ಅಂತರ್‍ರಾಷ್ಟ್ರಿಯ ಜಾಂಬೂರಿಯಲ್ಲಿ ಶ್ರೀ ಚನ್ನಬಸವೇಶ್ವರ ಗುರುಕುಲದ ವಿದ್ಯಾರ್ಥಿಗಳು ಭಾಗಿ

0
14

ಭಾಲ್ಕಿ: ಮೂಡಬಿದಿರಿಯ ಆಳ್ವಾಸ್ ಸಂಸ್ಥೆಯಿಂದ ಆಯೋಜಿಸಿರುವ ಅಂತರ್‍ರಾಷ್ಟ್ರೀಯ ಸಾಂಸ್ಕøತಿಕ ಜಂಬೂರಿಯ ಕಾರ್ಯಕ್ರಮಕ್ಕೆ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ಶಾಲೆಯ 27 ಸ್ಕೌಟ್ಸ್ ವಿದ್ಯಾರ್ಥಿಗಳು ಹಾಗೂ 05 ಜನ ಗೈಡ್ ವಿದ್ಯಾರ್ಥಿಯರು ಹಾಗೂ ಇಬ್ಬರು ಸ್ಕೌಟ್ಸ್ ಮಾಸ್ಟರ್ ಒಬ್ಬ ಗೈಡ್ ಕ್ಯಾಪ್ಟನ್ ಭಾಗವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವದಿಸಿ, ಪ್ರಯಾಣದ ಸಂದರ್ಭದಲ್ಲಿ ನಾವು ಜಾಣನಾಗಿ ಹೋಗಬೇಕು ಹೇಗೆ ಎಂದರೆ `ಜಾಣ-ಜಾಣ ಇದ್ರೆ ಮೂರು ದಾರಿ ಎಂದು ಕಿವಿ ಮಾತು ಹೇಳಿ ಆಶೀರ್ವದಿಸಿದರು.

ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು, ಜಾಂಬೂರಿಯಲ್ಲಿ ಆಯೋಜಿಸಲಾಗಿರುವ ಎಲ್ಲಾ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಶಿಕ್ಷಕ ಸಿಬ್ಬಂದಿಯವರಾದ ಅನೀಲಕುಮಾರ ಪಾಟೀಲ, ಸಿ.ಬಾಗವಾನ ಹಾಗೂ ರೇಖಾ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತರುವಂತರಾಗಬೇಕು ಎಂದು ಆಶೀರ್ವದಿಸಿದರು. ಸಂಸ್ಥೆಯ ಆಡಳಿತಾಧಿಕಾರಿಗಳಾದ ಶರಣ ಮೋಹನರೆಡ್ಡಿ ಅವರು ಮಕ್ಕಳಿಗೆ ಶುಭವಾಗಲೆಂದು ಹಾರೈಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here