ಡಿ.ಎಸ್.ಇ.ಆರ್.ಟಿ. ನಿರ್ದೇಶಕರಿಂದ ಶೈಕ್ಷಣಿಕ ಪ್ರಗತಿ ಪರಿಶೀಲನೆ

0
25

ಕಲಬುರಗಿ: ಸಾರ್ವಜನಿಕ ಶಿಕ್ಷಣ  ಇಲಾಖೆ, ಜಿಲ್ಲಾ ಶಿಕ್ಷಣ  ಮತ್ತು ತರಬೇತಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವತಿಯಿಂದ ಶೈಕ್ಷಣಿಕ ಪ್ರಗತಿ ಪರಿಶೀಲನೆ ಹಮ್ಮಿಕೊಳ್ಳಲಾಯಿತು.

ಮೊದಲನೇ ದಿನ ಡಿ.ಎಸ್.ಇ.ಆರ್.ಟಿ ನಿರ್ದೇಶಕರಾದ  ಶ್ರೀಮತಿ ಸುಮಂಗಲ ಅವರು ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ  ಅರಿವು  ಕಾರ್ಯಾಗಾರದಲ್ಲಿ ಭಾಗವಹಿಸಿದರು, ಇಂಗ್ಲೀಷ್ ಶಿಕ್ಷಕರ ತರಬೇತಿಯಲ್ಲಿ ಭಾಗವಹಿಸಿದರು ಹಾಗೂ ಕಲಬುರಗಿ ಜಿಲ್ಲೆಯ ದಕ್ಷಿಣ ವಲಯದ  ಸರಕಾರಿ ಪ್ರೌಢ ಶಾಲೆ  ಹಾಗೂ ಎಸ್.ಬಿ.ಟಿ.  ಸರಕಾರಿ ಕಿರಿಯ ಪ್ರಾಥಮಿಕ  ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕೆ ಮತ್ತು ಶಿಕ್ಷಕರ ಭಾಗವಹಿಸುವಿಕೆಯನ್ನು ಪರಿಶೀಲಿಸಿದರು.

Contact Your\'s Advertisement; 9902492681

ಎರಡನೇ ದಿನ ಕಮಲಾಪೂರ ತಾಲೂಕಿನ ಪ್ರಾತ್ಯಾಕ್ಷಿಕ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ  ನಲಿಕಲಿ ತರಗತಿ ವೀಕ್ಷಣೆ ಮಾಡಿದರು.  ಬಳಿಕ ಡಯಟ್ ಕಮಲಾಪೂರದಲ್ಲಿ ಜಿಲ್ಲೆಯ ಎಲ್ಲಾ ಅನುಷ್ಠಾನ ಅಧಿಕಾರಿಗಳ ಜೊತೆಗೆ ಶೈಕ್ಷಣಿಕ ಪ್ರಗತಿ ಪರಿಶೀಲನೆ ಮಾಡಿ ಶೈಕ್ಷಣಿಕ ಮಾರ್ಗದರ್ಶನ  ಮಾಡಿದರು.

ಈ  ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಕಲಬುರಗಿ ಜಿಲ್ಲೆಯಲ್ಲಿ ಕಲಿಕಾಚೇತರಿಕೆ ಹಾಗೂ ಇತರೆ ಕಾರ್ಯಕ್ರಮಗಳು ಅತ್ಯಂತ ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಬೇಕು. ಶಿಕ್ಷಕರು ತಮ್ಮ ತಮ್ಮ ವೃತ್ತಿಯ ಬಗ್ಗೆ ಗೌರವ ಇಟ್ಟುಕೊಂಡು ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡಬೇಕು. ಸರಕಾರಿ ಶಾಲೆಯಲ್ಲಿ ಓದುತ್ತಿರುವ ಬಡಮಕ್ಕಳಿಗೆ  ಸರಿಯಾಗಿ ಓದು ಬರವಣಿಗೆ ಕಲಿಸಿರಿ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ನಾವೆಲ್ಲರೂ ಅತ್ಯಂತ ಗೌರವಯುತವಾಗಿ ನಡೆದುಕೊಳ್ಳುವ ಮೂಲಕ  ಮಕ್ಕಳಿಗೆ ಸ್ಪಷ್ಟವಾದ ಓದು ಶುದ್ಧ ಬರವಣಿಗೆ ಸರಳವಾದ ಗಣಿತವನ್ನು ಕಲಿಸಬೇಕು ಅಷ್ಟೆ ಅಲ್ಲದೇ ಇಲಾಖೆಯ ನಿಯಾಮವಳಿಗಳ ಪ್ರಕಾರ ನಾವೆಲ್ಲರೂ ಕೆಲಸ ಮಾಡಬೇಕು ಎಂದು ಮಾರ್ಗದರ್ಶನ ಮಾಡಿದರು.

ಈ ಭೇಟಿಯ ಸಂದರ್ಭದಲ್ಲಿ ಉಪನಿರ್ದೇಶಕರಾದ ಸಕ್ರೆಪ್ಪಗೌಡ ಬಿರಾದಾರ  ಬಸವರಾಜ ಮಾಯಾಚಾರ್ಯ, ಡಯಟ್ ನ ಉಪನ್ಯಾಸಕರು, ಬಿ,ಇ,ಓ, ಬಿ,ಆರ್,ಸಿ ಹಾಗೂ ಸ್ಟರ್  ಸಂಸ್ಥೆಯ ಕೆ.ಎಂ.ವಿಶ್ವನಾಥ ಮರತೂರ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here