ಶಹಾಬಾದ ರಿಂಗ್ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಲು ರೈತರ ಒಪ್ಪಿಗೆ

0
220

ಶಹಾಬಾದ : ನಗರದ ಅಭಿವೃದ್ಧಿ ದೃಷ್ಠಿಯಿಂದ ನಗರದ ಹೊರವಲಯದಲ್ಲಿ ರಿಂಗ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಸಕ ಬಸವರಾಜ ಮತ್ತಿಮಡು ಅಧ್ಯಕ್ಷತೆಯಲ್ಲಿ ನಗರಸಭೆಯ ಸಭಾಂಗಣದಲ್ಲಿ ಭೂಮಾಲೀಕರ ಹಾಗೂ ತಹಸೀಲ್ದಾರÀ ಸುರೇಶ ನಡುವೆ ನಡೆದ ಸಭೆಯಲ್ಲಿ ರಿಂಗ್ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಲು ರೈತರು ಒಪ್ಪಿಗೆ ಸೂಚಿಸಿದರು.

ಶಹಾಬಾದನ ಅಭಿವೃದ್ಧಿಗೆ ಹಾಗೂ ಸುಗಮ ಸಂಚಾರಕ್ಕೆ ಅವಶ್ಯವಾಗಿ ರಿಂಗ್ ರಸ್ತೆ ನಿರ್ಮಾಣ ಮಾಡಲು 2017ರಲ್ಲಿ ಯೇ ಮಾರ್ಕ ಮಾಡಿ ಧ್ವಜಗಳನ್ನು ಹಾಕಲಾಗಿತ್ತು.ಆದರೆ ಅಂದು ರೈತರು ಒಪ್ಪಿಗೆ ನೀಡದೇ ಎಲ್ಲಾ ಧ್ವಜಗಳನ್ನು ತೆಗೆದುಹಾಕಿದರು.ಅಂದಿನಿಂದ ಈ ಬಗ್ಗೆ ಯಾವ ಪ್ರಕ್ರಿಯೆ ನಡೆಯಲಿಲ್ಲ. ಕೆಕೆಆರ್‍ಡಿಬಿ ಮುಖಾಂತರ ರಿಂಗ್ ರಸ್ತೆ ನಿರ್ಮಾಣ ಒಪ್ಪಿಗೆ ಸೂಚಿಸಲಾಗಿದೆ.ಆದರೆ ರೈತರು ಒಪ್ಪಿಗೆ ನೀಡಿದರೆ ಮಾತ್ರ ಮುಂದುವರೆಯಲಾಗುವುದು ಎಂದು ಹೇಳಲಾಗಿದೆ. ಸರಕಾರದ ಆದೇಶದ ಮೇರೆಗೆ ರೈತರ ಭೂಸ್ವಾಧೀನ ಮಾಡಿಕೊಳ್ಳಬಹುದಾದರೂ ಇದು ದೀರ್ಘಾವಧಿ ಪ್ರಕ್ರಿಯೆ.ಆದ್ದರಿಂದ ರೈತರು ಒಪ್ಪಿಗೆ ಸೂಚಿಸಬೇಕೆಂದು ಮನವಿ ಮಾಡಿದರು.

Contact Your\'s Advertisement; 9902492681

ರೈತರು ಭೂಮಿಗೆ ಒಳ್ಳೆಯ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಅದಕ್ಕೆ ತಹಸೀಲ್ದಾರ ಸುರೇಶ ವರ್ಮಾ ಅವರು, ಸರಕಾರದ ಮೌಲ್ಯದ ಪ್ರಕಾರ ಪರಿಹಾರ ಧನ ನೀಡಲಾಗುತ್ತದೆ ಎಂದರು.ಅಲ್ಲದೇ ಶಾಸಕ ಬಸವರಾಜ ಮತ್ತಿಮಡು ಅವರು ಅಧಿಕಾರಿ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ ಹೆಚ್ಚಿನ ಪರಿಹಾರ ನೀಡುವತ್ತ ಕ್ರಮಕೈಗೊಳ್ಳುತ್ತೆನೆ ಎಂದರು.

ಶಹಾಬಾದನ ವರ್ತೂಲ ರಸ್ತೆ ಸುಮಾರು 22 ಕಿ. ಮೀ. ಉದ್ದದ ಮತ್ತು 30 ಮೀ. ಅಗಲದ ರಿಂಗ್ ರಸ್ತೆ ನಿಜಾಮ ಬಜಾರದಿಂದ, ಕರ್ನಾಟಕ ಹೌಸಿಂಗ್ ಬೋರ್ಡ ಕಾಲೋನಿ,ತರನಳ್ಳಿ, ರಾಮಘಡ ಆಶ್ರಯ ಕಾಲೋನಿ, ಭಂಕೂರ,ಕಾಗಿಣಾ ಬ್ರಿಜ್ ಮುಖಾಂತರ ಮತ್ತೆ ನಿಜಾಮ ಬಜಾರಕ್ಕೆ ಬಂದು ಸೇರುತ್ತದೆಎಂದರು. ಈಗಾಗಲೇ ಸರ್ಕಾರದ ಹಂತದಲ್ಲಿ ಅಂತಿಮ ನೋಟಿಫೀಕೆಷನ್ ಆಗಿದ್ದರಿಂದ ಇದನ್ನು ಕೈ ಬಿಡಲು ಬರುವುದಿಲ್ಲ. ನಗರದ ಅಭಿವೃದ್ಧಿಗೆ ರಿಂಗ್ ರಸ್ತೆ ಸ್ಥಾಪನೆ ಅವಶ್ಯಕತೆ ಇದೆ. ಅದಕ್ಕಾಗಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ತಾಲೂಕ ತಹಶೀಲ್ದಾರ ಹೇಳಿದರು.

ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ವಾಡಿ-ಶಹಾಬಾದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ, ಸದಸ್ಯ ಕಾರ್ಯದರ್ಶಿ ತಿಪ್ಪಣ್ಣ ಮಾಂಗ, ಪೌರಾಯುಕ್ತರಾದ ಬಸವರಾಜ ಹೆಬ್ಬಾಳ, ಎಇಇ ಶರಣು ಪೂಜಾರಿ, ಶರಣಗೌಡ, ನಗರಸಭೆಯ ಸದಸ್ಯರಾದ ರವಿ ರಾಠೋಡ, ಪಾರ್ವತಿ ಪವಾರ, ಸಿದ್ರಾಮ ಕುಸಾಳೆ, ಭೂ ಮಾಲೀಕರಾದ ಶಿvuಗೌಡ ಪಾಟೀಲ,ಶ್ರೀಶೈಲಪ್ಪ ಅವಂಟಿ, ವಿಶ್ವನಾಥ ಮಲಕೂಡ, ಸಾಯಬಣ್ಣ ಸುಂಗಲಕರ್ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here