ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಘಟಕ ಪದಾಧಿಕಾರಿಗಳ ನೇಮಕ

0
48

ಜೇವರ್ಗಿ: ಜಿಲ್ಲಾ ಅಧ್ಯಕ್ಷರಾದ ಬಸವರಾಜ ಕೊರಳ್ಳಿ ಹಾಗೂ ತಾಲೂಕು ಅಧ್ಯಕ್ಷರಾದ ಸತೀಶ ಜಾಗೀರದಾರ ರವರ ನೇತೃತ್ವದಲ್ಲಿ ಸಂಘಟನೆಯ ಪದಾಧಿಕಾರಿಗಳ ನೇಮಕಾತಿ ಮಾಡಿ ಆದೇಶ ಪತ್ರ ನೀಡಲಾಯಿತು.

ಜೇವರ್ಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕ ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಕಾರ್ಯಧ್ಯಕ್ಷರಾಗಿ ಮಹಾಂತೇಶ ಹಾದಿಮನಿ,ಪ್ರಧಾನ ಕಾರ್ಯದರ್ಶಿಯಾಗಿ,
ವಿಕ್ರಮ ಬೇಲೂರ,ಉಪಾಧ್ಯಕ್ಷರಾಗಿ ಮುನಿರಪಾಷಾ ಕಳ್ಳಿ,ಉಪಾಧ್ಯಕ್ಷರಾಗಿ ಪರಶುರಾಮ ಹೊಸಮನಿ,ನಗರ ಘಟಕದ ಅಧ್ಯಕ್ಷರಾಗಿ ವಿಶ್ವರಾಧ್ಯ ಗೋಪಾಲಕರ ಮಂದೇವಾಲ, ವಲಯ ಘಟಕದ ಅಧ್ಯಕ್ಷರಾಗಿ ಲಕ್ಷ್ಮಣ ನಾಯ್ಕೋಡಿ,ನೇಲೋಗಿ ವಲಯ ಅಧ್ಯಕ್ಷರಾಗಿ ಭೀಮರಾಯ ತಳವಾರ,ಗ್ರಾಮ ಘಟಕ ಅಧ್ಯಕ್ಷರುಗಳಾಗಿ ಹಣಮಂತ ಮಯೂರ,ವಿಶ್ವನಾಥ ದೊಡ್ಮನಿ,ಹಾಗೂ ವಿನೋದ ಕಾಂಬಳೆ,ಸಂತೋಷ ಜೋಶಿ, ಸಿದ್ದಣ್ಣ ಹಂಚಿನಾಳ, ಈ ಎಲ್ಲಾ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳನ್ನಾಗಿ ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು.

Contact Your\'s Advertisement; 9902492681

ಜಿಲ್ಲಾಧ್ಯಕ್ಷರಾದ ಬಸವರಾಜ ಕೊರಳ್ಳಿ ಜೇವರ್ಗಿ ಅಧ್ಯಕ್ಷರಾದ ಸತೀಶ ಜಾಗೀರದಾರ,ಹಾಗೂ ಜಿಲ್ಲಾ ವಿದ್ಯಾರ್ಥಿ ಘಟಕ ಅಧ್ಯಕ್ಷರಾದ ಆಶಿಫ್ ಅಫ್ಜಲಪುರ ಹಾಗೂ ಕಲಬುರಗಿ ತಾಲೂಕು ಅಧ್ಯಕ್ಷರಾದ ಸಂದೀಪ ಭೀಮಳ್ಳಿ ಯಡ್ರಾಮಿ ತಾಲೂಕು ಅಧ್ಯಕ್ಷರಾದ ಜಗದೀಶ್ ಮಡಿವಾಳಕರ ಹಾಗೂ ನಾಗರಾಜ ಕೊಗುನೂರ ಈ ಸಂದರ್ಭದಲ್ಲಿಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here