ಸ್ಥಳಾಂತರಕ್ಕೆ ಆದೇಶ ಆಗಿತ್ತು. ಮತ್ತೆ ರದ್ದಾಗಿದೆ. ರದ್ದಾಗಿರವ ಆದೇಶ ಪ್ರತಿ ನೀಡಿಲ್ಲ. 2014 ರಿಂದ ರೋಜಾ ಪೊಲೀಸ್ ಠಾಣೆಗೆ ಸ್ಥಳ ನೋಡುತ್ತಿದ್ದೇವೆ ಸಿಗುತ್ತಿಲ್ಲ. ಇಲ್ಲಿ ಬಾಡಿಗೆ ಕೊಟ್ಟು ಸಾಕಾಗಿದೆ. – ಪಿಎಸ್ಐ, ರೋಜಾ ಪೊಲೀಸ್ ಠಾಣೆ ಕಲಬುರಗಿ.
ಕಲಬುರಗಿ: ಅಪರಾಧ ಕೃತ್ಯಗಳ ತಾಣವಾಗಿರುವ ರೋಜಾ ಪೊಲೀಸ್ ಠಾಣೆಯನ್ನು ಜಿಲ್ಲಾ ಪೊಲೀಸ್ ಆಯುಕ್ತರ ಕಚೇರಿಗೆ ಸ್ಥಳಾಂತರಕ್ಕೆ ಆದೇಶಿಸಲಾಗಿದ್ದು, ಸ್ಥಳಾಂತರಕ್ಕೆ ಸ್ಥಳೀಯ ಮಾನವ ಹಕ್ಕುಗಳ ಹೋರಾಟಗಾರರ ಮೊಹಮ್ಮದ್ ರೀಯಾಜ್ ಖತೀಬ್ ವಿರೋಧ ವ್ಯಕ್ತಪಡಿಸಿ ಪೊಲೀಸ್ ಇಲಾಖೆ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.
2014 ಜನವರಿ 08 ರಂದು ರೋಜಾ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಕುಖ್ಯಾತ ರೌಡಿಶೀಟರ್ ಮುನ್ನಾ ಎನ್ ಕೌಂಟರ್ ದಲ್ಲಿ ಪಿಎಸ್ಐ ಮಲ್ಲಿಕಾರ್ಜುನ್ ಬಂಡೆ ಕಳೆದುಕೊಂಡ ಪೊಲೀಸ್ ಇಲಾಖೆಯ ಈ ಆದೇಶ ಜನ ಸಾಮನ್ಯರ ಕೆಂಗಣಿಗೆ ಗುರಿಯಾಗಿದೆ.
ಉತ್ತರ ಮತಕ್ಷೇತ್ರದಲ್ಲಿರುವ ಬಹುತೇಕ ಪೊಲೀಸ್ ಠಾಣೆಗಳಿಗೆ ಹೊಲಿಸಿದರೆ ರೋಜಾ ಪೊಲೀಸ್ ಠಾಣೆಯಲ್ಲಿ ಅತಿಹೆಚ್ಚು ಕ್ರೈಂ ದಂತಹ ಭೀಕರ ಘಟನೆಗಳ ಹಗಲು ರಾತ್ರಿ ನಡೆಯುತ್ತಲೇ ಇರುತ್ತವೆ. ಒಂದು ರೀತಿಯಲ್ಲಿ ಕ್ರೈಂ ಸಾಮ್ರಾಜ್ಯದ ಭದ್ರ ಕೋಟೆ ರೋಜಾ ಪೊಲೀಸ್ ಠಾಣೆ ಎಂದು ಹೇಳಿದರು ತಪ್ಪಾಗಲಾರದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಗಲಲ್ಲಿ ಕೊಲೆಗೆ ಯತ್ನ, ಮಾರಕಾಸ್ತ್ರದಿಂದ ಕೊಚ್ಚಿ ಭೀಕರ ಕೊಲೆ, ದರೋಡೆ, ಜೂಜಾಟ, ಮಟಕಾ, ಗಾಂಜಾ ಸಪ್ಲೈ, ಕೊಲೆ ಬೆದರಿಕೆ ಸೇರಿದಂತೆ ಸುಪಾರಿ ಕಿಲ್ಲರ್, ಲ್ಯಾಂಡ್ ಮಾಫಿಯಾಗಳ ಅಡ್ಡಹಾಸ ಠಾಣೆ ವ್ಯಾಪ್ತಿಯಲ್ಲಿ ಸಾಮಾನ್ಯ. ಪೊಲೀಸ್ ಠಾಣೆ ಸ್ಥಳಾಂತರ ಅದೇಶ ಪುಂಡ ಪುಕರಿಗಳ ತಪ್ಪಸಿಗೆ ಸಿಕ್ಕ ವರ ಎಂದೇ ಹೇಳಬಹುದು.- ರೀಯಾಜ್ ಖತೀಬ್, ಮಾನವ ಹಕ್ಕುಗಳ ಹೋರಾಟಗಾರರ ಕಲಬುರಗಿ.
ಪೊಲೀಸ್ ಇಲಾಖೆ ಕ್ರೈಂ ತಡೆಗೆ ಹಲವು ಮುನ್ನೆಚ್ಚರಿಕೆಗಳು, ನೂತನ ಪೊಲೀಸ್ ಠಾಣೆಗೆ ತೆರೆಯುವ ವಂತಹ ಕೆಲಸ ಮಾಡಬೇಕು ಹೊರೆತು ಪೊಲೀಸ್ ಠಾಣೆ ಸ್ಥಳಾಂತರಿಸುವ ಕೆಲಸ ಸರಿಯಲ್ಲ. ತಕ್ಷಣ ಸ್ಥಳಾಂತರ ಆದೇಶ ವಾಪಸ್ ಪಡೆದು ಪೊಲೀಸ್ ಠಾಣೆಯಲ್ಲಿ ಕ್ರೈಂ ಘಟನೆಗಳು ನಡೆಯದಂತೆ ಜನರಿಗೆ ಪೊಲೀಸ್ ಇಲಾಖೆಯ ಕರ್ತವ್ಯಗಳ ಬಗ್ಗೆ ಜಾಗೃತಿ ಮುಡಿಸುವಂತ ಕೆಲಸ ಇಲಾಖೆ ನಡೆಸಬೇಕೆಂದು ಈ ಮೂಲಕ ಜಿಲ್ಲಾ ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.