ಪೊಲೀಸ ಕಾರ್ಯಾಚರಣೆ : ಅಕ್ರಮ ಮಧ್ಯ ಮಾರಾಟಕ್ಕೆ ಬ್ರೇಕ್

0
23

ಮಾದನಹಿಪ್ಪರಗಿ: ಇತ್ತೀಚೆಗೆ ನಿಂಬಾಳದಲ್ಲಿ ನಿಮ್ಮ ಮನೆ ಬಾಗಿಲಿಗೆ ಪೊಲೀಸ್ ಕಾರ್ಯಕ್ರಮದಲ್ಲಿ ಅಕ್ರಮ ಮಧ್ಯ ಮಾರಾಟ ನಡೆಯಿತ್ತಿದೆ ಎಂದು ಸಾರ್ವಜನಿಕರು ದೂರು ನೀಡಿದ ಹಿನ್ನಲೆಯಲ್ಲಿ ಮಾದನಹಿಪ್ಪರಗಿ ಪೋಲೀಸ ಠಾಣೆಯ ಪಿಎಸ್‍ಐ ದಿನೇಶ ಹಾಗೂ ಸಿಬ್ಬಂಧಿಗಳು ಸೇರಿ ಮಾರಾಟ ಮಾಡುವಂತಹ ಅಂಗಡಿಗಳ ಮೇಲೆ ಗೌಪ್ಯ ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದ್ದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಸರಕಾರಿ ಪ್ರಾಥಮಿಕ ಶಾಲೆಯು ಆವರಣದ ಕುಡುಕರ ತಾಣವಾಗಿದೆ. ಅದನ್ನು ನಿಲ್ಲಿಸುವಂತೆ ಅಲ್ಲಿನ ಶಾಲೆಯ ಮುಖ್ಯೋಪಾಧ್ಯಯರು ಎಸ್ಪಿ ಇಶಾ ಪಂತ್ ಮೇಡಮ್ ಅವರಿಗೆ ದೂರು ನೀಡಿದ್ದರು. ಮತ್ತು ಬಸ್ ನಿಲ್ದಾಣದ ಸುತ್ತಮುತ್ತಲಿನ ಅಂಗಡಿಗಳಲ್ಲಿ ಅಕ್ರಮ ಮಧ್ಯ ಮಾರಾಟ ನಡೆಯುತ್ತಿದೆ. ಸಂಜೆ ಹೊತ್ತಿನಲ್ಲಿಯೇ ಹೆಣ್ಣುಮಕ್ಕಳು ತಿರುಗಾಡದಂತ ವಾತಾವರಣ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ದೂರು ನೀಡಿದ್ದರು.

Contact Your\'s Advertisement; 9902492681

ಎಸ್ಪಿಯವರ ಆದೇಶದಂತೆ ಮಾದನಹಿಪ್ಪರಗಿ ಪೊಲೀಸ ಠಾಣೆಯ ಪಿಎಸ್‍ಐ ದಿನೇಶ ಮತ್ತು ಅವರ ಸಿಬ್ಬಂಧಿಗಳು ಸತತ ನಾಲ್ಕಾರು ಬಾರಿ ಗ್ರಾಮಕ್ಕೆ ಗೌಪ್ಯವಾಗಿ ದಾಳಿ ಮಾಡಿ ಅಕ್ರಮ ಮಧ್ಯ ಮಾರಾಟ ಮಾಡುವವರನ್ನು ಬಂಧಿಸಿದ್ದಾರೆ. ಇದರಿಂದ ಗ್ರಾಮದಲ್ಲಿ ಅಕ್ರಮ ಮಧ್ಯ ಮರಾಟ ಬಂದ್ ಆಗಿದೆ. ಈಗ ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಎಸ್‍ಡಿಎಂಸಿ ಅಧ್ಯಕ್ಷ ಹಣಮಂತ ಹೊನ್ನಳ್ಳಿ, ಗ್ರಾಮ ಪಂಚಾಯತ ಸದಸ್ಯರಾದ ಲಕ್ಷ್ಮಣ ತಳಕೇರಿ ಮುಖಂಡರಾದ ಹಣಮಂತ ಹೊಳಿಕೇರಿ ಮಾದನಹಿಪ್ಪರಗಿ ಪೊಲೀಸ ಠಾಣೆಯ ಪಿಎಸ್‍ಐ ದಿನೇಶ ಹಾಗೂ ಸಿಬ್ಬಂಧಿಗಳನ್ನು ಅಭಿನಂದಿಸಿದ್ದಾರೆ.

ಕೆಲವರು ಸಂಜೆ ಹೊತ್ತಿನಲ್ಲಿ ಕಿಸೆಯೊಳಗೆ ಮಧ್ಯದ ಬಾಟಲಿಗಳನ್ನು ಇಟ್ಟುಕೊಂಡು ತಿರುಗಾಡಿ ಮಾರುತ್ತಿದ್ದಾರೆ. ಅವರನ್ನು ಶೀಘ್ರದಲ್ಲಿಯ ಬಂಧಿಸಲಾಗುವುದು. ಸರ್ವಜನಿಕರು ನಮ್ಮಗೆ ಸಹಕಾರ ನೀಡಿದರೆ ಮಾಹಿತಿ ಅತ್ಯಗತ್ಯ ಎಂದು ಪಿಎಸ್‍ಐ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here