22ರಂದು ಕಲಬುರಗಿಗೆ ಕುಮಾರೇಶ್ವರ ರಥಯಾತ್ರೆ

0
16

ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥಾಪಕ ಹಾಗೂ ಶಿವಯೋಗ ಮಂದಿರ ನಿರ್ಮಾತೃ ಹಾನಗಲ್ ಕುಮಾರ ಸ್ವಾಮಿಗಳ ಜೀವನ ಆಧಾರಿತ ವಿರಾಟಪುರ ವಿರಾಗಿ ಚಲನಚಿತ್ರ ಮುಂದಿನ ತಿಂಗಳು ಬಿಡುಗೊಳ್ಳಲಿದ್ದು, ಚಲನಚಿತ್ರ ಬಿಡುಗಡೆ ಅಂಗವಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ತಿಳಿಸಿದರು.

ರಾಜ್ಯದ ಐದು ಕಡೆ ವಿವಿದ ಭಾಗದಿಂದ ನಾಳೆಯಿಂದ ರಥಯಾಣಜಿಡಿe ಆರಂಭವಾಗಲಿದ್ದು,  ದಿ. 20 ರಂದು ಬೀದರ್‍ದಿಂದ ಆರಂಭಗೊಳ್ಳುವ ರಥಯಾತ್ರೆಯು ಡಿ.22ರಂದು ಸಂಜೆ 4ಕ್ಕೆ ಕಲಬುರಗಿ ಮಹಾನಗರಕ್ಕೆ ನಗರಕ್ಕೆ ಪ್ರವೇಶ ಮಾಡಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ರಥಯಾತ್ರೆಗೆ ಅದ್ದೂರಿಯಾಗಿ ಸ್ವಾಗತಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಮೆರವಣಿಗೆಯಲ್ಲಿ ಸಮಾಜದ ಅನೇಕ ಮುಖಂಡರು ಪಾಲ್ಗೊಳ್ಳಲಿದ್ದಾರೆ. ತದನಂತರ ಸಂಜೆ  6ಕ್ಕೆ ಶರಬಣವೇಶ್ವರ ದೇವಾಸ್ಥಾನದ ಆವರಣದಲ್ಲಿ ನಾಡಿನ ಹರ ಗುರು ಚರಮೂರ್ತಿಗಳ ಸಾನ್ನಿಧ್ಯ ದಲ್ಲಿ ಕಾರ್ಯಕ್ರಮ ನಡೆಯಲಿದೆ.

ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಸಮಧಾನ ನಿರ್ಮಿತ ಹಾಗೂ ಬಿ.ಎಸ್.ಲಿಂಗದೇವರು ನಿರ್ದೇಶಿತ ವಿರಾಟಪುರ ವಿರಾಗಿ  ಕೇವಲ ಚಲನಚಿತ್ರ ವಲ್ಲ.ಇದರ ಸಂದೇಶ ನಮ್ಮೆಲ್ಲರ ಜೀವನಕ್ಕೆ ಬೆಳಕಿನ ದಾರಿ ಆಗಲಿದೆ. ನೂರು ವರ್ಷಗಳ ಹಿಂದೆ ಆಗಿ ಹೋದ ಮಹಾತ್ಮರ ಜೀವನ ಚರಿತ್ರೆಯನ್ನು ಇಂದಿನ ಸಮಾಜಕ್ಕೆ ಹೇಳಿಕೊಡುವ ಪ್ರಯತ್ನ ಕಾರ್ಯರೂಪಕ್ಕೆ ತರುವುದು ಸಾಹಸವೇ ಸರಿ.

ಈ ಚಿತ್ರದ ವಿಶೇಷವೆಂದರೆ ಪೂಜ್ಯ ಹಾನಗಲ್ ಶ್ರೀಕುಮಾರ ಶಿವಯೋಗಿಗಳವರ ಗುರುಗಳಾದ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಪಾತ್ರವನ್ನು ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರು ಈ ಪಾತ್ರವನ್ನು ನಿಭಾಯಿಸಿದ್ದಾರೆ ಹಾಗು  ಪೆÇೀಷಕ ಪಾತ್ರಗಳಲ್ಲಿ ಅನೇಕ ಸ್ವಾಮೀಜಿಯವರು ಪಾತ್ರವಹಿಸಿದ್ದಾರೆ.

ಸಮಾಜದ ಮುಖಂಡರಾದ ಬಸವರಾಜ ಭೀಮಳ್ಳಿ, ಅರುಣಕುಮಾರ ಪಾಟೀಲ್, ಸೋಮಶೇಖರ ಹಿರೇಮಠ, ಭೀಮಾಶಂಕರ ಮೇಟಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here