ಪ್ರತಿಭೆ ಅನಾವರಣಕ್ಕೆ ಪ್ರತಿಭಾವಂತರಿಗೆ ಪ್ರೋತ್ಸಾಹ ಅಗತ್ಯ

0
18

ಸುರಪುರ: ಸ್ಪರ್ದಾತ್ಮಕ ಯುಗದಲ್ಲಿರುವ ನಾವು ಮತ್ತು ಇಂದಿನ ಮಕ್ಕಳು ಅತ್ಯಂತ ಪ್ರತಿಭಾವಂತರಾಗಿದ್ದು, ವೇದಿಕೆ, ಅವಕಾಶ, ಗುರುತಿಸುವಿಕೆ ಹಾಗೂ ಸಮರ್ಪಕ ಸಂಘಟನೆಗಳ ಕೋರತೆಯಿಂದ ಪ್ರತಿಭೆ ಅನಾವರಣವಾಗುತ್ತಿಲ್ಲ, ಅಂತಹ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ ಹೇಳಿದರು.

ಸಮೀಪದ ಕನ್ನೆಳ್ಳಿ ಗ್ರಾಮದಲ್ಲಿ ಮಕ್ಕಳ ಕಲರವ ಫೌಂಡೆಶನ್ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ಪರ್ದಾತ್ಮಕ ಯುಗದಲ್ಲಿರುವ ನಮ್ಮ ಮಕ್ಕಳು ಅತ್ಯಂತ ಹೆಚ್ಚು ಪ್ರತಿಭಾವಂತರಿದ್ದು, ಅವರಿಗೆ ಬರೀ ಪಠ್ಯ ಪುಸ್ತಕದ ಲೋಕಕ್ಕೆ ಸಿಮಿತಗೊಳಿಸದೆ ಅವರಲ್ಲಿರುವ ಪ್ರತಿಭೆ ಗುರುತಿಸಿ ಸಂಗೀತ, ಸಾಹಿತ್ಯ, ಭರತನಾಟ್ಯ, ಚಿತ್ರಕಲೆ, ಕ್ರೀಡೆ ಹಾಗೂ ಬಹುಮುಖವಾಗಿ ಅವರನ್ನು ಪೆÇ್ರೀತ್ಸಾಹಿಸಿ ಬೇಳಿಸಿದಾಗಮಾತ್ರ ನಮ್ಮ ಮಕ್ಕಳು ಸ್ಪರ್ದಾತ್ಮಕವಾಗಿ ಬೇಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ವಿಶೇಷ ಉಪನ್ಯಾಸ ನೀಡಿದ ಶಿಶು ಸಾಹಿತಿ ಹೆಚ್. ರಾಠೋಡ್ ಮಾತನಾಡಿ, ಮಕ್ಕಳ ಸಾಹಿತ್ಯ ಪರಂಪರೆಯಲ್ಲಿ ಉತ್ತರ ಕರ್ನಾಟಕ ಭಾಗದ ಅನೇಕ ಜನ ಹಿರಿಯ ಸಾಹಿತಿಗಳು ಕಾರ್ಯನಿರ್ವಹಿಸಿದ್ದು, ಸಂಗು ಬಿರಾದಾರ, ಜಂಬುನಾಥ ಕಂಚಾಣೆ, ಫ.ಗು ಸಿದ್ದಾಪುರ, ಎ.ಕೆ.ರಾಮೇಶ್ವರ, ಚಂದ್ರಕಾಂತ ಕರದಳ್ಳಿ ಸೇರಿದಂತೆ ಅನೇಕರು ಶಿಶು ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು, ಇಂದಿನ ವಿದ್ಯಾರ್ಥಿಗಳಲ್ಲಿ ಕಾವ್ಯ, ಕಥೆ, ಕವನ ಕಟ್ಟುವ ಶಕ್ತಿ ಇದ್ದು, ಸರಿಯಾದ ಮಾರ್ಗದರ್ಶನದ ಕೋರತೆಯಿಂದ ಅವಕಾಶ ವಂಚಿತರಾಗಿದ್ದಾರೆ. ಮಕ್ಕಳಿಗಾಗಿಯೇ ಕವಿಗೋಷ್ಠಿ, ವಿಚಾರ ಸಂಕೀರಣ, ಕಮ್ಮಟ, ಕಾರ್ಯಾಗಾರ, ಮೇಲಿಂದ ಮೇಲೆ ಆಯೋಜಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.

