ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಚಿಂಚೋಳಿ ಎಚ್ ಗ್ರಾಮದ್ಲಲಿ ಶ್ರೀ ಭಾಗ್ಯವಂತಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮವು ಸಹಸ್ರಾರು ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಭಾಗ್ಯವಂತಿ ದೇವಿ ಮೂರ್ತಿ ಪ್ರತಿಷ್ಠಾಪನೆ ನಿಮಿತ್ಯ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತು. ಬೆಳಿಗ್ಗೆ ಗ್ರಾಮದ ನದಿಯಲ್ಲಿ ಭಾಗ್ಯವಂತಿ ದೇವಿ ಮೂರ್ತಿಗೆ ಗಂಗಾ ಸ್ನಾನ ಮಾಡಿಸುವ ಮೂಲಕ ವಿಶೇಷ ಅಭಿಷೇಕ ಮಾಡಲಾಯಿತು ನಂತರ ಎರಡು ನೂರ ಒಂದು ಮುತ್ತೈದೆಯರ ಕುಂಭ -ಕಳಸದ ಭವ್ಯ ಮೆರವಣಿಗೆಯೊಂದಿಗೆ ಎತ್ತಿನ ಬಂಡಿಯಲ್ಲಿ ಭಾಗ್ಯವಂತಿ ದೇವಿ ಮೂರ್ತಿ ಪ್ರತಿಷ್ಠಾಪಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಡೊಳ್ಳು-ಹಲಗೆ ಬಾಜ ಭಜಂತ್ರಿಯೊಂದಿಗೆ ದೇವಸ್ಥಾನಕ್ಕೆ ತೆರಳಿ ಎರಡನೂರ ಒಂದು ಮುತ್ತೈದೆಯರಿಗೆ ಉಡಿ ತುಂಬಲಾಯಿತು.
ಈ ಸಂದರ್ಭದಲ್ಲಿ ಜಗನ್ನಾಥ ಟೆಂಗಳಿ,ರಾಚಣ್ಣ,ಅಶೋಕ ಹೂಗೊಂಡ್, ರತ್ನಾಪ್ಪ ಅಡಗೋಣ, ಮಲ್ಲು ತೇಲಿ, ಸಿದ್ದು ಪಂಚಾಳ, ಜಗನ್ನಾಥ ಗಂಜಿ,ಉಮೇಶ ಪಂಚಳ, ಸಿದ್ರಾಮ ಟೆಂಗಳಿ, ಗುಂಡು ಪಂಗರಗಿ,ವಿನೋದ ಟೆಂಗಳಿ ಸೇರಿದಂತೆ ಗ್ರಾಮದ ಅನೇಕ ಭಕ್ತರು ಭಾಗವಹಿಸಿದರು.