ಸರ್ವೇ ಇಲಾಖೆ ಅಧಿಕಾರಿಗಳ ಅಮಾನತ್ತಿಗೆ ಆಗ್ರಹಿಸಿ ಡಿಎಸ್‍ಎಸ್ ಧರಣಿ

0
11

ಸುರಪುರ:ನಗರದ ಹಸನಾಪುರದಲ್ಲಿನ ಸರ್ವೇ ನಂಬರ್ 44/4 ಜಮೀನು ಸರ್ವೇ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮುಖಂಡರು ನಗರದ ತಹಸೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ ಮಾತನಾಡಿ,ಹಸನಾಪುರದ ಸರ್ವೇ ನಂಬರ್ 44/4ರ ಜಮೀನಲ್ಲಿನ 15 ಗುಂಟೆ ಜಮೀನು ಮುಜಾಫರ್ ಅಹ್ಮದ್ ಎನ್ನುವವರಿಗೆ ಸೇರಿದ್ದಾಗಿದ್ದು,ಇದನ್ನು ಸರ್ವೇ ಮಾಡಿಕೊಡುವಂತೆ ಮನವಿ ಸಲ್ಲಿಸಿದರು ಇದುವರೆಗೆ ಅಧಿಕಾರಿಗಳು ಮುಜಾಫರ್ ಅಹ್ಮದ್ ಅವರ ಎದುರಾಳಿಗಳಿಂದ ಲಂಚ ಪಡೆದು ಸರ್ವೇ ಮಾಡಿಕೊಡುತ್ತಿಲ್ಲವೆಂದು ಆರೋಪಿಸಿ ಸರ್ವೇ ಇಲಾಖೆಯ ಎ.ಡಿ ಮತ್ತು ಇತರೆ ಸಂಬಂಧಿಸಿದ ಅಧಿಕಾರಿಗಳನ್ನು ಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ನಂತರ ಧರಣಿ ಸ್ಥಳಕ್ಕೆ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಆಗಮಿಸಿ ಮನವಿಯನ್ನು ಆಲಿಸಿ ಈ ಪ್ರಕರಣ ಭೂ ಮಾಪನ ಇಲಾಖೆಗೆ ಬರಲಿದ್ದು ತಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳು ಮೂಲಕ ಭೂ ಮಾಪನ ಇಲಾಖೆ ಕಮಿಷನರ್ ಅವರಿಗೆ ರವಾನಿಸಲಾಗುವುದು ಎನ್ನುವ ಭರವಸೆ ನೀಡಿದ ನಂತೆ ಮನವಿಯನ್ನು ಸಲ್ಲಿಸಿ ಧರಣಿ ನಿಲ್ಲಿಸಲಾಯಿತು.

ಧರಣಿಯಲ್ಲಿ ಮುಖಂಡರಾದ ತಿಪ್ಪಣ್ಣ ಶೆಳ್ಳಗಿ,ಶೇಖರ ಮಂಗಳೂರು,ಖಾಜಾ ಅಜ್ಮೀರ್,ಭೀಮರಾಯ ಮಂಗಳೂರು,ಮಲ್ಲಿಕಾರ್ಜುನ ಭಜಂತ್ರಿ,ಗುಲಾಂ ನಬಿ ಮಕ್ತಾಪುರ,ಅಬ್ದುಲ್ ಅಲೀಂ,ಶರ್ಮುದ್ದಿನ್ ಖುರೇಶಿ,ಮಹ್ಮದ್ ಅಕ್ಬರ್,ಮಹ್ಮದ್ ಅಜರುದ್ದಿನ್,ರಾಜು ಬಡಿಗೇರ,ಗುರಪ್ಪ ಮಾವಿನಮಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here