ಅಂಗಬೇಸಾಯ ಲಿಂಗಬೇಸಾಯ ಎರಡೂ ಒಂದೇ

0
28

ಕಲಬುರಗಿ: 12ನೇ ಶತಮಾನದ ಒಕ್ಕಲಿಗ ಮುದ್ದಣ್ಣನು ಒಬ್ಬ ಅನುಭಾವಿ ಶರಣನಾಗಿರುವುದರ ಜೊತೆಗೆ ಬೇಸಾಯದ ಕಾಯಕ ಮಾಡುತ್ತಲೇ ದಾಸೋಹಿಯೂ ಆಗಿದ್ದನು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ ತಿಳಿಸಿದರು.

ಎಳ್ಳಾಮವಾಸ್ಯೆ ನಿಮಿತ್ತ ಕಲಬುರಗಿ ಬಸವ ಕೇಂದ್ರದ ಶರಣ ಸೋಮಣ್ಣ ನಡಕಟ್ಟಿಯವರ ಹೊಲದಲ್ಲಿ ಗುರುವಾರ ಆಯೋಜಿಸಿದ್ದ ಒಕ್ಕಲಿಗ ಮುದ್ದಣ್ಣನ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಕ್ಕಲುತನ ವೃತ್ತಿಯ ಪರಿಭಾಷೆಯನ್ನು ಉಪಯೋಗಿಸಿಕೊಂಡು ತನ್ನ ವಚನಗಳನ್ನು ರಚಿಸಿರುವ ಮುದ್ದಣ್ಣನು, ಅಂಗ, ಲಿಂಗ, ದಾಸೋಹ, ಕಾಯಕ ಪ್ರವೃತ್ತಿಗಳನ್ನು ಆಧ್ಯಾತ್ಮಿಕ ವಿಚಾರಗಳನ್ನಾಗಿ ಬೆಸೆದು ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚಿಸಿದ್ದಾನೆÉ ಎಂದು ಅವರು ಹೇಳಿದರು.

Contact Your\'s Advertisement; 9902492681

ಮುಖ್ಯ ಅತಿಥಿಯಾಗಿದ್ದ ನಿವೃತ್ತ ಇಂಜಿನಿಯರ್ ಎಂ.ಎಂ. ಕರ್ಪೂರ ಮಾತನಾಡಿ, “ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ ವಿಶ್ವಾಸವೆಂಬ ಭತ್ತ ಉಂಡು ಸುಖಿಯಾಗಿರಬೇಕೆಂದ ಕಾಮಭೀಮ ಜೀವಧನದೊಡೆಯ” ಎನ್ನುವ ಇವರ ವಚನವು ಸುಖ ಸಂಸಾರದ ಸೂತ್ರವನ್ನು ಹೇಳಿಕೊಡುತ್ತದೆ ಎಂದು ತಿಳಿಸಿದರು.

ಧಾರವಾಡದ ಸಿದ್ಧರಾಮಣ್ಣ ನಡಕಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು. ಬಸವ ಕೇಂದ್ರದ ಕೋಶಾಧ್ಯಕ್ಷ ಸೋಮಣ್ಣ ನಡಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಲ್ಲಣ್ಣ ನಾಗರಾಳ ನಿರೂಪಿಸಿದರು. ವಿಶ್ವನಾಥ ಡೋಣೂರ ಸ್ವಗತಿಸಿದರು. ಗಿರಿಜಾ ಕರ್ಪೂರ ಪ್ರಾರ್ಥನೆಗೀತೆ ಹಾಡಿದರು. ಶರಣಬಸವ ಕಲ್ಲಾ ವಂದಿಸಿದರು.

ಇದೇ ವೇಳೆಯಲ್ಲಿ  ಶಹಾಬಾದ ಬಸವ ಸಮಿತಿ ವತಿಯಿಂದ ಭಜನಾ ಪದಗಳು, ಜೇವರ್ಗಿಯ ನೀಲಾಂಬಿಕಾ ಬಳಗದವರು ಹಾಗೂ ಸಂಗೀತಾ ರೇವೂರ, ಪ್ರಮಥ, ಪ್ರಣವ ಸತ್ಯಂಪೇಟೆ ಅವರಿಂದ ಸಂಗೀತ ಕಾರ್ಯಕ್ರಮಗಳು ನಡೆದವು.

ರವೀಂದ್ರ ಶಬಾದಿ, ಅನಸೂಯಾ ನಡಕಟ್ಟಿ, ಮಹಾನಂದ ಹುಗ್ಗಿ, ವೀರಭದ್ರ ಸಿಂಪಿ, ಶಿವನಗೌಡ ಹಂಗರಗಿ, ಶಿವಶಂಕರ ಹರಸೂರ, ಅಮೃತ ಮಾನಕರ, ಡಿ.ಎಸ್. ಬಿರಾದಾರ, ನೀಲಕಂಠ ಮುದಗೋಳಕರ್, ಸತೀಶ ಸಜ್ಜನ್ ಇತರರಿದ್ದರು.

ಬಸವಾದಿ ಶರಣರು  ಸಮಾಜೋದ್ಧಾರ್ಮಿಕ ಸುಧಾರಣೆಯ ಜೊತೆಗೆ ಕೃಷಿಗೂ ಬಹಳ ಮಹತ್ವ ಕೊಟ್ಟಿದ್ದರು. ಕೃಷಿ ಕಾಯಕವೇ ಅವರ ಬದುಕಿನ ಮೂಲಮಂತ್ರವಾಗಿತ್ತು. ಕಾಯಕದಿಂದಲೇ ಮುಕ್ತಿ ಎಂದು ಹೇಳಿದ ಶರಣರು ಸಕಲ ಜೀವತ್ಮರಿಗೂ ಲೇಸು ಬಯಸಿದ್ದರು. ಬಸವ ಮಾರ್ಗ ಬೇರೆÉ ಅಲ್ಲ. ಬೇಸಾಯ ಮಾರ್ಗ ಬೇರೆ ಅಲ್ಲ ಎಂದರಿತಿದ್ದರು ಅವರು.  -ಸೋಮಣ್ಣ ನಡಕಟ್ಟಿ, ಕೋಶಾಧ್ಯಕ್ಷರು ಬಸವ ಕೇಂದ್ರ, ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here