ಸೊಳ್ಳೆ ಗಳ ಹಾವಳಿ ನಿಯಂತ್ರಣಕ್ಕೆ ಫಾಗಿಂಗ್‌ ಸಿಂಪರಣೆಗೆ ಒತ್ತಾಯ

0
78

ವಾಡಿ: ಪಟ್ಟಣದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿಯಿದ್ದರೂ ಸೊಳ್ಳೆ ಗಳ ಹಾವಳಿ ನಿಯಂತ್ರಿಸಲು ಪುರಸಭೆ ಫಾಗಿಂಗ್‌ ಸಿಂಪರಣೆ ಕೈಗೊಳ್ಳುತ್ತಿಲ್ಲ ಕೇಳಿದರೆ  ಫಾಗಿಂಗ್‌ ಯಂತ್ರ ಕೆಟ್ಟದೆ ಎನ್ನತ್ತಾರೆ ಎಂದು ಜಿಲ್ಲಾಧಿಕಾರಿ ಗಳಿಗೆ ಬಿಜೆಪಿ ತಾಲ್ಲೂಕ ಉಪಾಧ್ಯಕ್ಷ ವೀರಣ್ಣ ಯಾರಿ ದೊರು ನೀಡಿದ್ದಾರೆ.

ಚರಂಡಿಯಲ್ಲಿ ಕೊಳಚೆ ಶೇಖರಣೆಯಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆ ಆತಂಕವಿದೆ ಚರಂಡಿ ಸ್ವಚ್ಛತೆಗೆ ಮುಂದಾಗಬೇಕು ಹಾಗೂ ಲಕ್ಷಾಂತರ ರೂಪಾಯಿಗಳ ವೆಚ್ಚದ ನೀರು ಶುದ್ಧೀಕರಣ ಘಟಕವಿದ್ದರೂ ಪಟ್ಟಣದ ಜನತೆಗೆ ಅಶುದ್ಧ ನೀರು ಸಿಗುತ್ತಿದೆ ಅದನ್ನು ಸಮರ್ಪಕವಾಗಿ ಬಳಸಿ ವಾಡಿ ಜನತೆಗೆ ಶುದ್ಧ ನೀರು ಪೂರೈಕೆಗೆ ಪುರಸಭೆ ಬದ್ದವಾಗಲಿ,

Contact Your\'s Advertisement; 9902492681

ವಾಡಿ ಜನತೆಗೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕಾಗಿ ಒದಗಿಸುವುದರ ಜೊತೆಗೆ ಅವರ ಆರೋಗ್ಯ ಕಾಪಾಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಗಳಿಗೆ ಮೇಲ್ ಮಾಡಿದ ಪ್ರತಿಯನ್ನು ಪುರಸಭೆಯ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ ಹಾರಕೂಡ ಅವರಿಗೆ  ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕ ಉಪಾಧ್ಯಕ್ಷ ವೀರಣ್ಣ ಯಾರಿ,ವಾಡಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರಾವುಲ ಸಿಂಧಗಿ,ಮಾಜಿ ಪುರಸಭೆ ಸದಸ್ಯರಾದ ಹರಿ ಗಲಾಂಡೆ,ರವಿ ನಾಯಕ,ಮುಖಂಡರಾದ ರಶಿದ್ ಶೇಠ, ದೌಲತರಾವ ಚಿತ್ತಾಪುರಕರ್,ಅರ್ಜುನ ದಹಿಹಂಡೆ,ಸಿದ್ದೇಶ್ವರ ಚೊಪಡೆ,ವಿಶ್ವನಾಥ ನಾಯಕ,ದತ್ತಾತ್ರೇಯ ಗೌಡಗಾಂವ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here