ಶಹಾಬಾದ: ನಗರದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಸ್ತೆ ಕಾಮಗಾರಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಗರಸಭೆಯ ಸದಸ್ಯ ನಾಗಾರಾಜ ಕರಣಿಕ್ ದೂರಿದ್ದಾರೆ.
ಈಗಾಗಲೇ ಒಂದು ತಿಂಗಳಿನಿಂದ ಜೇವರ್ಗಿ ವೃತ್ತದಿಂದ ರಸ್ತೆಯ ಒಂದು ಬದಿ ಅಗೆಯಲಾಗುತ್ತಿದೆ.ಆದರೆ ಇಲ್ಲಿಯವರೆಗೆ ಯಾವ ಯೋಜನೆ, ಅನುದಾನವೇಷ್ಟು ಹಾಗೂ ಕ್ರೀಯಾಯೋಜನೆಯ ಪ್ರತಿ ನೀಡುವಂತೆ ಕೇಳಿದರೂ ಯಾವುದಕ್ಕೂ ಉತ್ತರ ನೀಡುತ್ತಿಲ್ಲ. ಒಂದು ರಸ್ತೆ ಕಾಮಗಾರಿ ಪ್ರಾರಂಭವಾಗಬೇಕಾದರೆ ಕ್ರೀಯಾಯೋಜನೆ, ಟೆಂಡರ್ ಕರೆಯುವುದು, ಗುತ್ತಿಗೆದಾರ ಯಾರು, ಯೋಜನೆ ಯಾವುದು, ಅನುದಾನ ಎಷ್ಟು ಎಂಬುದರ ಸಂಪೂರ್ಣ ನಾಮಫಲಕ ಹಾಕಬೇಕು.ಆದರೆ ಇದ್ಯಾವುದು ಮಾಡದೇ ಕಾಮಗಾರಿ ಪ್ರಾರಂಭಿಸಲಾಗಿದೆ.
ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಜೆಇ ಅವರಿಗೆ ಕೇಳಿದರೆ ನಾನು ಹೊಸದಾಗಿ ಬಂದಿದ್ದೆನೆ ನನಗೇನು ಗೊತ್ತಿಲ್ಲ. ಗುತ್ತಿಗೆದಾರರ ಹೆಸರು ಕೇಳಿದರೂ ಹೇಳುತ್ತಿಲ್ಲ.ನಮ್ಮ ಮೇಲಾಧಿಕಾರಿಗಳಿಗೆ ಕೇಳಿ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಲೋಕೋಪಯೋಗಿ ಇಲಾಖೆಯ ಎಇ ಅವರಿಗೆ ಕರೆ ಮಾಡಿದರೇ ಸ್ವೀಕರಿಸುವುದಿಲ್ಲ. ಈಗಾಗಲೇ ನಗರೋತ್ಥಾನ 3 ನೇ ಹಂತದಲ್ಲಿ ರಸ್ತೆ ಕಾಮಗಾರಿಗೆ ಸುಮಾರು 5 ಕೋಟಿ ಅನುದಾನ ಒದಗಿಸಲಾಗಿತ್ತು.ಆದರೆ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಳಪೆ ಮಟ್ಟದ ಕಾಮಗಾರಿಯಿಂದ ರಸ್ತೆ ನಿರ್ಮಾಣ ಮಗಿಯುವ ಮುಂಚೆಯೇ ಸಂಪರ್ಣ ಹಾಳಾಗಿ ಹೋಗಿದೆ.
ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಈ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸರಕಾರದ ಆದೇಶವನ್ನು ಗಾಳಿಗೆ ತೂರಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.ಅಲ್ಲದೇ ನಗರಸಭೆಯ ಒಳ್ಳಪಟ್ಟ ರಸ್ತೆಯನ್ನು ಮೊದಲು ಲೋಕೋಪಯೋಗಿ ಇಲಾಖೆಯ ಹಸ್ತಾಂತರ ಮಾಡಿಕೊಳ್ಳಬೇಕು.ಅದನ್ನು ಮಾಡಿಕೊಳ್ಳಬೇಕು.ಅದ್ಯಾವುದೇ ಮಾಡದೇ ಇರುವ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ನಗರಸಭೆಯ ವಾರ್ಡ ನಂ.19ರ ವ್ಯಾಪ್ತಿಗೆ ಬರುವ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಸ್ತೆ ಕಾಮಗಾರಿ ಕಾನೂನು ಬಾಹಿರವಾಗಿ ನಡೆಯುತ್ತಿದೆ. ಲೋಕೋಪಯೋಗಿ ಇಲಾಖೆಯ ಎಇಇ ಅವರಿಗೆ ಈ ಬಗ್ಗೆ ಕೇಳಿದರೆ ಫೋನ್ ಕಟ್ ಮಾಡುತ್ತಾರೆ. ಇಇ ಅವರನ್ನು ಕೇಳಿದರೆ ನನ್ನ ಗಮನಕ್ಕಿಲ್ಲ.ಕೇಳಿ ಹೇಳುತ್ತೆನೆ ಎಂದು ಹೇಳಿದವರು ಇಲ್ಲಿಯವರೆಗೆ ಹೇಳಿಲ್ಲ.ಅಲ್ಲದೇ ಫೋನ್ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಕಾಮಗಾರಿ ಸ್ಥಳದಲ್ಲಿ ಎಇ ಬೇಟಿ ಮಾಡಿ ಯಾವ ಯೋಜನೆ ಎಂದು ಕೇಳಿದರೂ ಹೇಳುತ್ತಿಲ್ಲ.ಕೇವಲ ದೊಡ್ಡವರು ಹೇಳಿದ್ದಾರೆ ಎಂದು ಹೇಳುತ್ತಿದ್ದಾರೆ ಹೊರತು ದೊಡ್ಡವರು ಹೆಸರು ಬಾಯಿ ಬಿಡುತ್ತಿಲ್ಲ.ಜನರ ತೆರಿಗೆ ಹಣವನ್ನು ಬೇಕಾಬಿಟ್ಟಿ ಪೋಲು ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸುತ್ತೆನೆ.