ಸುರಪುರ: ಶಿವಯೋಗ ಮಂದಿರದ ಸ್ಥಾಪಕರಾದ ಹಾನಗಲ್ಲದ ಗುರುಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಸಾರ್ವ ವಿರಾಟಪುರ ವಿರಾಗಿ ಚಲನಚಿತ್ರದ ಪ್ರಚಾರಾರ್ಥವಾಗಿ ಹೋರಟಿರುವ ಶ್ರೀ.ಕುಮಾರೇಶ್ವರರ ರಥಯಾತ್ರೆಯನ್ನು ಸುರಪುರ ತಾಲೂಕಿಗೆ ಭಕ್ತಿಯಿಂದ ಮತ್ತು ವಿಶೀಷ್ಠಪುರ್ಣವಾಗಿ ಸ್ವಾಗತಿಸಿ ಎಂದು ದೇವಾಪುರ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಪೂಜ್ಯ ಶ್ರೀ ಶಿವಮೂರ್ತಿ ಶಿವಾಚಾರ್ಯರು ಹೇಳಿದರು.
ರಥಯಾತ್ರೆಯ ಸ್ವಾಗತದ ಪೂರ್ವಭಾವಿಯಾಗಿ ಸುರಪುರದ ಬಸವೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ ತಾಲೂಕ ವೀರಶೈವ ಸಮಿತಿ, ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಸಭೆಯಲ್ಲಿ ಪೆÇಸ್ಟರ್ ಬಿಡುಗಡೆಗೋಳಿಸಿ ಮಾತನಾಡಿದ ಪೂಜ್ಯರು ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಶಿವಯೋಗ ಮಂದಿರದ ಸ್ಥಾಪಕರಾದ ಪೂಜ್ಯರ ಕೋಡುಗೆ ನಾಡಿಗೆ ಅಪಾರವಾಗಿದ್ದು, ಅವರ ರಥಯಾತ್ರೆ ನಮ್ಮ ಸುರಪುರ ನಗರಕ್ಕೆ ಆಗಮಿಸುತ್ತಿರುವುದು ಸೌಭಾಗ್ಯದ ಸಂಗತಿ ಸಮಾಜದ ಮುಖಂಡರು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಸಲಹೆ ನೀಡಿದರು.
ಮಹಾಸಭೆಯ ತಾಲೂಕ ಅಧ್ಯಕ್ಷ ಮಂಜುನಾಥ ಜಾಲಹಳ್ಳಿ ಮಾತನಾಡಿ, ಸುರಪುರ ತಾಲೂಕಿನ ಎಲ್ಲಾ ಪರಮ ಪೂಜ್ಯರ ಸಾನಿಧ್ಯದಲ್ಲಿ ತಾಲೂಕ ವೀರಶೈವ ಸಮಿತಿಯ ಅಧ್ಯಕ್ಷರಾದ ಡಾ. ಸುರೇಶ ಆರ್.ಸಜ್ಜನ್ ಅವರ ನೇತೃತ್ವದಲ್ಲಿ, 23ರ ಶುಕ್ರವಾರÀ ಸಂಜೆ 5:00 ಗಂಟೆಗೆ ಸುರಪುರ ತಾಲೂಕಿಗೆ ರಥಯಾತ್ರೆ ಪ್ರವೇಶ ಮಾಡುತ್ತಿದ್ದು, ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಭವ್ಯವಾಗಿ ಸ್ವಾಗತಿಸಿಕೊಂಡು ಬಹಿರಂಗ ಸಮಾರಂಭ ಹಾಗೂ ಚಲನಚಿತ್ರವನ್ನು ವಿಕ್ಷಣೆಮಾಡಿಕೊಂಡು ನಂತರ ಸುರಪುರದ ಮುಖ್ಯ ರಸ್ತೆಗಳಲ್ಲಿ ಬೈಕ್ ರ್ಯಾಲಿ ಮೂಲಕ ಕೆಂಭಾವಿ ಪಟ್ಟಣಕ್ಕೆ ಬಿಳ್ಕೊಡೊಣ ಎಂದು ಹೇಳಿದರು.
ಸುರಪುರ ನಿಷ್ಠಿ ಕಡ್ಲೆಪ್ಪನವರ ಮಠದ ಪ್ರಭುಲಿಂಗ ಮಹಾಸ್ವಾಮಿಗಳು, ತಾಲೂಕ ವೀರಶೈವ ಸಮಿತಿ ಉಪಾಧ್ಯಕ್ಷ ಜಿ.ಎಸ್. ಪಾಟೀಲ್, ನಗರಸಭೆಯ ಉಪಾಧ್ಯಕ್ಷ ಮಹೇಶ ಪಾಟೀಲ್ ಸುಗೂರ, ಮಹಾಸಭೆಯ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ, ಪ್ರಮುಖರಾದ ವಿರೇಶ ನಿಷ್ಠಿ ದೇವಶಮುಖ, ಬಸವರಾಜ ಬೂದಿಹಾಳ, ಜಯಲಲೀತಾ ಪಾಟೀಲ್, ಪ್ರದೀಪ ಕದರಾಪುರ, ಸಿದ್ದನಗೌಡ ಹೆಬ್ಬಾಳ, ಸಿದ್ದಲಿಂಗಯ್ಯ ಸ್ವಾಮಿ ಕಡ್ಲೆಪ್ಪಮಠ, ಶಿವರಾಜ ಕಲಿಕೇರಿ, ಜಗದೀಶ ಪಾಟೀಲ್ ಸೂಗುರು, ಮಲ್ಲು ಬಾದ್ಯಾಪುರ, ಚನ್ನಪ್ಪಗೌಡ ದೇವಾಪುರ, ಚಂದ್ರು ಮಡಿವಾಳರ, ಶಿವರುದ್ರ ಹುಳ್ಳಿ, ರವಿ ಹೆಮನೂರು, ಮಂಜುನಾಥ ಸ್ವಾಮಿ ರಂಗಂಪೇಟ, ಪ್ರಕಾಶ ಹೆಮ್ಮಡಗಿ, ಸುನೀಲ್ ಪಂಚಾಂಗಮಠ, ಸೂಗು ಮೋದಿ, ಲಿಂಗರಾಜ ಶಾಬಾದಿ, ಬಸವಾನಂದ ಮುದೊಳ, ಸುಪ್ರಿತ್ ಜಾಕಾ ಸೇರಿದಂತೆ ಇತರರಿದ್ದರು.