ್ರೀಮಂತ ದುಂಡಪ್ಪ, ರಾಯಪ್ಪ ಮಾಣಿಕ, ನಾಮದೇವ ಹಣಮಂತ ಫಲಾನುಭವಿಗಳಿಗೆ ಶಾಸಕ ಸುಭಾಷ ಆರ್ ಗುತ್ತೇದಾರ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ನಿಮಗದ ತಾಲೂಕು ಅಭಿವೃದ್ಧಿ ಅಧಿಕಾರಿ ಲಿಂಗರಾಜರಾವ ಎಂ, ಶಿವುಕುಮಾರ ಹೆಚ್ ಆರ್ ಇದ್ದರು.