ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ  “ಕ್ರಿಸ್ಮಸ್ ಸೌಹಾರ್ದ ಕೂಟ”

0
40

ಕಲಬುರಗಿ: ಗುಲ್ಬರ್ಗಾ ಡೈಯೋಸನ್ ಪ್ರಿಸನ್ ಮಿನಿಸ್ಟರಿ, ಕಲಬುರಗಿ ಹಾಗೂ ಕೇಂದ್ರ ಕಾರಾಗೃಹ ಕಲಬುರಗಿರವರ ಸಂಯುಕ್ತಾಶ್ರಯದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ “ಕ್ರಿಸ್ಮಸ್ ಸೌಹಾರ್ದ ಕೂಟ” ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಪೂಜ್ಯ ಧರ್ಮಾಧ್ಯಕ್ಷರು ಮೈಕಲ್ ಮಿರಾಂದರವರು ಶಾಂತಿಯ ಪ್ರತಿ ರೂಪವಾದ ಪ್ರಜ್ವಲ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಈ ಲೋಕದಲ್ಲಿ ಎಲ್ಲರೂ ತಾತ್ಕಾಲಿಕ, ಯಾರೂ ಶಾಶ್ವತವಲ್ಲ, ಹಾಗಾಗಿ ಎಲ್ಲಕ್ಕಿಂತ ಮಿಗಿಲಾಗಿ ಬಂಧನವೆಂದರೆ ದುರಾಸೆಯಿಂದ ಮುಕ್ತಿಯನ್ನು ಪಡೆಯುವುದು. ಮನುಕುಲದ ಉದ್ಧಾರಕ್ಕಾಗಿ ಹುಟ್ಟಿಬಂದ ಏಸು ಪ್ರತಿಯೊಬ್ಬರಲ್ಲಿ ಪಶ್ಚಾತಾಪ ಭಾವನೆ ಬಂದಾಗ ಮಾತ್ರ ನಿಜವಾದ ಮನಸ್ಸಿನ ಬದಲಾವಣೆ ಆಗುತ್ತದೆ. ಇದಕ್ಕಾಗಿ ತಾವುಗಳು ನಿತ್ಯ ಪ್ರಾರ್ಥನೆ, ಧ್ಯಾನವನ್ನು ಮಾಡಿ ಮನಃ ಪರಿವರ್ತನೆಗೊಂಡು ಬಿಡುಗಡೆ ಆಗಬೇಕೆಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದಬಿ.ಎಮ್.ಕೊಟ್ರೇಶ್, ಅಧೀಕ್ಷಕರು, ಕೇಂದ್ರ ಕಾರಾಗೃಹ ಕಲಬುರಗಿರವರು ಮಾತನಾಡುತ್ತಾ, ಮೊದಲಿಗೆ ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯವನ್ನು ಕೋರಿದರು. ನಾವು ಕಾರಾಗೃಹದಲ್ಲಿರುವ ಬಂದಿ ನಿವಾಸಿಗಳ ಮನಃ ಪರಿವರ್ತನೆಗಾಗಿ ಹಲವಾರು ಕಾರ್ಯಕ್ರಮಗಳಿಗೆ ಮುಕ್ತವಾದ ಅವಕಾಶವನ್ನು ನೀಡಲಾಗುತ್ತದೆ. ಏಕೆಂದರೆ ಬಂದಿ ನಿವಾಸಿಗಳು ತಮ್ಮ ಮನಃ ಪರಿವರ್ತನೆಗೊಳಿಸಿಕೊಂಡು ಇಲ್ಲಿರುವ ತನಕ ಒಳ್ಳೆಯ ನಡತೆಯನ್ನು ಬೆಳೆಸಿಕೊಂಡು ಕಾರಾಗೃಹದಲ್ಲಿರುವ ವಿವಿಧ ಕೌಶಲ್ಯ ಯೋಜನೆಗಳಲ್ಲಿ ಭಾಗವಹಿಸಿ ಕೌಶಲ್ಯತೆಗಳನ್ನು ಕಲಿತು ಉತ್ತಮ ವ್ಯಕ್ತಿಯಾಗಿ ಮನಃ ಪರಿವರ್ತನೆ ಮಾಡಿಕೊಂಡವರಿಗೆ ನಾವುಗಳು ಬಿಡುಗಡೆಗೆ ಶಿಫಾರಸ್ಸುಗಳನ್ನು ಮಾಡಲಾಗುತ್ತದೆ. ಅದು ಅಲ್ಲದೇ ಪ್ರತಿ ದಿನ ಪ್ರಾರ್ಥನೆ ಧ್ಯಾನವನ್ನು ಮಾಡಲಿಕ್ಕೆ ಬೇಕಾಗುವ ಸ್ಥಳಾವಕಾಶವನ್ನು ನಾವುಗಳು ನೀಡಲಿಕ್ಕೆ ಸದಾ ಸಿದ್ಧ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿಹುಸಾನಿ ಪೀರ್, ಸಹಾಯಕ ಅಧಿಕ್ಷಕರು, ಕೇಂದ್ರ ಕಾರಾಗೃಹ ಕಲಬುರಗಿ, ವೈದ್ಯಾಧಿಕಾರಿಗಳಾದ ಡಾ. ರವೀಂದ್ರ ಬನ್ನೇರಾ, ಡಾ. ಬಸವರಾಜ ಕಿರಣಗಿ, ಕೇಂದ್ರ ಕಾರಾಗೃಹ ಕಲಬುರಗಿ,ನಾಗರಾಜ ಮುಲಗೆ, ಶಿಕ್ಷಕರು, ಜೈಲರ್‍ಗಳಾದಅಶೊಕ ಹೊಸಮನಿ,ಅರ್ಜುಸಿಂಗ್ ಚೌವಾಣ ಹಾಗೂ ಗುಲ್ಬರ್ಗಾ ಡೈಯೋಸನ್ ಪ್ರಿಸನ್ ಮಿನಿಸ್ಟರಿ, ಕಲಬುರಗಿಯ ಸಿಸ್ಟರ್ಸ್ ಮತ್ತು ಕಾರಾಗೃಹದ ಇತರೇ ಎಲ್ಲಾ ಅಧಿಕಾರಿ /ಸಿಬ್ಬಂದಿವರ್ಗದವರು ಭಾಗವಹಿಸಿದ್ದರು. ಪ್ರಾರ್ಥನಾ ಗೀತೆಯನ್ನು ಡೇವಿಡ್ ಫಾದರ-ರವರು ನಡೆಸಿಕೊಟ್ಟರು. ಸ್ವಾಗತ ಮತ್ತು ನಿರೂಪಣೆಯನ್ನು ಶ್ರಿ ಆನಂದರಾಜ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಎಲ್ಲಾ ಬಂದಿಗಳಿಗೆ ಸಿಹಿ ತಿಂಡಿಗಳು ಮತ್ತು ಕೇಕ್‍ಗಳನ್ನು ವಿತರಿಸಲಾಯಿತು. ವಂದನಾಪರ್ಣೆಯನ್ನು ಸಿಸ್ಟರ್ ವಸಂತಾ ನಡೆಸಿಕೊಟ್ಟರು. ಅಂತಿಮವಾಗಿ ಸಾಂತಾ ಕ್ಲೋಸ್ ನಿಂದ ಕ್ರಿಸ್ಮಸ್ ಶುಭಾಶಯಗಳು ತಿಳಿಸಲಾಯಿತು. ಕೊನೆಯಲ್ಲಿ ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here