ದುಡಿಯುವ ಜನ ಒಂದಾದರೆ ಕೋಮುವಾದಿ ಬಂಡವಾಳಿಗರ ಪಕ್ಷ ಅಧಿಕಾರದಲ್ಲಿರಲು ಸಾದ್ಯವಿಲ್ಲ

0
65

ಕಲಬುರಗಿ: ದುಡಿಯುವ ಜನ ಒಂದಾದರೆ ಭಾಜಪ ದಂತಹ ಕೋಮುವಾದಿ ಮತ್ತು ಬಂಡವಾಳಿಗರ ಪರವಾದ ಪಕ್ಷ ಒಂದು ಕ್ಷಣ ಅಧಿಕಾರದಲ್ಲಿರಲು ಸಾದ್ಯವಿಲ್ಲ, ಆದರೆ ಅವರನ್ನು ಒಂದಾಗದಂತೆ ಜಾತಿ, ಧರ್ಮಗಳ ಅಡ್ಡಗೋಡೆಗಳನ್ನು ಕಟ್ಟಲಾಗಿದೆ ಅದನ್ನು ಕೆಡವಿ ದುಡಿಯುವ ಜನ ಒಂದಾಗುವ ಕಾಲ ಬರಲಿದೆ ಅದಕ್ಕಾಗಿ ಭಾರತ ಕಮ್ಯೂನಿಸ್ಟ್ ಪಕ್ಷವನ್ನು ಬಲಿಷ್ಟವಾಗಿ ಸಂಘಟಿಸಲು ಮುಂದಾಗಬೇಕೆಂದು ಪಕ್ಷದ ಸದಸ್ಯರಿಗೆ ಸಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಡಾ. ಮಹೇಶಕುಮಾರ ರಾಠೋಡ ಕರೆ ನೀಡಿದರು.

