ಕಲಬುರಗಿ : ಭಾರತದ ಮೊಟ್ಟ ಮೊದಲ ಶಿಕ್ಷಕಿ , ದೀನ ದಲಿತರ , ಹಿಂದುಳಿದವರ ತಾಯಿ ಸಾವಿತ್ರಿಬಾಯಿ ಫುಲೆ ಇಂತಹ ತಾಯಿ ಆ ಕಾಲದಲ್ಲಿಯೇ ಮಹಿಳೆಯರ ಸರ್ವಾಂಗೀಣ ಉದ್ಧಾರಕ್ಕಾಗಿ ಹೋರಾಡಿದಳು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ವಿಭಾಗದ ಉಪನ್ಯಾಸಕ ಡಾ. ಪ್ರಕಾಶ ಬಡಿಗೇರ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ವಿಭಾಗದಲ್ಲಿ ಸಾವಿತ್ರಿ ಬಾಯಿ ಫುಲೆ ಅವರ 192 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅವಳ ಹೋರಾಟವನ್ನು ತಡೆಯಲು ಸನಾತನವಾದಿಗಳು ವಿವಿಧ ಅಸ್ತ್ರಗಳನ್ನು ಪ್ರಯೋಗಿಸಿದರೂ ಅವಳು ಅದಕ್ಕೆ ಅಂಜಲಿಲ್ಲ, ಅಳುಕಲಿಲ್ಲ. ಭಾರತದ ಈಗಿನ ಮಹಿಳೆಯರು ಅಕ್ಷರವಂತರಾಗಿದ್ದಾರೆಂದರೆ ಅದು ಸಾವಿತ್ರಿಬಾಯಿ ನೀಡಿದ ಕೊಡುಗೆ. ಭಾರತದ ಇಂದಿನ ಅಕ್ಷರವಂತ ಮಹಿಳೆಯರೆಲ್ಲರೂ ಒಂದರ್ಥದಲ್ಲಿ ಸಾವಿತ್ರಿಬಾಯಿಯ ಮಕ್ಕಳೇ ಆಗಿದ್ದಾರೆ. ಫುಲೆ ದಂಪತಿಗಳು ಮಹಿಳೆಯರಲ್ಲಿ ಸ್ವಾಭಿಮಾನದ ಶಿಕ್ಷಣದ ಕ್ರಾಂತಿಯನ್ನು ಬಿತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದರು ಸ್ತ್ರೀ ಕುಲದ ವಿಮೋಚನೆಯಲ್ಲಿ ಸಾವಿತ್ರಿ ಬಾಯಿಫುಲೆ ಜೀವನದುದ್ದಕ್ಕೂ ಹಗಲಿರುಳು ಶ್ರಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಡಾ. ಶಶಿಧರ್ ಮೇಳಕುಂದಿ, ರತ್ನಕರ್ ಹೊಸಮನಿ, ಮಹಾಂತೇಶ ರೊಟ್ಟಿ, ವಿದ್ಯಾರ್ಥಿಗಳು ಇದ್ದರು. ತಾರಾಬಾಯಿ ನಿರೂಪಿಸಿದರು ವಿಜಯಲಕ್ಷ್ಮೀ ವಂದಿಸಿದರು.