ಸಂಘಟಕ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ಇಂದು ಅನೇಕ ಕನ್ನಡದ ವಾಹಿನಿಗಳೂ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳು ರೂಪಿಸುತ್ತಿದ್ದು, ಅದರೊಂದಿಗೆ ಸರಕಾರ ಕೂಡ ಬಾಲವಿಕಾಸ ಅಕಾಡೆಮಿ ಮೂಲಕ ಈ ರೀತಿಯಾದ ಕಾರ್ಯಕ್ರಮಗಳ ಸಂಘಟನೆಗೆ ವಿಶೇಷ ಸಹಕಾರ ನೀಡುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಕಾರ್ಯಕ್ರಮದ ವಿಶೇಷ ಆವ್ಹಾನಿತರಾಗಿ ಪಾಲ್ಗೊಂಡು ಸುರಪುರ ತಾಲೂಕ ಕ.ಸಾ.ಪ ಅಧ್ಯಕ್ಷ ಶರಣಬಸಪ್ಪ ಯಾಳವಾರ ಮಾತನಾಡಿದರು. ಕೆಂಭಾವಿ ಹಿರೇಮಠದ ಪೂಜ್ಯ ಚನ್ನಬಸವ ಶಿವಾಚಾರ್ಯರು ಹಾಗೂ ಕನ್ನೆಳ್ಳಿ ಹಿರೇಮಠದ ಬೂದಯ್ಯ ಸ್ವಾಮಿಗಳು ಸಾನಿದ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನೆಳ್ಳಿ ಕ್ಲಸ್ಟರ್ ಸಿ.ಆರ್.ಸಿ ಹಣಮಂತ ಪಲ್ಯದ್, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿಧ ಶಿವಪ್ಪ ಹೆಬ್ಬಾಳ, ವೀರಶೈವ ಮಹಾಸಭಾ ತಾಲೂಕ ಉಪಾಧ್ಯಕ್ಷ ಸಿದ್ದನಗೌಡ ಹೆಬ್ಬಾಳ, ಶ್ರೀಗುರು ಸೇವಾ ಸಂಸ್ಥೆಯ ಅಧ್ಯಕ್ಷ ಮಲ್ಲು ಬಾದ್ಯಾಪುರ, ಖಾಸ್ಗÀತೇಶ್ವರ ನೃತ್ಯ ಸಂಸ್ಥೆಯ ಮುಖ್ಯಸ್ತ ಅನೀಲ ಕುಮಾರ ಕಟ್ಟಿಮನಿ, ಶಾಲೆಯ ಹಿರಿಯ ಶಿಕ್ಷಕ ಮಲ್ಲಿಕಾರ್ಜುನ ವೇದಿಕೆಮೇಲಿದ್ದರು. ಇತ್ತಿಚಿಗೆ ಮೂಡಬಿದರೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ನಡೆದ ಅಂತರಾಷ್ಟ್ರೀಯ ಜಾಂಬುರಿಯಲ್ಲಿ ಭಾಗವಹಿಸಿದ್ದ ಕನ್ನೆಳ್ಳಿ ಶಾಲಾ ಮಕ್ಕಳಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಮಕ್ಕಳಿಂದ ಜನಪದ ನೃತ್ಯ, ಭರತನಾಟ್ಯ, ಸಮೂಹಗಾಯನ, ಭಾವಗೀತೆ, ಭಕ್ತಿಗೀತೆ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ ಸೇರಿದಂತೆ 30 ಕ್ಕು ಹೆಚ್ಚು ಮಕ್ಕಳ ತಂಡಗಳು ನೀಡಿದ ಪ್ರದರ್ಶನ ಪ್ರೇಕ್ಷಕರ ಗಮನ ಸೇಳೆಯಿತು. ಕಾರ್ಯಕ್ರಮವನ್ನು ಹಣಮಂತ್ರಯ ದೇವತ್ಕಲ್ ನಿರೂಪಿಸಿದರು, ಶಿಕ್ಷಕ ಈಶ್ವರ ಸ್ವಾಗತಿಸಿದರು, ಮೌನೇಶ ಐನಾಪೂರ ಪರಿಚಯಿಸಿದರು, ಶಿಕ್ಷಕಿ ಶರಣಮ್ಮ ಪ್ರಾರ್ಥಿಸಿದರು, ಸಿದ್ದಪ್ರಸಾದ ಪಾಟೀಲ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here