ಇಂದು ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಸಿ.ಪಿ.ಐ ನ 98 ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಮಟ್ಟದ ಪದಾಧಿಕಾರಿಗಳು, ತಾಲೂಕು ಕಾರ್ಯದರ್ಶಿಗಳು, ಪದಾಧಿಕಾರಿಗಳು, ಶಾಖಾ ಕಾರ್ಯದರ್ಶಿಗಳ ಮತ್ತು ಸಾಮೂಹಿಕ ಸಂಘಟನೆಗಳ ಮುಖಂಡರನ್ನುದ್ದೇಶಿಸಿ ಮಾತನಾಡಿದ ಡಾ. ರಾಠೋಡ ಅವರು ಕಮ್ಯೂನಿಸ್ಟ್ ಪಕ್ಷವನ್ನು ಬೆಳೆಸುವದು ಎಂದರೆ ದುಡಿಯುವ ಜನ ತಮ್ಮ ಹಕ್ಕನ್ನು ಕೇಳಲು ಮುಂದಾಗುವದು ಎಂದು ಅರ್ಥ, ಹಾಗಾಗಿ ಭಾರತ ಕಮ್ಯೂನಿಸ್ಟ್ ಪಕ್ಚವನ್ನು ಕಟ್ಟಿ ಬೆಳೆಸಿದರೆ ಜನ ತಮ್ಮ ಸಮಸ್ಯೆಗಳಿಂದ ಹೊರ ಬರಲು ಸಾಧ್ಯವಾಗುತ್ತದೆ. ದುಡಿಯುವ ಜನ ತಮ್ಮ ದುಡಿಮೆಯ ಪಾಲನ್ನು ಕೇಳಲು ದುಡಿಯುವ ವರ್ಗದ ದ್ವನಿಯಾಗಿ ಕಮ್ಯೂನಿಸ್ಟ್ ಪಕ್ಷವನ್ನು ಬೆಳೆಸಬೇಕು, ಇದಕ್ಕೆ ನಾಯಕತ್ವವನ್ನು ಕೂಡ ದುಡಿಯುವ ವರ್ಗವೇ ಕೊಡಬೇಕಾಗುತ್ತದೆ ಹಾಗಾಗಿ ಸಿ.ಪಿ.ಐ.ಕಟ್ಟುವದೆಂದರೆ ಜನ ತಮ್ಮ ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುವದು, ಹಾಗಾಗಿ ಪ್ರತಿ ಹಳ್ಳಿಗಳಲ್ಲೂ ಭಾರತ ಕಮ್ಯೂನಿಸ್ಟ್ ಪಕ್ಷದ ಶಾಖೆಗಳನ್ನು ಪ್ರಾರಂಭಿಸಲು ಪಣ ತೊಡಬೇಕೆಂದು ಆ ಮೂಲಕ ದುಡಿಯುವ ವರ್ಗದ ಅಧಿಕಾರ ಬರುವಂತೆ ಮಾಡಬೇಕೆಂದು ಕರೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಮಂಡಳಿ ಸದಸ್ಯ ಹಾಗೂ ಅಖಿಲ ಭಾರತ ಕಿಸಾನ ಸಭಾದ ರಾಜ್ಯ ಕಾರ್ಯಾದ್ಯಕ್ಷರಾದ ಕಾಂ. ಮೌಲಾ ಮುಲ್ಲಾ ಮಾತನಾಡಿ ರೈತರು ಅತ್ಯಂತ ಸಂಕಷ್ಟದಲ್ಲಿದ್ದು, ಸರಕಾರಗಳು ರೈತರ ಸಹಾಯಕ್ಕೆ ಬರುವದರ ಬದಲಿಕೆ ಕನಿಷ್ಟ ಬೆಂಬಲ ಬೆಲೆಯನ್ನೂ ಘೋಸಿಸದೇ ರೈತರಿಗೆ ಮಾರಕವಾಗುವಂತಹ 3 ಕರಾಳ ಕಾನೂನುಗಳನ್ನು ತಂದು, ದೇಶದ ರೈತರ ನಿರಂತರ ಹೋರಾಟದ ಪ್ರತಿಫ¯ವಾಗಿ ಕೇಂದ್ರ ಸರಕಾರ ಆ ಕರಾಳ ಕಾನೂನುಗಳನ್ನು ವಾಪಸ್ ಪಡೆದರೂ ರಾಜ್ಯ ಸರಕಾರ ಮಾತ್ರ ಅವುಗಳನ್ನು ವಾಪಸ್ ಪಡೆಯದೇ ಮುಂದುವರೆಸಿದೆ, ಆ ಮೂಲಕ ರಾಜ್ಯದ ರೈತರಿಗೆ ಮೋಸ ಮಾಡಿದೆ. ಅದರ ಪ್ರತಿಫಲವಾಗಿ ರೈತರಿಗೆ ರಾಜ್ಯದ ರೈತರು ಖಾಸಗೀ ದಲ್ಲಾಳಿಗಳ ಬಲೆಗೆ ಬಿದ್ದಿದ್ದು ಸಂಕಷ್ಟಕ್ಕೆ ಒಳಗಾಗಿ ತಮ್ಮ ಆದಾಯವನ್ನು ಕಳೆದುಕೊಳ್ಳುತ್ತಿದ್ದಾರೆ.

ಪ್ರಸ್ತುತ ನಮ್ಮ ಬಾಗದ ರೈತರು ತೊಗರಿಗೆ ಬಂದ ನೆಟೆ ರೋಗದಿಂದಾಗಿ ಸಂಪೂರ್ಣ ತೊಗರಿಯನ್ನು ಕಳೆದುಕೊಂಡಿದ್ದು ರೈತರ ನೆರವಿಗೆ ಬರಬೇಕಾದ ಸರ್ಕಾರ ಅಧಿವೇಶನದಲ್ಲಿ ರೈತರಿಗೆ ಪರಿಹಾರವನ್ನೂ ಘೋಸಿಸದೇ ನೆಪಮಾತ್ರಕ್ಕೆ ಅಧಿವೇಶನವನ್ನು ನಡೆಸಿದ್ದು ಖಂಡನೀಯ ಇಂತಹ ರೈತ ವಿರೋಧಿ ಸರ್ಕಾರಗಳನ್ನು ಕಿತ್ತೆಸೆಯಬೇಕು ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಪಕ್ಷದ ಹಿರಿಯ ಸಂಗಾತಿ ಪದ್ಮಾಕರ್ ಜಾನೀಬ್ ಅವರು ದ್ವಜಾರೋಹಣ ಮಾಡಿದರು ಹಾಗೂ ಸ್ಪೂರ್ತಿದಾಯಕ ಘೋಷಣೆಗಳನ್ನು ಕೊಡುವ ಮೂಲಕ ಎಲ್ಲರೂ ಉತ್ಸಾಹಿತರಾಗುವಂತೆ ಮಾಡಿದರು.

