ಕಲಬುರಗಿ: ಗೋಕುಲ ನಗರದಲ್ಲಿರುವ ಸಾಂಸ್ಕೃತಿಕ ಭವನದಲ್ಲಿ ಮಹಾಂತ ಜ್ಯೋತಿ ಪ್ರತಿಷ್ಠಾನ, ಕವಿದ್ದನಿ ಸಾಹಿತ್ಯಕ ಹಾಗೂ ಸಾಂಸ್ಕøತಿಕ ಪ್ರತಿಷ್ಠಾನ ಇವರ ಸಂಯುಕ್ತಾಶ್ರಯದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ಅಮೃತ ಮಹೋತ್ಸವ ಸಂಭ್ರಮ ಹಾಗೂ ‘ಅಮೃತ ಪುತ್ರ’ ಮತ್ತು ‘ಜೀವಮಾನ ಸಾಧನೆ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯರು ಹಾಗೂ ಹಿರಿಯ ಸಾಹಿತಿ ಡಾ. ವಿಶಾಲಾಕ್ಷಿ ಕರಡ್ಡಿ, ಕಿರುತೆರೆ ಮತ್ತು ಹಿರಿತೆರೆ ನಟಿ ಚಿತ್ಕಳಾ ಬಿರಾದಾರ, ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿರ್ಮೂಲನ ದಳದ ಅಧ್ಯಕ್ಷ ಡಾ. ಎ.ಎಸ್. ಭದ್ರಶೆಟ್ಟಿ ಇವರನ್ನು ವಿಶೇಷ ಪ್ರಶಸ್ತಿ ಪ್ರದಾನ ನೀಡಿ ಸನ್ಮಾನಿಸಲಾಯಿ.
ಮಾನವ ಸಂಪನ್ಮೂಲ ಕೃಷಿ ಮತ್ತು ಸಂಸ್ಕೃತಿ ಸಂಘ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಸೇಡಂ, ನಿವೃತ್ತ ಕನ್ನಡ ಪ್ರಧ್ಯಾಪಕರು ಹಿರಿಯ ಸಾಹಿತಿ ಡಾ.ಮ.ಗು.ಬಿರಾದಾರ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಮಹಾಂತಯ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಪೆÇ್ರ. ಶಿವರಾಜ ಪಾಟೀಲ, ಕವಿದ್ದನಿ ಸಾಹಿತ್ಯಕ ಹಾಗೂ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷೆ ಕವಿತಾ ಮಳಗಿ, ವಿಜಯಲಕ್ಷ್ಮಿ ಜವಳಗಿ, ಶ್ವೇತಾ ವಾರದ, ರಾಜೇಶ್ವರಿ ರಾಜಕುಮಾರ, ಗುರುಬಾಯಿ ವಸ್ತ್ರದ, ಪ್ರಭಾ ಎಂ. ಪ್ರಧಾನಿ, ಮಹಾದೇವಿ (ಮಾಯಾ) ಎಸ್. ಪಾಟೀಲ ಆಲಗೂಡ ಇದ್ದರು.