ಕಲಬುರಗಿ: ಸಾಮಾಜಿಕ ನ್ಯಾಯಕ್ಕಾಗಿ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿ ಡಿಸೇಂಬರ್ 18 ರಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಅನಿರ್ದಿಷ್ಟ ಧರಣಿ ಹಮ್ಮಿಕೊಂಡಿದ್ದು ಇಲ್ಲಿವರೆಗೆ ಸುಮಾರು ಏಳು ದಿವಸ ವಾಯಿತು ಇಲ್ಲಿವರೆಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಚರ್ಚೆ ಆಗದೆ ಇರುವುದರಿಂದ ಶನಿವಾರ ದಶರಥ ಕಲಗುರ್ತಿ ರವರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರ ಹಮ್ಮಿಕೊಳ್ಳಲಾಗಿದೆ.
ಸೋಮವಾರ ನಡೆಯುವ ಅಧಿವೇಶನದಲ್ಲಿ ಚರ್ಚೆ ಮಾಡಿ ಅದರಲ್ಲಿರುವ ಸಾಧಕ ಪಾದಗಳನ್ನು ಪರಿಶೀಲನೆ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಕಳಿಸುವಂತೆ ಒತ್ತಾಯಿಸಲಾಯಿತು ಒಂದು ವೇಳೆ ಬೆಳಗಾವಿ ಅಧಿವೇಶದಲ್ಲಿ ಚರ್ಚೆ ಆಗದಿದ್ದರೆ ಡಿಸೆಂಬರ್ 27ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೀದಗಿಳಿದು ರಸ್ತೆ ತಡೆ ಮಾಡುವುದರ ಮುಖಾಂತರ ಮಾಡು ಇಲ್ಲ ಮಡಿ ಎಂಬ ಹೋರಾಟಕ್ಕೆ ಇಳಿಯ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.
ಉಪವಾಸ ಸತ್ಯಾಗ್ರ ಕುಳಿತುಕೊಂಡ ಮುಖಂಡರಾದ ದಶರಥ ಕಲಗುರ್ತಿ, ಚಂದ್ರಕಾಂತ್ ನಾಟಿಕರ್, ರಾಜು ಎಸ್ ಕಟ್ಟಿಮನಿ, ಮುಖಂಡರಾದ ರಮೇಶ್ ವಾಡೆಕರ್, ಸುದರ್ಶನ್ ನಂಬಿ, ಪ್ರಕಾಶ್ ಮಾಳೆಗೆ, ಧರ್ಮಣ್ಣ ನಾಟಕರ್, ರಾಜು ಹದನೂರ್, ಹನುಮಂತನ ಅಂಕಲಗಿ, ಲೋಕೇಶ್ ಬಾಜಿ, ನಾಗಮ್ಮ ತಾರ್ಪಲ್ ಹಾಗೂ ಇನ್ನೂ ಅನೇಕ ಮುಖಂಡರು ಭಾಗವಹಿಸಿದ್ದರು.