ಕಾರ್ಯಕ್ರಮದಲ್ಲಿ ಬಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಸಹಕಾರ್ಯದರ್ಶಿ ಪ್ರಭುದೇವ ಯಳಸಂಗಿ, ಮತ್ತು ಪದ್ಮಾವತಿ ಮಾಲಿಪಾಟೀಲ, ಎ.ಐ.ಕೆ.ಎಸ್.ನ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ,  ಎ.ಐ.ಟಿ.ಯು.ಸಿ ಯ ನಾಯಕಿ ಕಲ್ಪನಾ, ಶಿವಲಿಂಗಮ್ಮ ಲೆಂಗಟೇಕರ್, ಯಾದಗೀರ ಜಿಲ್ಲಾ ನಾಯಕರಾದ ದೇವೆಂದ್ರಪ್ಪ ಪತ್ತಾರ, ಇಪ್ಟಾ ಜಿಲ್ಲಾ ಸಂಚಾಲಕ ದರ್ಮರಾಜ ಕೊರಳ್ಳಿ ಕ್ರಾಂತಿಗೀತೆಗಳನ್ನು ಹಾಡಿದರು.

ಆಳಂದ ತಾಲೂಕು ಕಾರ್ಯದರ್ಶಿ ಲಕ್ಷಿಂಬಾಯಿ ಸರಸಂಬಾ, ಜೇವರಗಿ ಕಾರ್ಯದರ್ಶಿ ಮಲ್ಲಿಕಾರ್ಜುನ್ ದೊಡ್ಮನಿ, ಯಡ್ರಾಮಿ ತಾಲೂಕು ಕಾರ್ಯದರ್ಶಿ ಭೀಮಾರಾಯ ಮುದಬಸ್ಸಪ್ಪಗೋಳ, ಸಹ ಕಾರ್ಯದರ್ಶಿ ಅಬ್ದುಲ್ ರಸೀದ್, ಕಲಬುರಗಿ ತಾಲೂಕು ಕಾರ್ಯದರ್ಶಿ ಶರಣಬಸ್ಸಪ್ಪ ಗಣಜಲಖೇಡ, ಸಹಕಾರ್ಯದರ್ಶಿ ಶರಣಮ್ಮ ಪೂಜಾರಿ, ಶಹಾಪೂರ ತಾಲೂಕು ಕಾರ್ಯದರ್ಶಿ ಭೀಮರಾಯ ಕದರಾಪೂರ್, ಆರ್.ಎಂ.ಜಾಧವ, ಸುರಪುರ ತಾಲೂಕು ಕಾರ್ಯದರ್ಶಿ ತಿಮ್ಮಯ್ಯ, ಸೇಡಂ ತಾಲೂಕು ನಾಯಕಿ ಜ್ಯೋತಿ, ಅಫಝಲಪೂರ ಮುಖಂಡರಾದ ಮಹಿಬೂಬ ಪಾಷಾ, ಶಹಾಬಾದ, ಕಮಲಾಪೂರ, ಚಿಂಚೋಳಿ, ಕಾಳಗಿ ಮುಂತಾದ ಕಡೆಗಳಿಂದ ಬಂದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು. ಇದಲ್ಲದೇ ಕಾರ್ಯಕ್ರಮದಲ್ಲಿ ವಿವಿಧ ಘಟಕಗಳಿಂದ ಬಂದ ಕಾರ್ಯದರ್ಶಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಆರಂಭದಲ್ಲಿ ಮಹಿಳಾ ನಾಯಕಿ ನಾಗಮ್ಮ ಪಾಟೀಲ್ ಸ್ವಾಗತಿಸಿದರು, ಸುಗುರಾ ಬಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here