ಸೇಡಂ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ಷಯರೋಗಿಗಳ ಸಭೆಯಲ್ಲಿ ಕ್ಷಯರೋಗಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಪೌಷ್ಟಿಕಾಂಶ ಪೌಡರ್ವಿತರಿಸಿ ಮಾತನಾಡುತ್ತಾ ಜಿಲ್ಲಾ ಡಿ ಆರ್ ಟಿಬಿ ಸಮಾಲೋಚಕ ಮಂಜುನಾಥ ಕಂಬಳಿಮಠ ಕ್ಷಯರೋಗಿಗೆ ಆತ್ಮಸ್ಥೈರ್ಯ, ಆರೋಗ್ಯದ ಬಗ್ಗೆ ಚಿಕಿತ್ಸಾ ಪೂರ್ವ ಅವಧಿಯಲ್ಲಿ ಹೇಗೆ ಮುನ್ನೆಚ್ಚರಿಕೆ ಕ್ರಮವಹಿಸಿಕೊಳ್ಳಬೇಕೆಂದು ಸಲಹೆ ನೀಡಿ ಹಾಗೆ ಡಾ. ಫಾರೂಕ್ ಅಹ್ಮದ್ ಮಣ್ಣೂರ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಇವರು ನಿ–ಕ್ಷಯ ಮಿತ್ರಕ್ಕೆ ಕೈ ಜೊಡಿಸಿ ಎಲ್ಲಾ150 ಕ್ಷಯರೋಗಿಗೆಪೌಷ್ಟಿಕ ಪೌಡರ್ ನೀಡಲು ಮಂದೆ ಬಂದಿದ್ದಾರೆ, ಕ್ಷಯರೋಗಿಗೆ ಹೇಗೆ ಸೇವನೆ ಮಾಡಬೇಕೆಂದು ಹೇಳಿದರು.
ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕೇಂದ್ರ. ಹಾಗೂ ಸಕ್ಷಮ್ ಪರ್ವ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಹಾಗೂ ಮಣ್ಣೂರ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆ ಇವರ ಸಂಯುಕ್ತಶ್ರಾಯದಲ್ಲಿ ನೆಡೆದ ಕಾರ್ಯಕ್ರಮ.
ತಾಲ್ಲೂಕ ಎಸ್ ಟಿ ಎಸ್ ಮಹಾಂತೇಶ ಹಾವನೂರಅವರು ಮಾತನಾಡುತ್ತಾ ಕ್ಷಯರೋಗ ನಿರ್ಮೂಲನೆ ಮಾಡಲು ಸ್ವಯಂ ಪ್ರೇರಿತರಾಗಿ ಸಂಘ ಸಂಸ್ಥೆಗಳು ಟ್ರಸ್ಟ್ ಗಳು ಮುಂದೆ ಬಂದರೆ ನಿಕ್ಷಯ ಮಿತ್ರ ನೊಂದಾಯಿಸಿಕೊಂಡು ಕ್ಷಯ ಮುಕ್ತ ಮಾಡುವಲ್ಲಿ ಸಂಶಯವೆಯಿಲ್ಲ.ಈ ವಿಶೇಷ ಕಾರ್ಯಕ್ರಮದಲ್ಲಿ
ಕ್ಷಯರೋಗಿಗೆ ದತ್ತು ಪಡೆದುಕೊಂಡು ಅವರಿಗೆಜೊತೆಗೆ ಆರು ತಿಂಗಳ ಕಾಲ ಪೌಷ್ಟಿಕ ಆಹಾರ ಪೌಡರ್ ನಿಡುತ್ತಿರುವುದು ಪ್ರಶಂಸೆಯನಿಯ ಕಾರ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆ ಮೇಲೆ ಪ್ರಮುಖರಾದ ಜಿಲ್ಲಾ ಆರೋಗ್ಯ ನೀರಿಕ್ಷಾಣಧಿಕಾರಿ ಗುಂಡಪ್ಪ ದೊಡ್ಡಮನಿ, ಎಸ್ ಟಿ ಎಲ್ ಎಸ್ಸುರೇಶ ಕಲಶೆಟ್ಟಿ,ಟಿಬಿ ಹೆಚ್ ವಿ , ಬೆಂಜ್ಜಿಮೆನ್, ಎಲ್.ಟಿ ಶರತ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಕ್ಷಯರೋಗಿಗಳು ಮತ್ತು ಸಹಾಯಕರು ಇದ್ದರು.