ಡಿ.24 ಮತ್ತು 25 ರಂದು ಉದ್ದಿಮೆ ಪರವಾನಿಗೆ ಶಿಬಿರ

0
39

ಕಲಬುರಗಿ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವಂತಹ ವಾಣಿಜ್ಯ ಮಳಿಗೆಗಳು/ ಅಂಗಡಿಗಳ ಪರವಾನಿಗೆದಾರರು ಉದ್ದಿಮೆ ಪರವಾನಿಗೆÀ / ನವೀಕರಣ ಮಾಡಿಕೊಳ್ಳಲು ಡಿಸೆಂಬರ್ 24 ರಂದು ಕಲಬುರಗಿ ನಗರದ ಮುಸ್ಲೀಂ ಕಾಲೋನಿಯ ತಾಜ ನಗರದ ವೈಸ್ ಆಫ್ ಗುಲಬರ್ಗಾ ನ್ಯೂಸ್ ಚಾನೆಲ್ ಕಚೇರಿಯಲ್ಲಿ ಮತ್ತು ಡಿ.25 ರಂದು ಮೋಮಿನಪೂರ ಮಿಜಗೋರಿಯ ಆಲ್ ಸಗೀರ್ ಫಂಕ್ಷನ್ ಹಾಲ್‍ನಲ್ಲಿ ಉದ್ದಿಮೆ ಪರವಾನಿಗೆ ಶಿಬಿರ ಆಯೋಜಿಸಿದೆ.

ಹೊಸದಾಗಿ ಉದ್ದಿಮೆ ಪರವಾನಿಗೆ ಪಡೆಯಲು ಮತ್ತು ನವೀಕರಣಕ್ಕಾಗಿ ಅರ್ಜಿಯೊಂದಿಗೆ ಆಧಾರ ಕಾರ್ಡ ಪ್ರತಿ, ಬಾಡಿಗೆ ಕರಾರು ಪತ್ರ, ಚಾಲ್ತಿ ವರ್ಷದ ಆಸ್ತಿ ಕರ ಪಾವತಿಸಿದ ರಶೀದಿ, 2 ಪಾಸಪೋರ್ಟ ಅಳತೆಯ ಫೋಟೊ ಹಾಗೂ ನಿರಾಕ್ಷೇಪಣಾ ಪತ್ರ/ ಸ್ವಯಂ ಘೋಷಣಾ ಪತ್ರದೊಂದಿಗೆ ಅಂದು ಬೆಳಿಗ್ಗೆ 10 ರಿಂದ ಸಾಯಂಕಾಲ 5 ಗಂಟೆ ಒಳಗಾಗಿ ಆಗಮಿಸಬೇಕು ಎಂದು ಪಾಲಿಕೆಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

Contact Your\'s Advertisement; 9902492681

ಇನ್ನು ಉದ್ದಿಮೆ ಪರವಾನಿಗೆ ಹಾಗೂ ನವೀಕರಣ ಮಾಡಿಕೊಳ್ಳದಿದ್ದಲ್ಲಿ ಅಂತಹವರಿಗೆ ನಿಯಮಾನುಸಾರ ದಂಡ ವಿಧಿಸಲಾಗುವುದೆಂದು ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here